ವರದಿ : ವಿಜಯ ವಾಜಂತ್ರಿ
ತೇರದಾಳ : ಸುಮಂಗಲೆಯರಿಂದ ಶ್ರಿಅಲ್ಲಮಪ್ರಭು ನಾಮಕರಣ
ತೇರದಾಳ : ಶತಮಾನಗಳಿಂದ ನಡೆದುಕೊಂಡ ಬಂದಿರುವ ಪಟ್ಟಣದ ಆರಾಧ್ಯ ದೈವ ಶ್ರೀಅಲ್ಲಮಪ್ರಭು ದೇವರ ನಾಮಕರಣ ಕಾರ್ಯಕ್ರಮ ಸಡಗರ ಸಂಭ್ರಮದಿಂದ ಯುಗಾದಿ ಪಾಡ್ಯೆಯಂದು ಜರುಗಿತು.
ಬೆಳಿಗ್ಗೆ ದೇವಸ್ಥಾನದಲ್ಲಿ ಅರ್ಚಕರಿಂದ ಪೂಜಾ ಕೈಂಕರ್ಯಗಳು ನಡೆದವು. ಬೆಳಿಗ್ಗೆ 11ಗಂಟೆ ಸುಮಾರಿಗೆ ಪಾಲಕಿ ಉತ್ಸವ ಹಾಗೂ ಸೇವಾ ಕಾರ್ಯಕ್ರಮಗಳು ನಡೆದವು. ಸಂಗೀತ ಕಲಾವಿದರಿಂದ ಗಾಯನಗಳು ನಡೆದವು. ಶ್ರೀಅಲ್ಲಮಪ್ರಭು ಕಲ್ಯಾಣ ಮಂಟಪದಲ್ಲಿ 2700ಜನ ಸುಮಂಗಲೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಪ್ರಭುದೇವರ ಗದ್ದುಗೆಯ ಮೇಲೆ ಇಟ್ಟು ಪೂಜಿಸಿದ ಫಲವನ್ನು ತಂದು ತೊಟ್ಟಿಲಲ್ಲಿ ಹಾಕಿ ಮಾತೆಯರಿಂದ ಶ್ರೀಅಲ್ಲಮಪ್ರಭುವಿಗೆ ನಾಮಕರಣ ಮಾಡುವ ಸಂದರ್ಭದಲ್ಲಿ ಸದ್ಭಕ್ತರು ತಂದಿರುವ ಕೊಂಚಿಗೆ, ದುಬಟಿ ಸೇರಿ ನಾಮಕರಣ ಕಾರ್ಯಕ್ರಮಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ತೊಟ್ಟಿಲಲ್ಲಿ ಹಾಗೂ ತೊಟ್ಟಿಲದ ಕೆಳಗೆ ಇಟ್ಟು ಹೂವುಗಳಿಂದ ಅಲಂಕೃತವಾದ ತೊಟ್ಟಿಲನಲ್ಲಿ ಅಲ್ಲಮಪ್ರಭು ಫಲಗಳನ್ನು ಇಟ್ಟು ಜೋಗುಳ ಪದಗಳನ್ನು ಹಾಡುತ್ತ ನಾಮಕರಣ ಮಾಡಲಾಯಿತು. ಬಹಳಷ್ಟು ವರ್ಷಗಳವರೆಗೆ ಮಕ್ಕಳಾಗದೆ ಇರುವ ತಾಯಂದಿರು ಇಲ್ಲಿ ನಾಮಕರಣ ಮಾಡಿದ ಫಲವನ್ನು ಉಡಿತುಂಬಿಕೊಳ್ಳುವುದರಿಂದ ಮಕ್ಕಳ ಭಾಗ್ಯ ದೊರಯುತ್ತದೆ ಎಂದು ಸುಮಂಗಲೆಯರು ಅವರ ಉಡಿ ತುಂಬುವರು. ಕಳೆದ ವರ್ಷ ಫಲವನ್ನು ಪಡೆದು ಮಕ್ಕಳ ಭಾಗ್ಯ ಪಡೆದ ತಾಯಂದಿರು ತಾವು ಹರಕೆಯನ್ನು ಇದೇ ಸಂದರ್ಭದಲ್ಲಿ ಇಡೇರಿಸುತ್ತಾರೆ.
ಬಂದಂತ ಎಲ್ಲ ಸದ್ಭಕ್ತರಿಗೆ ಶ್ರೀಅಲ್ಲಮಪ್ರಭು ಅನ್ನ ಪ್ರಸಾದ ಸಮೀತಿಯವರು ಪ್ರಸಾದ ವ್ಯವಸ್ಥೆಯನ್ನು ಮಾಡಿದ್ದರು.
ಶಾಂತವ್ವ ತೆಳಗಿನಮನಿ, ಕಸ್ತೂರಿ ಬಾಂವಿ, ಕಮಲಕ್ಕಾ ವಾಲಿ, ಪ್ರಭಾವತಿ ಮಾಳಿ, ಸಾವಿತ್ರಿ ಮುದಕನ್ನವರ, ಸುಜ್ಞಾನಿ ತೆಳಗಿನಮನಿ, ಬೌರವ್ವ ತೆಳಗಿನಮನಿ ಸೇರಿದಂತೆ ಪಟ್ಟಣದ ಮಾತೆಯರು ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Social Plugin