ಇದು ಯಡಿಯೂರಪ್ಪನವರ ವಿರೋಧಿ, ವಿಜಯೇಂದ್ರ ವಿರೋಧಿ ಅನ್ನೋವ ಮೊದಲು ದಯವಿಟ್ಟು ನಮ್ಮ ನೋವು ಅರ್ಥ ಮಾಡಿಕೊಳ್ಳಿ. ಹೋಟೇಲ್ ಒಳಗೆ ನುಗ್ಗಿ ಒಂದು ಟೇಬಲ್ ಗೆ ಒಂದೊಂದೇ ಕುರ್ಚಿ ಇಡಬೇಕು ಎಂದು ಫಾರ್ಮನೂ ಹೊರಡಿಸೋ ಆರೋಗ್ಯ ಇಲಾಖೆ, ಬಿಬಿಎಂಪಿ ಇದಕ್ಕೇನೂ ಉತ್ರ ಕೊಡ್ತೀರಾ?? ನಾಲ್ಕ್ ಜನ ಹೋಟೇಲ್ ನಲ್ಲಿ ಇದ್ರೇ ಬಿಬಿಎಂಪಿ ಕಣ್ಣು ಕುಕ್ಕುತ್ತದೆ. ಹೋಟೇಲ್ ಗೆ ಬೀಗ ಜಡಿತೀರಾ !!! ಇಲ್ಲೇನೂ ವಾಕ್ಸಿನ್ ಉತ್ಸವ ನಡೀತಾ ಇದೆಯಾ? 
ಮಾನ್ಯ ಮುಖ್ಯಮಂತ್ರಿ Chief Minister of Karnataka  BS Yediyurappa  ನವರೇ... ಕಾನೂನು ಎಲ್ಲರಿಗೂ ಒಂದೇ ಮಾಡಿ. ನಿಮ್ಮ ಗೌರವ ಹೆಚ್ಚಿಸಿಕೊಳ್ಳಿ.
ಮಸ್ಕಿಯಲ್ಲಿ ಎಲ್ಲೆಡೆ ರಾರಾಜಿಸಿದ ಬಿಜೆಪಿ ಧ್ವಜ. ಇಂದು ಮಸ್ಕಿ ಉಪಚುನಾವಣಾ ಪ್ರಚಾರಕ್ಕೆ  ಆಗಮಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳಾದ ಶ್ರೀ ಅರುಣ್ ಸಿಂಗ್ ಜೀ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಟಿ. ರವಿಯವರಿಗೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರಿಂದ ಭರ್ಜರಿ ಸ್ವಾಗತ ಕೋರಲಾಯಿತು.