*ಶಾಸಕರಿಂದ ಕೊರೊನಾ ಜಾಗೃತಿ ರ‍್ಯಾಲಿ*

ವರದಿ:ಮಲ್ಲಿಕಾರ್ಜುನತುಂಗಳ
ಮುಖ್ಯವರದಿಗಾರರು-ಬಾಗಲಕೋಟೆ

ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾದಿಂದ ಮುಕ್ತರಾಗುವಂತೆ ತೇರದಾಳ ಶಾಸಕ ಸಿದ್ದು ಸವದಿ ರಸ್ತೆಗಿಳಿದು ಜನರಿಗೆ ಕೊರೊನಾ ಜಾಗೃತಿ ಮೂಡಿಸಿದ್ದಾರೆ.
ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಿದ್ದು ಸವದಿ ಖುದ್ದು ತೇರದಾಳ ವಿಧಾನಸಭಾ ಕ್ಷೇತ್ರಾದ್ಯಂತ ಮೈಕ್ ಹಿಡಿದು ಕಾರ್ ಮೇಲೆ ಏರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಿ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಿಂದ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಯಾರೂ ಕೂಡ ನಿರ್ಲಕ್ಷ್ಯ ವಹಿಸುವದು ಬೇಡವೆಂದು ಜನರಲ್ಲಿ ಮನವಿ ಮಾಡಿದರು.
ಶಾಸಕರಿಗೆ ತಹಶೀಲ್ದಾರ ಸಂಜಯ ಇಂಗಳೆ, ಸಿಪಿಐ ಜೆ. ಕರುಣೇಶಗೌಡ, ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ, ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ ಆರೋಗ್ಯ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರು ಕೊರೊನಾ ಜಾಗೃತಿ ಮೂಡಿಸಲು ಸಾಥ್ ನೀಡಿದರು.
`ನೇಕಾರ ಹಾಗು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಯಾವದೇ ತೊಂದರೆಯಿಲ್ಲ. ನಿತ್ಯ ಕಾಯಕದಲ್ಲಿ ತೊಡಗಿ. ಮದುವೆ ಕಾರ್ಯದಲ್ಲಿ ೫೦ ಜನ ಹಾಗು ಅಂತ್ಯ ಸಂಸ್ಕಾರದಲ್ಲಿ ಐವರಿಗೆ ಮಾತ್ರ ಅವಕಾಶವಿದ್ದು, ಸರ್ಕಾರದ ನಿಯಮ ಪಾಲಿಸಿ ಎಂದು ಸಿದ್ದು ಸವದಿ ತಿಳಿಸಿದರು.