-----------------------------------------------------------------------------------------------------------------------
------------------------------------------------------------------------------------------------------------------------
ಎರೆಡು ವಿಷಯ.
ಮೊದಲಿಗೆ ಯಾರಾದರು ಕೋವಿಡ್ ಇಂದ ಗುಣಮುಖರಾದವರಿದ್ದರೆ ನಿಮ್ಮ ಡಾಕ್ಟರ್ ಗಳನ್ನ ಕನ್ಸಲ್ಟ್ ಮಾಡಿ ದಯವಿಟ್ಟು ಪ್ಲಾಸ್ಮ ಡೊನೇಟ್ ಮಾಡಿ. ಸದ್ಯದ ಪರಿಸ್ಥಿತಿಯಲ್ಲಿ ಅದೇ ಶಕ್ತಿಮದ್ದು. ಕೈ ಮುಗಿದು ಕೇಳ್ಕೊತಿನಿ. ಈಗ ಆಕ್ಸಿಜನ್ ಸಮಸ್ಯೆ ಕಡಿಮೆಯಾಗಿದೆ. ಇದೆ. ಆದರೆ ಸುಧಾರಿಸ್ಕೊಬಹುದು ಅಂತಿದ್ದಾರೆ. ಆದರೆ ಔಷಧಿಗಳು ಅದರಲ್ಲೂ ಪ್ಲಾಸ್ಮ ತುಂಬ ಆವಶ್ಯಕವಾಗಿದೆ. ನಾನು ರಕ್ತದಾನ ಮಾಡಿದ್ದೀನಿ. ಮನಸ್ಸಿಗೆ ಸುಮ್ಮನೆ ಒಂದು ನೆಮ್ಮದಿ ಕೊಡುವಂತಹದರಲ್ಲಿ ಅದೂ ಒಂದು. ಮಾಡಿದವರಿಗೆಲ್ಲ ಆ ನೆಮ್ಮದಿ ಏನು ಅಂತ ಗೊತ್ತು. ಈಗ ಪ್ಲಾಸ್ಮ ಬೇಕು.
ಎರಡನೇದು,
ಸರ್ಟಿಫೈಡ್ ವೈದ್ಯರು ಅಥವ ಸರ್ಕಾರವೇ ಹೊರಡಿಸಿರುವ ಸೂಚನೆಗಳಲ್ಲದೆ, ಯಾರ ಸಲಹೆಗಳಿಗೂ ಕಿವಿಗೊಡಬೇಡಿ. ಎಂತಹ ಸಿಲೆಬ್ರಿಟಿ ಬಂದು ನಾನು ಹೀಗೆ ಮಾಡಿದಕ್ಕೆ ಗುಣ ಆದೆ ಅಥವ ಸೋಂಕು ತಗುಲಲಿಲ್ಲ ಅಂತಂದರೆ ದಯವಿಟ್ಟು ಕಿವಿಗೆ ಹಾಕೋಬೇಡಿ. ಇವತ್ತಿನ ಪರಿಸ್ಥಿತಿಯಲ್ಲಿ ನೀವು ಸೋಂಕಿನಿಂದ ಪಾರಾದರೆ ಅದು ನಿಮ್ಮ ಶಕ್ತಿ ಅಥವ ಉಪಾಯದಿಂದಲ್ಲ, it is your plain dumb luck. ಎಷ್ಟೋ ಸೋಂಕಿತರಿಗೆ ಬಿಗನಿಂಗ್ ಹಂತಗಳಲ್ಲೇ ಸುತ್ತಮುತ್ತ ಇರೋರು ಬಾಯಿಗೆ ಬಂದ ಔಷಧಿ ಹೇಳಿ ಅದು ಉಲ್ಬಣಗೊಳ್ಳುವ ಹಾಗೆ ಮಾಡುತ್ತಾರೆ. ಸರ್ಕಾರದ ಸೂಚನೆಯಂದರೆ ಅದು ಹೊರಡಿಸುವ ಸುತ್ತೋಲೆಯೇ ಹೊರತು ಮಂತ್ರಿ ಕಂತ್ರಿಗಳು ಹೇಳಿದ್ದು ಅಂತಲ್ಲ. ಭಯ ಬೇಡ ಆದರೆ ಸದಾಕಾಲ ಎಚ್ಚರದಿಂದಿರಿ.
Social Plugin