ನಗರ ಯೋಜನಾ ಪ್ರಾಧಿಕಾರಕ್ಕೆ ಆನಂದ ಬಾಡಗಂಡಿಗೆ ನೀಡಬೇಕೆಂದು ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲು ಆಗ್ರಹ
ರಬಕವಿ-ಬನಹಟ್ಟಿ,ಮೇ23: ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಲು ಆಗ್ರಹಿಸಿ ಬನಹಟ್ಟಿ ಕುರುಹಿನಶೆಟ್ಟಿ ಸಮಾಜದ ಆನಂದ ಬಾಡಗಂಡಿ ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಆನಂದ ಬಾಡಗಂಡಿ ಮಾತನಾಡಿ, ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಿದ್ದು, ಅದೇ ರೀತಿ ಪಕ್ಷಕ್ಕೆ ಮತ್ತಷ್ಟು ಕೆಲಸ ಮಾಡುವ ನಿಟ್ಟಿನಲ್ಲಿ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸ್ಥಾನ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸುರೇಶ ವಂಟಗೊಡಿ, ಶಂಕರ ಮಟ್ಟಿಕಲ್ಲಿ, ಮಾನಿಂಗ ಹಾಸಿಲಕರ, ಮಹಾದೇವ ಗಿಡದಾನಪ್ಪಗೋಳ, ಈರಣ್ಣ ಚಿಂಚಖಂಡಿ, ಪ್ರಕಾಶ ಆಸಂಗಿ ಸೇರಿದಂತೆ ಅನೇಕರು ಇದ್ದರು.
Social Plugin