ವರದಿ : ವಿಜಯ ವಾಜಂತ್ರಿ
ತೇರದಾಳ ಪುರಸಭೆ ಹೆಸರಿನಲ್ಲಿ ನಕಲಿ ಸೀಲ್ ಹಾಗೂ ನಕಲಿ ಚಲನ್‍ಗಳನ್ನು ತಯಾರಿಸಿ ಪುರಸಭೆಗೆ ಲಕ್ಷಾಂತರ ರೂ. ಪಂಗನಾಮ ಹಾಕಿದ ರಮೇಶ ಗಾಡಿವಡ್ಡರ ಈತನ ಮೇಲೆ ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಾಧಿಕಾರಿಗೆ ನಾಗರಿಕರ ಪರವಾಗಿ ಮನವಿ ಸಲ್ಲಿಸಿದರು.
ಪುರಸಭೆ ಹೆಸರಿನಲ್ಲಿ ನಕಲಿ ಸೀಲ್ ಹಾಗೂ ಚಲನ್‍ಗಳನ್ನು ತಯಾರಿಸಿ ಪುರಸಭೆಗೆ ಲಕ್ಷಾಂತರ ರೂ. ಪಂಗನಾಮ
ತೇರದಾಳ : ಪಟ್ಟಣದ ಪುರಸಭೆ ಹೆಸರಿನಲ್ಲಿ ನಕಲಿ ಸೀಲ್ ಹಾಗೂ ನಕಲಿ ಚಲನ್‍ಗಳನ್ನು ತಯಾರಿಸಿ ಪುರಸಭೆಗೆ ಲಕ್ಷಾಂತರ ರೂ. ಪಂಗನಾಮ ಹಾಕಿದ ರಮೇಶ ಅಣ್ಣಪ್ಪ ಗಾಡಿವಡ್ಡರ ಈತನ ಮೇಲೆ ಕೂಡಲೇ ಕಾನೂನು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರಿಗೆ ಪಟ್ಟಣದ ನಾಗರಿಕರ ಪರವಾಗಿ ಮನವಿ ಸಲ್ಲಿಸಿದರು.
ರಮೇಶ ಅಣ್ಣಪ್ಪ ಗಾಡಿವಡ್ಡರ ಖಾಸಗಿ ವ್ಯಕ್ತಿಯಾದ ಈತನು ಪುರಸಭೆ ಬರಬೇಕಾಗಿದ್ದ ಲಕ್ಷಾಂತರ ರೂ.ಗಳಷ್ಟು ತೆರಿಗೆ ಹಣವನ್ನು ನಕಲಿ ಸಿಕ್ಕಾ ಸೀಲ್ ತಯಾರಿಸಿಕೊಂಡು ನಕಲಿ ಚಲನಗಳಿಗೆ ಸಹಿ ಮಾಡಿ ಅವರಿಂದ ಹಣ ಪಡೆದುಕೊಂಡು ವೈಯಕ್ತಿಕವಾಗಿ ಹಣ ಬಳಸಿಕೊಂಡಿರುವುದು ಕಂಡು ಬಂದಿದೆ. ಈ ರೀತಿಯಾಗಿ ಇನ್ನು ಅನೇಕ ಜನರಿಗೆ ಪುರಸಭೆ ಅಧಿಕಾರಿಗಳ ನಕಲಿ ಸಹಿ ಮತ್ತು ಸಿಕ್ಕಾ ಹಾಕಿ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿ ಮೋಸ ಮಾಡಿರುವುದು ಕಂಡು ಬಂದಿದೆ. ಈ ರೀತಿಯಾದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿರುವ ಈತನ ಹಿಂದೆ ಇನ್ನೂ ಹಲವಾರು ಜನರ ಕೈವಾಡ ಇರಬಹುದು. ಈ ಕೃತ್ಯ ವೆಸಗಿರುವ ರಮೇಶ ಅಣ್ಣಪ್ಪ ಗಾಡಿವಡ್ಡರ ಇತನು ಪುರಸಭೆಗೆ ಜಮಾ ಆಗಬೇಕಾದ ತೆರಿಗೆ ಹಣವನ್ನು ಇನ್ನೂ ಸಾಕಷ್ಟು ಜನರಿಂದ ಪಡೆದು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಸೂಕ್ತ ತನಿಕೆ ಮಾಡಿ ದುರ್ಬಳಕೆ ಮಾಡಿಕೊಂಡಿರುವ ಹಣವನ್ನು ಪುರಸಭೆಗೆ ಮರಳಿ ಸಂದಾಯ ಮಾಡಿಕೊಳ್ಳಬೇಕು ಹಾಗೂ ಇತನ ಮೇಲೆ ಕೂಡಲೇ ಕಾನೂನು ಕ್ರಮ ತಗೆದುಕೊಳ್ಳಬೇಕು ಎಂದು ನಾಗರಿಕರ ಪರವಾಗಿ ಪುರಸಭೆ ಮಾಜಿ ಅಧ್ಯಕ್ಷ ಹನಮಂತ ರೋಡನ್ನವರ, ಗೌತಮ ರೋಡಕರ, ರಾಜೇಸಾಬ ನಗಾರ್ಜಿ, ಬಸವರಾಜ ಬಾಳಿಕಾಯಿ, ಪಿ.ಎಸ್. ಮಾಸ್ತಿ, ಶಿವಾನಂದ ನಡುವಿನಕೇರಿ, ಕೃಷ್ಣಾ ದೊಡಮನಿ ಸೇರಿದಂತೆ ಇತರರು ಇದ್ದರು.
ಈರಣ್ಣ ದಡ್ಡಿ ಪುರಸಭೆ ಮುಖ್ಯಾಧಿಕಾರಿ : ಈ ಕುರಿತು ವಿಷಯ ನಿನ್ನೆಯ ದಿನವೇ ನಮಗೆ ಗೊತ್ತಾಗಿದ್ದು, ನಕಲಿ ಚಲನಗಳು ಎಷ್ಟು ಇವೆ ಎಂದು ಈಗಾಗಲೇ ಐಸಿಐಸಿಐ ಬ್ಯಾಂಕಿಗೆ ಒಂದು ಪತ್ರವನ್ನು ಬರೆಯಲಾಗಿದೆ. ಅವರು ಕೊಟ್ಟ ತಕ್ಷಣ ಆ ವ್ಯಕ್ತಿಯ ಮೇಲೆ ಕಾನೂನು ಕ್ರಮಕ್ಕೆ ಪೋಲಿಸ್ ಠಾಣೆಗೆ ದೂರು ಕೊಡಲಾಗುವುದು.

Social Plugin