ವರದಿ : ವಿಜಯ ವಾಜಂತ್ರಿ

                      

ತೇರದಾಳ ಪಟ್ಟಣದ ಶ್ರೀಶೈಲ ಭ್ರಮರಾಂಭಾ ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಂಘದ ವತಿಯಿಂದ ಆಂದ್ರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ಸೇವೆ ಮಾಡುತ್ತಿರುವುದು. 

ಶ್ರೀಶೈಲಕ್ಕೆ ಬರುವ ಭಕ್ತರಿಗೆ ಅನ್ನಪ್ರಸಾದ ಸೇವೆ 

ತೇರದಾಳ : ಆಂದ್ರದ ಶ್ರೀಶೈಲದಲ್ಲಿ ತೇರದಾಳದ ಶ್ರೀಶೈಲ ಭ್ರಮರಾಂಭಾ ಮಲ್ಲಿಕಾರ್ಜುನ ಸ್ವಾಮಿ ಸೇವಾ ಸಂಘದ ವತಿಯಿಂದ ಆಂದ್ರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬರುವ ಸದ್ಭಕ್ತರಿಗೆ ಕಳೆದ ನಾಲ್ಕು ವರ್ಷಗಳಿಂದ ಸತತ ಅನ್ನಪ್ರಸಾದ ಸೇವೆ ಮಾಡುತ್ತಿದ್ದಾರೆ. 

   ಶ್ರೀಶೈಲದ ಬಸ್ ನಿಲ್ದಾಣದಲ್ಲಿ ಹಾಗೂ ಸಿದ್ರಾಮನಕೊಳ್ಳದ ಪಕ್ಕದಲ್ಲಿ ದಿನಾಲು ಬೆಳಿಗ್ಗೆ ಉಪಹಾರ ಹಾಗೂ ಮಧ್ಯಾನ ಮತ್ತು ರಾತ್ರಿ ಊಟದ ಸೇವೆಯನ್ನು ಮಾಡುತ್ತಿದ್ದಾರೆ. ಉಪಹಾರಕ್ಕಾಗಿ ಉಪಿಟ್ಟು, ಮಸಾಲಿ ಅನ್ನ. ಊಟಕ್ಕೆ ಒಂದು ತರದ ಸಿಹಿ ಹಾಗೂ ಅನ್ನ ಸಾರು ಕೊಡುತ್ತಿದ್ದಾರೆ. ಈ ಸೇವಾ ಸಂಘಕ್ಕೆ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದ ಸಮೀತಿಯವರು ನೀರು ಹಾಗೂ ವಿದ್ಯುತ್ತಿನ ವ್ಯವಸ್ಥೆಯನ್ನು ಮಾಡಿ ಸಹಕರಿಸಿದ್ದಾರೆ. ಈ ಸೇವಾ ವ್ಯವಸ್ಥೆಯು ಯುಗಾದಿ ಪಾಡ್ಯೆಯವರೆಗೆ ನಡೆಯುತ್ತದೆ ಎಂದು ಸಂಘದ ಮಹೇಶ ಕುಂಚಗನೂರ ಪತ್ರಿಕೆಗೆ ತಿಳಿಸಿದ್ದಾರೆ. ಹಾಗೂ ತೇರದಾಳದ ಈ ಸೇವಾ ಸಂಘದವರು ಕಳೆದ 18ವರ್ಷಗಳಿಂದ ದೇವಸ್ಥಾನದ ಗರ್ಭಗುಡಿಯಲ್ಲಿ ಸೇವೆ ಮಾಡುತ್ತಿದ್ದಾರೆ. ಈ ಸೇವಾ ಸಂಘದಲ್ಲಿ ಸುಮಾರು 150 ಜನರು ಸದ್ಭಕ್ರು ಇದ್ದಾರೆ ಎಂದು ಅವರು ತಿಳಿಸಿದರು.