ಸಾಮಾಜಿಕ ಸಮಾನತೆಯ ಹರಿಕಾರ,ಶಿಕ್ಷಣವನ್ನು ಸಾರ್ವತ್ರಿಕ ಗೊಳಿಸದ,ಮೂಢನಂಬಿಕೆ,ಕಂದಾಚಾರವನ್ನು ತೋಲಗಿಸಿದ ಮಹಾತ್ಮಾ ಜೋತಿಭಾ ಫುಲೆಯವರ 194 ನೇ ಜಯಂತಿಯನ್ನು ಇಂದು ತೆರದಾದಲ್ಲಿ ಆಚರಿಸಲಾಯಿತು.
ಮಹಾತ್ಮಾಫುಲೆಯವರ ಹಾಗೂ ಭಾರತದ ಮೊದಲಿ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಬಾವಚಿತ್ರಗಳಿಗೆ ಹಿರೇಮಠದ ಪರಮಪೂಜ್ಯ ಶ್ರೀ ಬಾಲಗಂಗಾಧರ ಮರಿದೇವರು ಪೂಜೆ ನೆರವೇರಿಸಿದರು.
ಇದೆ ಸಂದರ್ಭದಲ್ಲಿ ಪುರಾಣಿಕ ಪ್ಲಾಟಿನಲ್ಲಿ ಜ್ಯೋತಿಬಾ ಫುಲೆಯವರ ಉದ್ಯಾನವನಕ್ಕೆ ಅಡಿಗಲ್ಲು ಪೂಜೆ ಶ್ರೀಗಳಿಂದ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಮಾಳಿ ಸಮಾಜದ ಪ್ರಮುಖರಾದ ಶ್ರೀ ತುಳಜಪ್ಪ ಅಥಣಿ,ದಾನಪ್ಪಾ ದೇಶತೋಟ,ನಾಗಪ್ಪ ಪುರಾಣಿಕ,ಗುರುಪಾದ ಮಾಲಗಾವಿ, ಪರಪ್ಪ ಯಾದವನ್ನವರ,ಬಸವರಾಜ ಬಾಳಿಕಾಯಿ,ರಾಜು ಹೊಸಮನಿ,ಬಸವರಾಜ ನಿರವಾಣಿ,ಪ್ರಭು ಬಾಗಿ,ಸದಾಶಿವ ಹೊಸಮನಿ, ರಮೇಶ ಮುಖರಿ,ಯುವಕ ಸಂಘದ ಅಧ್ಯಕ್ಷರಾದ ಸಂಜು ಹೊಸಮನಿ,ಪ್ರಭು ಮಾಳಿ,ಪ್ರಕಾಶ ಕೌಜಲಗಿ,ಹನಮಂತ ಅಂತ್ಯಳ,ಹನಮಂತ ಹೊಸಮನಿ ಮುಂತಾದವರು ಭಾಗವಹಿಸಿದ್ದರು.

Social Plugin