ವರದಿ : ವಿಜಯ ವಾಜಂತ್ರಿ
ತೇರದಾಳದ ಅಂಬೇಡ್ಕರ್ ಸರ್ಕಲ್‍ದಲ್ಲಿ ಅಂಬೇಡ್ಕರ ಜಯಂತಿ ನಿಮಿತ್ಯ ಅಂಬೇಡ್ಕರ ಪ್ರತಿಮೆಗೆ ಪಿಎಸ್‍ಐ ವಿಜಯ ಕಾಂಬಳೆ ಹಾಗೂ ಪ್ರಮುಖರು ಸೇರಿ ಹೂಮಾಲೆ ಅರ್ಪಿಸಿದರು.

ತೇರದಾಳದ ಅಂಬೇಡ್ಕರ್ ಸರ್ಕಲ್‍ದಲ್ಲಿ ಅಂಬೇಡ್ಕರ ಜಯಂತಿ ನಿಮಿತ್ಯ ಹಮ್ಮಿಕೊಂಡ ಸಮಾರಂಭದಲ್ಲಿ ಧ್ವಜಾರೋಹಣವನ್ನು ಪಿಎಸ್‍ಐ ವಿಜಯ ಕಾಂಬಳೆ ನೆರವೇರಿಸಿದರು.
ತೇರದಾಳ : ಡಾ.ಬಿ.ಆರ್.ಅಂಬೇಡ್ಕರರು ಭವ್ಯ ಭಾರತದ ಭವಿಷ್ಯತ್ತನ್ನು ಪ್ರಗತಿಯಡೆಗೆ ಅವರ ಅಪಾರ ಜ್ಞಾನವನ್ನು ವಿನಿಯೋಗಿಸಿ ದೇಶ ವಿದೇಶದಿಂದ ಅಪಾರ ವಿದ್ವತ್ ಸಂಪಾದನೆ ಮಾಡಿಕೊಂಡು ಭಾರತಕ್ಕೆ ಬೇಕಾಗುವ ಸಂವಿಧಾನವನ್ನು ರಚನೆ ಮಾಡಿದ್ದು, ಕೇವಲ ಒಂದು ವರ್ಗಕ್ಕೆ ಅಥವಾ ದೀನ ದಲಿತರಿಗೆ ಅಷ್ಟೇ ಸೀಮಿತವಾಗಿಲ್ಲದ ಸಂವಿಧಾನ ಭಾರತದ ಎಲ್ಲ ಪ್ರಜೆಗಳಿಗೆ ಅನ್ವಯವಾಗಲಿ ಎಂದು ಸಂವಿಧಾನ ರಚನೆ ಮಾಡಿದರು ಎಂದು ಸ್ಥಳೀಯ ಪೋಲಿಸ್ ಠಾಣೆಯ ಠಾಣಾಧಿಕಾರಿ ಪಿಎಸ್‍ಐ ವಿಜಯ ಕಾಂಬಳೆ ಹೇಳಿದರು.
