ವರದಿ : ವಿಜಯ ವಾಜಂತ್ರಿ

ತೇರದಾಳದ ಎಸ್‍ಪಿ ಕಾಲೇಜಿನ ಆವರಣದಲ್ಲಿ ಗಾನಯೋಗಿ ಶಿವಯೋಗಿ ಪದ್ಮಭೂಷಣ ಡಾ. ಪಂ.ಪುಟ್ಟರಾಜ ಗವಾಯಿಗಳವರ 107ನೇ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಂಡ ರಸಮಂಜರಿ ಕಾರ್ಯಕ್ರಮವನ್ನು ಸ್ಥಳೀಯ ಗಂಗಾಧರ ದೇವರು ಶ್ರೀಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.


     ಸಂಗೀತಕ್ಕೆ ಅಗಾಧವಾದ ಶಕ್ತಿಯಿದೆ

ತೇರದಾಳ : ಸರಸ್ವತಿ (ವಿದ್ಯೆ) ನಮ್ಮಲ್ಲಿ ಇದ್ದರೆ ಲಕ್ಷ್ಮಿ ತಾನಾಗಿಯೇ ನಮ್ಮಲ್ಲಿಗೆ ಬರುತ್ತಾಳೆ. ಸಂಗೀತಕ್ಕೆ ಅಗಾಧವಾದ ಶಕ್ತಿಯಿದೆ ಎಂದು ಸ್ಥಳಿಯ ಹಿರೇಮಠದ ಗಂಗಾಧರ ದೇವರು ಶ್ರೀಗಳು ಹೇಳಿದರು.

  ಪಟ್ಟಣದ ಎಸ್‍ಪಿ ಕಾಲೇಜಿನ ಆವರಣದಲ್ಲಿ ಗಾನಯೋಗಿ ಶಿವಯೋಗಿ ಪದ್ಮಭೂಷಣ ಡಾ. ಪಂ.ಪುಟ್ಟರಾಜ ಗವಾಯಿಗಳವರ 107ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀಪ್ರಭುಲಿಂಗೇಶ್ವರ ಮೆಲೋಡಿಯಸ್ ಆರ್ಕೆಸ್ಷ್ರಾ ತೇರದಾಳ ಇವರಿಂದ ಟ್ರ್ಯಾಕ್-ಲೈವ್, ರಸಮಂಜರಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗಾನಯೋಗಿ ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದಲ್ಲಿ ಗಣನೀಯವಾದ ಹೆಸರನ್ನು ಮಾಡಿದ್ದರು. ಅವರು ಸಾಕಷ್ಟು ಬಡ ಮಕ್ಕಳಿಗೆ ಹಾಗೂ ಅಂದ ಮಕ್ಕಳಿಗೆ ಆಶ್ರಯ ನೀಡಿ ಸಂಗೀತ ವಿದ್ಯೆಯನ್ನು ಕೊಟ್ಟರು. ಅವರ ಕೃಪಾಶೀರ್ವಾದದಲ್ಲಿ ಬೆಳೆಯುತ್ತಿರುವ ಈ ಸಂಗೀತ ಕಲಾವಿದರನ್ನು ಉಳಿಸಿ ಬೆಳಸಬೇಕು. ಸ್ಥಳೀಯ ಕಲಾವಿದರನ್ನು ಬೆಳೆಸುವುದರಿಂದ ನಮ್ಮೂರಿನ ಘಣತೆ ಹೆಚ್ಚುತ್ತದೆ ಎಂದರು. 

   ಲಕ್ಷ್ಮಣ ಮೆಂಚನ್ನವರ ಮಾತನಾಡಿದರು. ಸಂಘದ ಅಧ್ಯಕ್ಷ ಸಿದ್ದರಾಜ ಉಳಗೊಂಡ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಮ್.ಬಿ.ಮಾಳೇದ, ನರಸಪ್ಪ ಅಥಣಿ, ಪರಪ್ಪ ಅಥಣಿ, ರಂಗಸ್ವಾಮಿ ಕೆ,ಎಸ್. ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು. ಕಲಾವಿದ ಶಿಕ್ಷಕ ಯಲ್ಲಪ್ಪ ಇಮಡೆನ್ನವರ ಪ್ರಾರ್ಥಿಸಿದರು. ಆನಂದ ಕಾಂಬಳೆ ಸ್ವಾಗತಿಸಿದರು. ಸಿದ್ರಾಮ ಕಾಲತಿಪ್ಪಿ ನಿರೂಪಿಸಿದರು. ಜ್ಯೂನೀಯರ್ ರವಿಚಂದ್ರ ಎಂದೇ ಪ್ರಖ್ಯಾತರಾದ ಚಂದ್ರಕಾಂತ ಬಾಳಿಕಾಯಿ ವಂದಿಸಿದರು.