ವರದಿ : ವಿಜಯ ವಾಜಂತ್ರಿ

ತೇರದಾಳದ ಅಂಬೇಡ್ಕರ ಸರ್ಕಲ್‍ದಲ್ಲಿ ಶಾಸಕ ಸಿದ್ದು ಸವದಿ ಹಾಗೂ ಅಧಿಕಾರಿಗಳು ಕೊರೊನಾ ವೈರಾಣು ಕುರಿತು ಜಾಗೃತೆ ಮೂಡಿಸಿದರು.ತೇರದಾಳದ ಅಂಬೇಡ್ಕರ ಸರ್ಕಲ್‍ದಲ್ಲಿ ಶಾಸಕ ಸಿದ್ದು ಸವದಿ ಹಾಗೂ ಅಧಿಕಾರಿಗಳು ಕೊರೊನಾ ವೈರಾಣು ಕುರಿತು ಜಾಗೃತೆ ಮೂಡಿಸಿದರು.

ತೇರದಾಳ : ನಾಳೆಯಿಂದ ಕೊರೊನಾ ನಿರ್ಮೂಲನಾ ಸಲುವಾಗಿ ಸರಕಾರ ಎರಡು ವಾರಗಳ ಕಾಲ ಕಪ್ರ್ಯೂ ಜಾರಿಗೆ ತಂದಿದೆ. ಎಲ್ಲರೂ ಮನೆಯಲ್ಲಿಯೇ ಇದ್ದು ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕೊರೊನಾ ವೈರಾಣು ಹರಡದಂತೆ ದಿಗ್ಭಂದನ ಹಾಕಲು ಸರಕಾರದ ಜೊತೆಗೆ ಕೈ ಜೋಡಿಸಬೇಕು ಎಂದು ಶಾಸಕ ಸಿದ್ದು ಸವದಿ ತಮ್ಮ ವಾಹನದಲ್ಲಿ ಸಂಚರಿಸಿವ ಮೂಲಕ ಜಾಗೃತಿ ಮೂಡಿಸಿದರು. 
   ಮಂಗಳವಾರ ಸಾಯಂಕಾಲ ಪಟ್ಟಣದಲ್ಲಿ ತಮ್ಮ ವಾಹನದ ಮೂಲಕ ಪ್ರಮುಖ ಗಲ್ಲಿಗಳಲ್ಲಿ ಸಂಚರಿಸುವ ಮೂಲಕ ಜನರಿಗೆ ಧ್ವನಿ ವರ್ಧಕ ಮೂಲಕ ತಿಳುವಳಿಕೆ ಹೇಳುತ್ತಿದ್ದರು. ನಾಳೆಯಿಂದ ಎರಡು ವಾರಗಳ ಕಾಲ ಕಪ್ರ್ಯೂ ಜಾರಿಯಲ್ಲಿದೆ. ಮುಂಜಾನೆ 10ಗಂಟೆಯಿಂದ ಕಪ್ರ್ಯೂ ಜಾರಿಯಾಗಲಿದೆ. ಬೆಳಿಗ್ಗೆ 6ಗಂಟೆಯಿಂದ 10ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ಇದೆ. 10ಗಂಟೆಯಿಂದ ಅಂಗಡಿ ಮುಂಗಟ್ಟುಗಳು ಸೇರಿದಂತೆ ಎಲ್ಲವೂ ಸ್ತಬ್ಧವಾಗುತ್ತದೆ. ಅನಾವಶ್ಯಕವಾಗಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ವಾಹನವನ್ನು ಸೀಜ್ ಮಾಡಲಾಗುವುದು. ಒಬ್ಬರಿಂದ ಒಬ್ಬರಿಗೆ ಹರಡುವ ಈ ಕೊರೊನಾ ವೈರಸ್‍ನ ಚೈನ್ ತಡೆಯಲು ಕಪ್ರ್ಯೂ ಜಾರಿಗೆ ತರಲಾಗಿದೆ. ಪ್ರತಿ ದಿನ 30ಸಾವಿರ ಜನರಿಗೆ ಕೊರೊನಾ ವೈರಾಣು ಅಂಟಿಕೊಳ್ಳುತ್ತಿದೆ. ದಿನಾಲು ಸುಮಾರು 250ಜನರು ಕೊರೊನಾಗೆ ಬಲಿಯಾಗುತ್ತಿದ್ದಾರೆ. ತಜ್ಞರ ಸಲಹೆ ಮೇರೆಗೆ ಎರಡು ವಾರಗಳ ಕಪ್ರ್ಯೂ ಜಾರಿಗೆ ತರಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯನ್ನು ಹಾಕುತ್ತಿದ್ದಾರೆ ಎಲ್ಲರೂ ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳಿ. ನಮ್ಮ ಕ್ಷೇತ್ರದಲ್ಲಿ ಸುಮಾರು ಎರಡುವರೆ ಸಾವಿರ ಜನರು ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಹೋಗಿ ತಮ್ಮ ಹೆಸರನ್ನು ನೊಂದಾಯಿಸಿ ಲಸಿಕೆಯನ್ನು ಪಡೆಯಬೇಕು. ಎರಡನೆಯ ಅಲೆಗಿಂತ ಮೂರನೆಯ ಅಲೆ ಭಯಂಕರವಾಗಿದೆ ತಪ್ಪದೇ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಿ. ಈ ವೈರಾಣು ಹರಡದಂತೆ ತಾವೆಲ್ಲರೂ ಮನೆಯಲ್ಲಿಯೇ ಇದ್ದು, ರೋಗ ಬರದಂತೆ ತಡೆಯಿರಿ ಎಂದು ಜಾಗೃತಿ ಮೂಡಿಸಲು ನಾವೆಲ್ಲರೂ ಬಂದಿದ್ದೇವೆ.
   ಈ ಸಂದರ್ಭದಲ್ಲಿ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ಸಿಪಿಐ ಜೆ.ಕರುಣೇಶಗೌಡ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟೆ, ಪಿಎಸ್‍ಐ ವಿಜಯ ಕಾಂಬಳೆ, ಸದಾಶಿವ ಹೊಸಮನಿ, ರಮೇಶ ಧರೆನ್ನವರ, ವಿನಾಯಕ ಬಂಕಾಪೂರ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಆಕಾಶ ತೇಲಿ, ಸಚೀನ ಕೊಡತೆ ಸೇರಿದಂತೆ ಇನ್ನಿತರರು ಇದ್ದರು.