ವರದಿ : ವಿಜಯ ವಾಜಂತ್ರಿ
ತೇರದಾಳದ ಶ್ರೀ ಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಆಶ್ರಮದಲ್ಲಿ ಏಳು ದಿನಗಳವರೆಗೆ ಪ್ರವಚನ ನೀಡಿದ ರಬಕವಿ ಶ್ರೀಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಸ್ವಾಮಿಗಳನ್ನು ಈರಪ್ಪ ಯಾದವಾಡ ಸನ್ಮಾನಿಸಿದರು.
ತೇರದಾಳದಲ್ಲಿ ಪ್ರವಚನ ಮಹಾಮಂಗಲ
ಬ್ರಹ್ಮಾನಂದ ಶಿವಯೋಗಿಗಳ ಜೀವನ ಅರಿಯಬೇಕು
ತೇರದಾಳ : ಪ್ರವಚನ ಆಲಿಸುವುದು, ಪೂಜೆ ಪುನಸ್ಕಾರಗಳನ್ನು ಮಾಡುವುದು, ಲಿಂಗದೀಕ್ಷೆಯನ್ನು ಪಡೆದುಕೊಳ್ಳುವುದು, ಯಾವ ಗುರುವಿನಲ್ಲೂ ಬೇಧ ಭಾವ ಮಾಡಿಕೊಳ್ಳದೇ ಜೀವನದ ದಾರಿ ತೋರಿಸುವ ಗುರುವನ್ನು ನಂಬಿ ಮುನ್ನಡೆಯುವುದು ಅವಶ್ಯವೆಂದು ರಬಕವಿ ಗುರುದೇವ ಬ್ರಹ್ಮಾನಂದ ಶಿವಯೋಗಿಗಳವರ ಆಶ್ರಮದ ಶ್ರೀಗುರುಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ತೇರದಾಳದ ಶ್ರೀ ಗುರುದೇವ ಬ್ರಹ್ಮಾನಂದ ಶಿವಯೋಗಿಗಳ ಆಶ್ರಮದಲ್ಲಿ ಏಳು ದಿನಗಳವರೆಗೆ ಪ್ರವಚನ ಮಹಾಮಂಗಲ ಸಮಮಾರಂಭದ ಸಾನಿಧ್ಯ ವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಲ್ಲರೂ ಎಲ್ಲರನ್ನೂ ಪ್ರೀತಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕೆಂಬ ಸಂದೇಶವನ್ನು ಬ್ರಹ್ಮಾನಂದ ಶಿವಯೋಗಿಗಳು ನೀಡಿದ್ದಾರೆ ಎಂದರು.
ಚಿಕ್ಕೂಡ ಗ್ರಾಮದ ಶ್ರೀ ಓಂಕಾರೇಶ್ವರ ಸ್ವಾಮಿಗಳು ಮಾತನಾಡಿ ಶರಣರು ನುಡಿದಂತೆ ನಡೆದರು. ಮನುಷ್ಯನ ಮನಸ್ಸು ಬದಲಾಗುವಂತೆ ನಾವು ಮಾತನಾಡಬೇಕು ಎಂದರು.
ಕರ್ನಾಟಕ ಜಾನಪದ ಪರಿಷತ್ತಿನ ರಬಕವಿ-ಬನಹಟ್ಟಿ ತಾಲೂಕಾ ಘಟಕದ ಅಧ್ಯಕ್ಷ ಮ.ಕೃ.ಮೇಗಾಡಿ ಗುರುದೇವ ಬ್ರಹ್ಮಾನಂದ ಶಿವಯೋಗಿಗಳ ನಾಮಸ್ಮರಣೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಪರಮಾನಂದವಿದೆ ಎಂದರು. ಗೋಲಬಾಂವಿಯ ಶಾಂತಯ್ಯ ಸ್ವಾಮಿಗಳು ವೇದಘೋಷ ನಡೆಸಿಕೊಟ್ಟರು.
ವಿಜಯ ಮಾಳಿ, ಉಮೇಶ ರಾವಳ, ಸತ್ಯಕ್ಕ ಮುಕುಂದ, ಸುಭಾಸ ತಿಕೋಟಿ ಇನ್ನಿತರರು ಮಾತನಾಡಿದರು.
ಶಿವಾನುಭವ ಸಂಘ, ಅಕ್ಕನ ಬಳಗ ಸೇರಿದಂತೆ ಭಜನಾ ಕಲಾವಿದರಾದ ಪರಪ್ಪ ಮೇಗಾಡಿ, ಸತ್ಯಪ್ಪ ದಾಸರ ಭಕ್ತಿಗೀತೆಗಳನ್ನು ಹಾಡಿದರು. ಈರಪ್ಪ ಯಾದವಾಡ ಸ್ವಾಗತಿಸಿದರು. ಅಪ್ಪಾಸಾಬ ಹಳ್ಯಾಳ ನಿರೂಪಿಸಿದರು. ಪರಪ್ಪ ಖವಾಸಿ ವಂದಿಸಿದರು.

Social Plugin