ವರದಿ : ವಿಜಯ ವಾಜಂತ್ರಿ

ತೇರದಾಳದ ಡಚ್ಚ ಕಾಲೊನಿಯಲ್ಲಿ ನಡೆದ ಮದುವೆ ಸಮಾರಂಭದ ಮನೆಯನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು.ತೇರದಾಳದ ಡಚ್ಚ ಕಾಲೊನಿಯಲ್ಲಿ ನಡೆದ ಮದುವೆ ಸಮಾರಂಭದ ಮನೆಯನ್ನು ಪರಿಶೀಲನೆ ಮಾಡಿದ ಅಧಿಕಾರಿಗಳು.

ಮದುವೆ ಮನೆ ಪರಿಶೀಲನೆ ಮಾಡಿದ ಅಧಿಕಾರಿಗಳು

ತೇರದಾಳ : ಪಟ್ಟಣದಲ್ಲಿ ಅಧಿಕೃತವಾಗಿ ಅನುಮತಿ ಪಡೆದು ಮದುವೆ ನಡೆಸುತ್ತಿರುವ ಮದುವೆ ಮನೆಗಳಿಗೆ ಪಟ್ಟಣದ ಪುರಸಭೆ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.

  ಕೆಎಚ್‍ಡಿಸಿ ಕಾಲನಿಯಲ್ಲಿ ಶಿವಾನಂದ ಪ್ರಕಾಶ ಶೇಡಬಾಳ ಇವರ ಮದುವೆ ಮುಹೂರ್ತವನ್ನು ಏಪ್ರೀಲ ತಿಂಗಳಲ್ಲಿ ನಿಶ್ಚಯಿಸಿದ್ದರು. ಆದರೆ ಕೊರೊನಾ ಮಹಾಮಾರಿಯ ಅರ್ಭಟ ಎಲ್ಲಾ ಕಡೆಗೆ ಹೆಚ್ಚಾಗಿರುವುದರಿಂದ ಸರಕಾರ ಲಾಕಡೌನ ಜಾರಿಗೆ ತಂದಿತು. ಆದ್ದರಿಂದ ಮದುವೆ ಮನೆಯವರು ಪುರಸಭೆಯಿಂದ ಅಧಿಕೃತ ಅನುಮತಿ ಪಡೆದು ಮದುವೆ ನಡೆಸಲು ತಿರ್ಮಾಣಿಸಿದರು. ಪುರಸಭೆಯವರು ಅನುಮತಿ ನೀಡಿದಷ್ಟೇ ಜನ, ಸ್ಯಾನಿಟೈಜರ್ ಹಾಗೂ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಲಾಗಿತ್ತು ಅದೇ ರೀತಿ ಅಧಿಕಾರಿಗಳು ಪರಿಶೀಲನೆ ಮಾಡಿದರು. ಮತ್ತು ಸರಳವಾಗಿ ಕೋವಿಡ್ ನಿಯಮಗಳನ್ನು ಪಾಲನೆಯ ಜೊತೆಗೆ ನಡೆದ ಮದುವೆ ಇನ್ನೊಬ್ಬರಿಗೆ ಮಾದರಿಯಾಯಿತು.

  ಸರಕಾರದ ಪರವಾಣಿಗೆ ಪತ್ರದಲ್ಲಿ ಹಾಕಿರುವ ಶರತ್ತಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ 50ಕ್ಕಿಂತ ಹೆಚ್ಚಿಗೆ ಜನರು ಸೇರಬಾರದು. ನಿಯಮ ಮೀರಿದರೆ ಕಾನೂನು ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

   ಈ ಸಂದರ್ಭದಲ್ಲಿ ಪುರಸಭೆ ಕಂದಾಯ ಅಧಿಕಾರಿ ಎಫ್.ಬಿ.ಗಿಡ್ಡಿ, ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಮಠಪತಿ, ಮಹಾದೇವ ಯಲ್ಲಟ್ಟಿ, ಪ್ರವೀಣ ದಾನಿಗೊಂಡ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.