ವರದಿ : ವಿಜಯ ವಾಜಂತ್ರಿ
ತೇರದಾಳದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಜಯಂತಿ ನಿಮಿತ್ಯ ಹಮ್ಮಿಕೊಂಡ ಡಾ.ಬಾಬಾಸಾಹೇಬ ಅಂಬೇಡ್ಕರರ ಮೂರ್ತಿ ಮೆರವಣಿಗೆ ಸಡಗರ ಸಂಭ್ರಮದಿಂದ ನೆರವೇರಿತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ ಮೂರ್ತಿ ಮೆರವಣಿಗೆ
ತೇರದಾಳ : ಸಾಮಾಜಿಕ ಸಮಾನತೆಗಾಗಿ, ಅಸ್ಪøಶ್ಯತಾ ನಿವಾರಣೆಗಾಗಿ ಹೋರಾಡಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರರ 130 ನೇ ಜಯಂತಿ ನಿಮಿತ್ಯ ಹಮ್ಮಿಕೊಂಡ ಡಾ.ಬಾಬಾಸಾಹೇಬ ಅಂಬೇಡ್ಕರರ ಮೂರ್ತಿ ಮೆರವಣಿಗೆ ಬುಧವಾರ ಸಾಯಂಕಾಲ ಪಟ್ಟಣದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ಬೆಳ್ಳಿ ರಥದಲ್ಲಿ ಡಾ.ಬಿ.ಆರ್.ಅಂಬೇಡ್ಕರರ ಮೂರ್ತಿ ರಾರಾಜಿಸುತ್ತಿತ್ತು. ಗೋಲಭಾವಿಯ ಜೈಕರ್ನಾಟಕ ಕೈಪೆಟ್ಟು ಮೇಳದವರು ಮೆರವಣಿಗೆಗೆ ಮೆರಗು ತಂದಿದ್ದರು. ಮೆರವಣಿಗೆಯ ತುಂಬೆಲ್ಲ ಅಂಬೇಡ್ಕರರ ಭಾವ ಚಿತ್ರವಿರುವ ನೀಲಿ ಧ್ವಜಗಳು ರಾರಾಜಿಸುತ್ತಿದ್ದವು. ಭಾಗವಹಿಸಿದ ದಲಿತ ಸಮುದಾಯದವರೆಲ್ಲರಲ್ಲೂ ಕೊರಳಿಗೆ ಹಾಕಿರುವ ನೀಲಿ ಸ್ಕಾರ್ಪಗಳು ಕಳೆ ಕಟ್ಟಿದ್ದವು. ಯುವಕರು ಧ್ವನಿವರ್ಧಕದ ರಾಗ ತಾಳಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮಹಿಳೆಯರು ಮಕ್ಕಳು ಮೆರವಣಿಗೆಯಲ್ಲಿ ಸಾಲಾಗಿ ಹೋಗುತ್ತಿದ್ದರು. ಮೆರವಣಿಗೆಯು ಅಂಬೇಡ್ಕರ್ ಸರ್ಕಲ್‍ದಿಂದ ಪ್ರಾರಂಭವಾಗಿ ತಮದಡ್ಡಿ ನಾಕಾ, ಎಲ್ಲಮ್ಮನ ದೇವಸ್ಥಾನ, ಜಾಮೀಯಾ ಮಸೀದಿ, ವಿಶೇಷ ತಹಶಿಲ್ದಾರ ಕಚೇರಿ, ಚಾವಡಿ, ಕನ್ನಡ ಶಾಲೆ, ಕಾಳಿನ ಬಜಾರ, ಗುಮ್ಮಟ ಗಲ್ಲಿಯಿಂದ ನೇರವಾಗಿ ಅಂಬೇಡ್ಕರ ಸರ್ಕಲ್‍ಗೆ ಬಂದು ಮುಕ್ತಾಯವಾಯಿತು.
ಮೆರವಣಿಗೆಯ ನೇತೃತ್ವವನ್ನು ರಮೇಶ ಧರೆನ್ನವರ, ಪಿ.ಎಸ್.ಮಾಸ್ತಿ, ದಯಾನಂದ ಕಾಳೆ, ಆನಂದ ನಡುವಿನಕೇರಿ, ನಾಗಪ್ಪ ದೊಡಮನಿ, ರಾಜು ಸರಿಕರ, ಹನಮಂತ ರೋಡನ್ನವರ, ಜಿನ್ನಪ್ಪ ದೊಡಮನಿ, ಸದಾಶಿವ ದೊಡಮನಿ, ಸುಭಾಸ ರಾಯನ್ನವರ ಸೇರಿದಂತೆ ಉವಕರು, ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.
ಸೂಕ್ತ ಬಂದೂಬಸ್ತ್‍ಗೆ ಕ್ರಮ : ಸಿಪಿಐ ಜೆ.ಕರುಣೇಶಗೌಡ ಮಾಗದರ್ಶನದಲ್ಲಿ ಸ್ಥಳೀಯ ಪಿಎಸ್‍ಐ ವಿಜಯ ಕಾಂಬಳೆ ನೇತೃತ್ವದಲ್ಲಿ ಬಂದೂ ಬಸ್ತ ಸೂಕ್ತ ಕ್ರಮಕೈಗೊಳ್ಳಲಾಗಿತ್ತು.

Social Plugin