ಬಹುಭಾಷಾ ತಾರೆ ಪ್ರಣೀತಾ ಸುಭಾಷ್ ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬಹುದಿನದ ಗೆಳೆಯನ‌‌ ಜೊತೆ ಸಪ್ತಪದಿ ತುಳಿದ ನಟಿ ಲಾಕ್ ಡೌನ್‌ನಲ್ಲಿ ಆಪ್ತವಯದಲ್ಲಿ ನಡೆದ ವಿವಾಹ ವೇಗಾ ಸಿಟಿ ಮಾಲ್ ಮಾಲೀಕರಾದ ನಿತಿನ್ ರಾಜ್ ಜೊತೆ ಹೊಸ ಜೀವನ ಆರಂಭಸಿದ  ನಟಿ ನಿನ್ನೆ ಕನಕಪುರದ ರೆಸಾರ್ಟ್ ನಲ್ಲಿ ನಡೆದಿರೋ ಮದುವೆ.  ಲಾಕ್ ಡೌನ್ ಕಾರಣದಿಂದ‌ ಯಾರಿಗೂ ಆಹ್ವಾನವಿಲ್ಲದೆ ಮದುವೆ ಮಾಡಿಕೊಂಡ ನಟಿ.
 ಬೆಂಗಳೂರು ಹುಡುಗನ ಕೈ ಹಿಡಿದಿರುವ ಪ್ರಣಿತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಪೊರ್ಕಿ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟಿದ್ದರು. ಪ್ರಣಿತಾ ನಂತರದಲ್ಲಿ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಟಾಪ್ ಹೀರೋಗಳ ಜೊತೆ ನಟಿಸಿದ್ದಾರೆ.
ಬಟ್ಟಲು ಕಣ್ಣಿನ ಹುಡುಗಿ ಅಂತಾನೇ ಫೇಮಸ್ ಆದ ಪ್ರಣೀತಾ ಸದ್ಯ ತಮ್ಮ ಬಹು ಕಾಲದ ಸ್ನೇಹಿತ ನಿತಿನ್ ರಾಜ್​​ರೊಂದಿಗೆ ಸಂಪ್ರದಾಯ ಬದ್ಧರಾಗಿ ಮದುವೆಯಾಗಿದ್ದಾರೆ.
ಇನ್ನು ಈ ಬಗ್ಗೆ ಹೆಚ್ಚಿನ ವಿವರಕ್ಕಾಗಿ ಪ್ರಣೀತಾ ಸುಭಾಷ್​ರನ್ನು ಸಂಪರ್ಕಿಸಲು ಯತ್ನಿಸಿದಾಗ, ಸದ್ಯಕ್ಕೆ ಅವರು ಸಂಪರ್ಕದಲ್ಲಿ ಸಿಕ್ಕಿಲ್ಲ.