ಬಸ್ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ*
ವರದಿ: ಮಲ್ಲಿಕಾರ್ಜುನ ತುಂಗಳ ಮುಖ್ಯ ವರದಿಗಾರರು ಬಾಗಲಕೋಟೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಆಂಭಿಸಿರುವದರಿಂದ ತಾಲೂಕಿನಾದ್ಯಂತ ಬಸ್‌ಗಳು ಸಂಪೂರ್ಣ ಸ್ಥಗಿತವಾಗಿವೆ.
ಹುಬ್ಬಳ್ಳಿ, ಸೊಲ್ಲಾಪುರ, ವಿಜಯಪುರ, ಪೂನಾ, ಸಾಂಗಲಿ, ಬೆಳಗಾವಿ ಸೇರಿದಂತೆ ವಿವಿಧೆಡೆಗಳಿಂದ ದೂರದ ಪ್ರಯಾಣ ವಾಹನಗಳು ಮಂಗಳವಾರ ಮಧ್ಯಾಹ್ನದಿಂದಲೇ ಬಂದ್ ಆಗಿದ್ದು, ಪ್ರಯಾಣಿಕರು ಬಸ್ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದರೆ, ಕೆಲವರು ಮನೆಗಳಿಗೆ ವಾಪಸ್ ತೆರಳಿರುವದು ಸಾಮಾನ್ಯವಾಗಿತ್ತು.
ಅಟೋ, ಟಂಟಂ ಹಾಗು ಖಾಸಗಿ ಮಿನಿ ಬಸ್‌ಗಳು ಹೆಚ್ಚಿನ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿವೆ.
ಊರುಗಳಿಗೆ ತೆರಳಲೇ ಬೇಕಾದವರು ಹೆಚ್ಚಿನ ಹಣ ತೆತ್ತು ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ.
ರಸ್ತೆಗಳಲ್ಲಿ ಖಾಸಗಿ ವಆಹನಗಳ ಸಂಚಾರ ಅಷ್ಟೊಂದು ಪ್ರಮಾಣದಲ್ಲಿಕಂಡು ಬಾರದಿರುವದರಿಂದ ರಸ್ತೆಗಳೆಲ್ಲವೂ ಬಿಕೋ ಎನ್ನುತ್ತಿದ್ದವು.
*ಪೊಲೀಸರಿಂದ ಸೇವೆ*
ಗೊತ್ತಿಲ್ಲದೇ ಬಸ್ ನಿಲ್ದಾಣದೊಳಗೆ ಪ್ರಯಾಣಿಕರು ಆಗಮಿಸುತ್ತಿರುವದನ್ನು ಗಮನಿಸಿ ಬಸ್ ಸಂಚಾರ ಬಂದ್ ಆಗಿದ್ದು, ಎಲ್ಲಿಗೆ ಹೋಗಬೇಕೆಂದು ಮಾಹಿತಿ ಪಡೆದು ಅಂಥವರನ್ನು ಆಯಾ ಊರುಗಳಿಗೆ ಖಾಸಗಿ ವಾಹನಗಳ ಮೂಲಕ ಕಳಿಸುತ್ತಿರುವಲ್ಲಿ ಪೊಲೀಸರು ಪ್ರಯಾಣಿಕರಿಗೆ ಸಹಾಯ ಮಾಡುತ್ತಿರುವದು ಕಂಡು ಬಂದಿತು.
Social Plugin