*ರಾಜಕೀಯ ದ್ವೇಷಕ್ಕೆ ರೈತರ ಮೇಲೆ ಕಿರುಕುಳ ಆರೋಪ*ವರದಿ: ಮಲ್ಲಿಕಾರ್ಜುನ ತುಂಗಳ
ಮುಖ್ಯ ವರದಿಗಾರರು -ಬಾಗಲಕೋಟೆ
ಬನಹಟ್ಟಿಯ ಲಕ್ಷ್ಮೀ ನಗರದಲ್ಲಿ ರೈತ ಸಂಘವನ್ನೇ ಗುರಿಯನ್ನಾಗಿಸಿಕೊಂಡು ರಸ್ತೆ ನೆಪದಲ್ಲಿ ಕಂಪೌಂಡ್ ನೆಲಸಮಗೊಳಿಸಿರುವದನ್ನು ತೀವ್ರವಾಗಿ ಖಂಡಿಸುತ್ತೇನೆಂದು ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಭೀಮಶಿ ಮಗದುಮ್ ತಿಳಿಸಿದರು.
ಕಳೆದ ವಾರ ಅತಿಕ್ರಮಣ ಜಾಗೆಗೆ ಸಂಬಂಧಿಸಿದ ಜಾಗೆಯನ್ನು ವಶಕ್ಕೆ ಪಡೆಯುವಲ್ಲಿ ನಗರಸಭೆ ಮುಂದಾಗಿತ್ತು. ಈ ಕುರಿತು ಭೂಮಾಪನಾ ಇಲಾಖೆಯಿಂದ ಅಳತೆ ಮಾಡಿಸಿದ ನಂತರ ಪ್ರದೇಶ ಉಳಿದಲ್ಲಿ ವಶಕ್ಕೆ ಪಡೆಯಿರಿ ಎಂದು ಹೇಳಿದರೂ, ರಾಜಕೀಯ ಒತ್ತಡದಿಂದ ರೈತರ ಮೇಲೆ ಕಿರುಕುಳ ನೀಡುವಲ್ಲಿ ನಗರಸಭೆ ಅಧಿಕಾರಿಗಳು ಕಾರಣರಾಗಿದ್ದಾರೆಂದು ಮಗದುಮ್ ಆರೋಪಿಸಿದರು.
ಮುಂದಿನ ದಿನಗಳಲ್ಲಿ ಎರಡು ಸಾವಿರಕ್ಕೂ ಅಧಿಕ ಶೇರುದಾರರನ್ನು ಹೊಂದಿರುವ ಸಹಕಾರಿ ಸಂಘದಿಂದ ಬೃಹತ್ ಹೋರಾಟ ನಡೆಸಲಾಗುವದೆಂದು ಮಗದುಮ್ ಸ್ಪಷ್ಟನೆ ನೀಡಿದರು.
_---------------------------------------------------------
ರಾಜಕುಮಾರ ನಂದರಗಿ
ರಬಕವಿ-ಬನಹಟ್ಟಿ,ಏ೨೭: ಜವಳಿ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ, ಬನಹಟ್ಟಿಯ ಲಕ್ಷಿö್ಮÃ ನಗದ ನಿವಾಸಿ ರಾಜಕುಮಾರ ನಂದರಗಿ(೯೨) ನಿಧನರಾದರು. ಅವರಿಗೆ ಇಬ್ಬರು ಪುತ್ರರು ಹಾಗು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಳಗವಿದೆ. ಮೃತರ ಮಕ್ಕಳಲ್ಲಿ ಕೆಎಚ್‌ಡಿಸಿ ನಿಗಮದ ನಿವೃತ್ತ ಉಪವ್ಯವಸ್ಥಾಪಕ ಸಂತೋಷಕುಮಾರ ನಂದರಗಿ ಒಬ್ಬರಾಗಿದ್ದಾರೆ.
Social Plugin