   ಪಟ್ಟಣದ ಅಂಬೇಡ್ಕರ್ ಸರ್ಕಲ್‍ದಲ್ಲಿ ಅಂಬೇಡ್ಕರರ 130ನೇ ಜಯಂತಿ ನಿಮಿತ್ಯವಾಗಿ ಹಮ್ಮಿಕೊಂಡ ಸಮಾರಂಭದಲ್ಲಿ ಧ್ವಜಾರೋಹಣ ನೆವೇರಿಸಿ ಮಾತನಾಡಿದ ಅವರು ಸಂವಿಧಾನದ ಮೊದಲನೇ ಹಾಗೂ ಕೊನೆ ಪುಟ ಹೇಳುತ್ತದೆ ಭಾರತದ ಪ್ರಜೆಗಳಾದ ನಾವು ಎಂದು. ಭಾರತದ ಸಂವಿಧಾನ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯವಾಗುತ್ತದೆ. ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ತತ್ವಗಳನ್ನು ಅವರು ಬೋಧಿಸಿದ್ದರು, ಮಾನವನಿಗೆ ಶಿಕ್ಷಣ ಮುಖ್ಯವಾದದು. ಎರಡು ರೂ.ಗಳಲ್ಲಿ ಒಂದು ರೂ. ತಿನ್ನುವುದಕ್ಕಾಗಿ ಇನ್ನೊಂದು ರೂ.ಗಳನ್ನು ಪುಸ್ತಕ ಕೊಂಡುಕೊಳ್ಳುವುದಕ್ಕಾಗಿ ಉಪಯೋಗಿಸು ಎಂದು ಹೇಳುತ್ತಿದ್ದರು. ಎಲ್ಲರೂ ಶಿಕ್ಷಣವಂತರಾಗಬೇಕು. ಅತಿಯಾದ ಜ್ಞಾನಕ್ಕೆ ಜನ ಹೆದರುತ್ತಾರೆ ಆದರೆ ನಿನ್ನಲ್ಲಿರುವ ಆಯುಧದಿಂದಲ್ಲ. ಜ್ಞಾನವನ್ನು ಪಡೆಯಬೇಕಾದರೆ ಆಳವಾಗಿ ಅಧ್ಯಯನ ಮಾಡಿದಾಗ ಮಾತ್ರ ಸಾಧ್ಯ ಎಂದರು. 
  ಮಂಗಳವಾರ ರಾತ್ರಿ 12ಗಂಟೆ ಬೃಹತ್ ಕೇಕ ಕತ್ತರಿಸಿ ಸಂಭ್ರಮಿಸಿದರು. ಪಟ್ಟಣದ ಪ್ರಮುಖರು ಹಾಗೂ ದಲಿತ ಮುಖಂಡರು ಅಂಬೇಡ್ಕರರ ಪ್ರತಿಮೆಗೆ ಪುಷ್ಪಾರ್ಚಣೆ ಮಾಡಿದರು. ಸದಾಶಿವ ಹೊಸಮನಿ ಅಂಬೇಡ್ಕರರ ಭಾವ ಚಿತ್ರಕ್ಕೆ ಪೂಜೆಗೈದರು. ಪಟ್ಟಣದ ಪ್ರಮುಖರಾದ ಪ್ರವೀಣ ನಾಡಗೌಡ ಮಾತನಾಡಿದರು. ಸದಾಶಿವ ಹೊಸಮನಿ, ಮಹಾವೀರ ಕೊಕಟನೂರ, ಪುರಸಭೆ ಮಾಜಿ ಅಧ್ಯಕ್ಷ ಹನಮಂತ ರೋಡನ್ನವರ, ರಮೇಶ ಧರೆನ್ನವರ, ಪಿ.ಎಸ್.ಮಾಸ್ತಿ, ರಾಜು ಸರಿಕರ, ಬುಜಬಲಿ ಕೆಂಗಾಲಿ, ಸಿದ್ದು ಅಮ್ಮಣಗಿ, ನಾಗಪ್ಪ ದೊಡಮನಿ, ದಯಾನಂದ ಕಾಳೆ, ಜಿನ್ನಪ್ಪ ದೊಡಮನಿ, ಸಿದ್ಧಪ್ಪ ಕಾಂಬಳೆ, ವಿಜಯ ವಾಜಂತ್ರಿ, ಆನಂದ ನಡುವಿನಕೇರಿ, ರಾಜು ಪೂಜಾರಿ, ಸದಾಶಿವ ಹಟ್ಟೆನ್ನವರ, ಬಾಳು ಬುರುಡ, ಶೆಟ್ಟೆಪ್ಪ ಸುಣಗಾರ, ಅಶೋಕ ಅಳಗೊಂಡ, ಮಲ್ಲಿನಾಥ ಬೋಳಗೊಂಡ, ನಾಗಪ್ಪ ಸರಿಕರ, ಆಧಿನಾಥ ಸಪ್ತಸಾಗರ ಸೇರಿದಂತೆ ದಲಿತ ಯುವಕರು ಇನ್ನಿತರರು ಇದ್ದರು. ನ್ಯಾಯವಾದಿ ರಘುನಾಥಹಟ್ಟಿ ಸ್ವಾಗತಿಸಿದರು.