ವರದಿ : ವಿಜಯ ವಾಜಂತ್ರಿ   

ತೇರದಾಳದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವತಿಯಿಂದ ಕೊರೊನಾ ಸೋಂಕಿತ ಮೃತರನ್ನು ಅಂತ್ಯ ಸಂಸ್ಕಾರ ಮಾಡಲು ಅನುಮತಿ ನೀಡುವಂತೆ ಕೋರಿ ಸಂಘಟನೆಯವರು ಸರಕಾರಿ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿಯವರಿಗೆ ಮನವಿ ಸಲ್ಲಿಸಿದರು.ತೇರದಾಳದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವತಿಯಿಂದ ಕೊರೊನಾ ಸೋಂಕಿತ ಮೃತರನ್ನು ಅಂತ್ಯ ಸಂಸ್ಕಾರ ಮಾಡಲು ಅನುಮತಿ ನೀಡುವಂತೆ ಕೋರಿ ಸಂಘಟನೆಯವರು ಸರಕಾರಿ ವೈದ್ಯಾಧಿಕಾರಿ ಡಾ.ಸುದರ್ಶನ ನಿಡೋಣಿಯವರಿಗೆ ಮನವಿ ಸಲ್ಲಿಸಿದರು.

ಕೊರೊನಾ ಸೋಂಕಿತ ಮೃತರನ್ನು ಅಂತ್ಯ ಸಂಸ್ಕಾರಕ್ಕೆ ಮುಂದಾದ ಸಂಘಟನೆ

ತೇರದಾಳ : ಕೋವಿಡ್-19 ಸೊಂಕಿತ ವ್ಯಕ್ತಿಗಳು ಮೃತರಾದರೆ ಅವರ ಅಂತ್ಯ ಸಂಸ್ಕಾರ ಮಾಡಲು ಯಾರೂ ಮುಂದಾಗುವುದಿಲ್ಲ, ಅದಕ್ಕೆ ತೇರದಾಳ ಪಟ್ಟಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಾಗಲಕೋಟ ಸಂಘಟನೆಯ ತೇರದಾಳ ಶಾಖೆಯ ಯುವಕರು ಮುಂದಾಗಿದ್ದಾರೆ.

  ಈ ಸಂಘಟನೆಯು ಸರಕಾರದ ನಿಯಮಗಳ ಪ್ರಕಾರ ಸೋಂಕಿತರ ಅಂತ್ಯ ಸಂಸ್ಕಾರ ಮಾಡಲು ಹಾಗೂ ಆಯಾ ಧರ್ಮಗಳ ವಿಧಿ ವಿಧಾನಗಳನುಸಾರವಾಗಿ ಅಂತ್ಯ ಸಂಸ್ಕಾರ ಮಾಡಲು ಪಟ್ಟಣದಲ್ಲಿ ಸಂಘಟನೆಯು ಮುಂದಾಗಿದೆ. ಕೊರೊನಾ ಸೋಂಕಿತ ವ್ಯಕ್ತಿಗಳು ಮೃತರಾದರೆ ಯಾರೂ ಅವನನ್ನು ಮುಟ್ಟಲು ಮುಂದೆ ಬರುವುದಿಲ್ಲ. ಈ ಸಂಘಟನೆಯ ಸುಮಾರು ಹತ್ತು ಜನರನ್ನು ಒಳಗೊಂಡಿದೆ. ಆದರೆ ಕೋವಿಡ್ ನಿಯಮಗಳ ಪ್ರಕಾರ ಸೋಂಕಿತರ ಮೃತರ ದೇಹಗಳಿಗೆ ವಿಧಿ ವಿಧಾನಗಳು ಹಾಗೂ ಸರಕಾರದ ನಿಯಮಗಳ ಪ್ರಕಾರ ಅಂತ್ಯ ಸಂಸ್ಕಾರ ಮಾಡಲು ಮುಂದಾಗಿದ್ದಾರೆ ಅದಕ್ಕೆ ನಮ್ಮ ಸಂಘಟನೆಯು ಅಂತ್ಯ ಸಂಸ್ಕಾರ ಮಾಡಲು  ಅನುಮತಿ ಕೊಡಬೇಕು ಎಂದು ಸರಕಾರಿ ವೈದ್ಯಾಧಿಕಾರಿಗಳಿಗೆ, ಪುರಸಭೆ ಮುಖ್ಯಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದ್ದಾರೆ ಇನ್ನು ರಬಕವಿ-ಬನಹಟ್ಟಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಮುಫ್ತಿ ಸಲೀಂ ಇನಾಮದಾರ- 7892118396, ನಿಸಾರಹ್ಮದ ಅಲಾಸ-854967557 ಇವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.


  ಈ ಸಂದರ್ಭದಲ್ಲಿ ಸಂಘಟನೆಯ ಮುಪ್ತಿ ಸಲೀಂ ಇನಾಮದಾರ, ನಿಸಾರ ಅಲಾಸ್, ಹಫೀಜ ಕುಂದರಗಿ, ಶಬ್ಬೀರ ಜಮಾದಾರ, ರಾಜೇಸಾಬ ನಗಾರ್ಜಿ, ಮುನ್ನಾ ತಾಂಬೋಳಿ, ಮುಸ್ತಫಾ ನದಾಫ, ಮಹಾವೀರ ಹಳಿಂಗಳಿ ಸೇರಿದಂತೆ ಇನ್ನಿತರರು ಇದ್ದರು.