ದೇವರಾಜ ನಗರದ ಕನ್ನಡ ಶಾಲೆಯ ಕಂಪೌಂಡ ಹತ್ತಿರ ಬಿದ್ದಿರುವ ಕಸದ ರಾಶಿ
ತೇರದಾಳ : ಪಟ್ಟಣದ ದೇವರಾಜ ನಗರದ ಕನ್ನಡ ಶಾಲೆಯ ಕಂಪೌಂಡ ಹತ್ತಿರ ಕಸದ ರಾಶಿ ಬಿದ್ದಿದೆ ಇದನ್ನು ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಹೇಳಿದರು ಯಾವುದೇ ಪ್ರಯೋಜನವಾಗಿಲ್ಲವೆಂದು ಅಲ್ಲಿಯ ನಿವಾಸಿಗಳು ದೂರಿದ್ದಾರೆ. ಕೊರೊನಾ ಮಹಾಮಾರಿಯ ಅರ್ಭಟ ದಿನೇ ದಿನೇ ಹೆಚ್ಚಾಗುತ್ತಿದ್ದು ಅದರ ನಿಯಂತ್ರಣಕ್ಕೆ ಸರಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇಲ್ಲಿ ವಾಸಿಸುವ ಜನರು ತೀರ ಭಯದಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಎಲ್ಲಿಯು ಸ್ವಚ್ಚತೆ ಅನ್ನುವುದು ಕಾಣುತ್ತಿಲ್ಲ. ಇಲ್ಲಿನ ಚರಂಡಿಗಳು ತುಂಬಿಕೊಂಡಿವೆ. ಪುರಸಭೆಯ ಪೌರ ಕಾರ್ಮಿಕರು ದೇವರಾಜ ನಗರದಲ್ಲಿನ ಚರಂಡಿಗಳನ್ನು ಸ್ವಚ್ಚ ಮಾಡಲು ಬರುತ್ತಿಲ್ಲ. ಎಲ್ಲಿ ಬೇಕಂದರಲ್ಲಿ ಕಸದ ರಾಶಿಗಳು ಬಿದ್ದಿವೆ. ಚರಂಡಿಗಳು ತುಂಬಿಕೊಂಡಿವೆ. ಇವುಗಳನ್ನು ಸ್ವಚ್ಚಗೊಳಿಸಿ ಡಿಡಿಟಿ ಪೌಡರನ್ನು ಹಾಕಬೇಕು. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸೊಳ್ಳೆಗಳಿಂದ ಭಯಾನಕ ರೋಗಗಳಾದ ಮಲೇರಿಯಾ, ಡ್ಯೆಂಗ್ಯೂದಂತಹ ರೋಗಗಳು ಬರುತ್ತವೆ, ಕೋವಿಡ್‍ದಂತಹ ರೋಗದ ಜೊತೆಗೆ ಈ ರೋಗಗಳು ಬಂದರೆ ಹೇಗೆ ಎಂಬ ಭಯದಲ್ಲಿದ್ದಾರೆ. ಇಲ್ಲಿನ ನಿವಾಸಿಗಳು ಎಲ್ಲರೂ ಕೂಲಿ ಕಾರ್ಮಿಕರು ಇದ್ದಾರೆ. ಸ್ವಚ್ಚತೆಗೆ ಗಮನಕೊಡುತ್ತಿಲ್ಲವೆಂದು ಅವರು ದೂರಿದ್ದಾರೆ. ದೇವರಾಜ ನಗರದ ಎಲ್ಲ ಭಾಗಗಳಲ್ಲಿಯೂ ಸ್ವಚ್ಚತೆ ಎನ್ನುವುದು ಮರೀಚಿಕೆಯಾಗಿದೆ. ಸಾಕಷ್ಟು ಬಾರಿ ಮೌಖಿಕವಾಗಿ ಹೇಳಲಾಗಿದೆ ಹಾಗೂ ಪುರಸಭೆಯಲ್ಲಿನ ಸ್ವಚ್ಚತೆ ರಜಿಸ್ಟರ್‍ನಲ್ಲಿ ಬರೆದು ಬರಲಾಗಿದೆ ಆದರೂ ಅಧಿಕಾರಿಗಳು ಇತ್ತ ನೋಡುತ್ತಿಲ್ಲವೆಂದು ರಾಜೇಸಾಬ ನಗಾರ್ಜಿ, ಮುನ್ನಾ ತಾಂಬೋಳಿ, ಮಹಾವೀರ ಹಳಿಂಗಳಿ, ಮಹ್ಮದ ಜಮಖಂಡಿ, ನಿಸಾರ ಅಲಾಸ ಸೇರಿದಂತೆ ಇನ್ನಿತರರು ಪತ್ರಿಕೆಗೆ ತಿಳಿಸಿದ್ದಾರೆ.
Social Plugin