*ಶ್ರೀಶೈಲ ಭಕ್ತರಿಗೆ ಕೊರೊನಾ ಪರೀಕ್ಷೆ ಅಗತ್ಯ*
ವರದಿ : ಮಲ್ಲಿಕಾರ್ಜುನ ತುಂಗಳ (ರಬಕವಿ-ಬನಹಟ್ಟಿ )
ಆಂಧ್ರ ಪ್ರದೇಶದ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಯು ಹೊಸ ವರುಷ್ ಯುಗಾದಿ ಪ್ರಯುಕ್ತ ಜರುಗುವದು.
ಈ ಬಾರಿ ಕೊರೊನಾ 2 ನೇ ಅಲೆ ದೇಶಾದ್ಯಂತ ಎಲ್ಲೆಂದರಲ್ಲಿ ಕೇಕೆ ಹಾಕುತ್ತಿರುವ ಹಿನ್ನಲೆ ಬರುವ ಭಕ್ತಾಧಿಗಳು ಪ್ರಮುಖವಾಗಿ ಸೇವಾ ಸಮಿತಿ ಸದಸ್ಯರೆಲ್ಲರೂ ಕೋವಿಡ್ ನೆಗೆಟಿವ್ ಪರೀಕ್ಷಾ ಪತ್ರ ಅತ್ಯಗತ್ಯವಾಗಿದೆ ಎಂದು ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಟ್ರಸ್ಟ್ ನ ಮುಖ್ಯಸ್ಥ ಕೆ.ಎಸ್. ರಾಮರಾವ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ರಾತ್ರಿ ನಡೆದ ಸೇವಾ ಸಮಿತಿ ಸದಸ್ಯರೊಂದಿಗಿನ ಮಹತ್ವದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕ ಹಾಗು ಮಹಾರಾಷ್ಟ್ರದಿಂದ ಈಗಾಗಲೇ ಪಾದಯಾತ್ರೆ ಮೂಲಕ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಅಲ್ಲದೆ ವಾಹನಗಳ ಮೂಲಕವೂ ಭಕ್ತರು ಆಗಮಿಸಲಿದ್ದು, ಎಲ್ಲರೂ ಕೋವಿಡ್ ಪರೀಕ್ಷೆ ಅನಿವಾರ್ಯವಾಗಿದೆ. ಅಲ್ಲದೆ ದೇವಸ್ಥಾನ ಆವರಣದಲ್ಲಿಯೂ ರ್ಯಾಂಡಮ್ ಹಾಗು ರ್ಯಾಪಿಡ್ ಪರೀಕ್ಷೆಯನ್ನೂ ನಡೆಸಲಾಗುವದು ಎಂದು ತಿಳಿಸಿದರು.
ಭಕ್ತರು ಹಾಗು ದೇವಸ್ಥಾನದಲ್ಲಿ ಸೇವೆಗೆಂದು ಆಗಮಿಸುವ ಜನತೆ ಇವೆಲ್ಲವುಗಳ ಬಗ್ಗೆ ನಿಗಾ ವಹಿಸಬೇಕೆಂದರು.
*ವಸತಿಗೆ ಅವಕಾಶವಿಲ್ಲ*
ಬಂದ ಭಕ್ತರು ದರ್ಶನ ಪಡೆದ ನಂತರ ತಮ್ಮ ತಮ್ಮ ಊರುಗಳಿಗೆ ಮರಳಬೇಕು. ವಿನಾಕಾರಣ ವಾಸ್ತವ್ಯ ಹೂಡುವದನ್ನು ನಿಲ್ಲಿಸಲಾಗಿದ್ದು, ಯಾವದೇ ಕಾರಣಕ್ಕೂ ಸುಕ್ಷೇತ್ರ ವ್ಯಾಪ್ತಿಯಲ್ಲಿ ಜನಸಂದನೆ ಮಾಡುವಂತಿಲ್ಲವೆಂದು ರಾಮರಾವ್ ತಿಳಿಸಿದರು.
*ಸ್ವರ್ಶಲಿಂಗ ದರ್ಶನವಿಲ್ಲ*
ಯುಗಾದಿ ಪ್ರಯುಕ್ತ ತೆರಳುವ ಭಕ್ತರಲ್ಲಿ ಈ ಬಾರಿಯೂ ನಿರಾಸೆ ಮೂಡಿದ್ದು, ರಾಜ್ಯದಿಂದ ಲಕ್ಷಾಂತರ ಭಕ್ತರು ಮಲ್ಲಿಕಾರ್ಜುನ ದೇವರ ಸ್ಪರ್ಶಲಿಂಗ ಸಲುವಾಗಿಯೇ ತೆರಳುವದುಂಟು, ಟ್ರಸ್ಟ್ ಆದೇಶದ ಮೆರೆಗೆ ಈ ಬಾರಿಯೂ ಭಕ್ತರಲ್ಲಿ ನಿರಾಸೆ ಮೂಡಿದ್ದು ಯಾವದೇ ಕಾರಣಕ್ಕೂ ಸ್ಪರ್ಶಲಿಂಗ ದರ್ಶನಕ್ಕೆ ಅವಕಾಶವಿಲ್ಲವೆಂದು ಸ್ಪಷ್ಟನೆ ನೀಡಿದೆ.
*ಪಾತಾಳಗಂಗೆಗೆ ನಿಷೇಧ*
ಪವಿತ್ರ ಪುಣ್ಯ ಸ್ನಾನಕ್ಕೆಂದು ಪಾತಾಳಗಂಗೆಗೆ ಭಕ್ತರು ತೆರಳುವಂತಿಲ್ಲ. ಅಲ್ಲಿಯೂ ನಿಷೇಧ ಹೇರಿದ್ದು, ತೆರಳುವ ಭಕ್ತರು ನೇರವಾಗಿ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಮರಳಬೇಕೆಂದು ಟ್ರಸ್ಟ್ ತಿಳಿಸಿದೆ.
ಭಕ್ತರಿಗೆ ಆರೋಗ್ಯದಲ್ಲಿ ವೈಪರಿತ್ಯ ಕಂಡಲ್ಲಿ ಶ್ರೀಶೈಲ ಕ್ಷೇತ್ರದ ಆಸ್ಪತ್ರೆ ಮೊಬೈಲ್ ಸಂಖ್ಯೆ: 9440668108 ನಂಬರನ್ನು ಸಂಪರ್ಕಿಸಿದ್ದಲ್ಲಿ ಸ್ಥಳಕ್ಕಾಗಿಮಿಸಿ ಉಪಚಾರ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಒಟ್ಟಾರೆ ಜನಜಂಗುಳಿಯಿಲ್ಲದೆ ಯುಗಾದಿ ಪ್ರಯುಕ್ತ ಜನರು ದರ್ಶನಕ್ಕೆ ಆಗಮಿಸಲು ಟ್ರಸ್ಟ್ ಸಕಲ ರೀತಿಯಲ್ಲಿ ಸನ್ನದ್ಧಗೊಂಡಿದೆ.
ಇದೇ ಸಂದರ್ಭ ಕರ್ನಾಟಕ ಹಾಗು ಮಹರಾಷ್ಟ್ರ ರಾಜ್ಯಗಳಿಂದ ಸುಮಾರು 20 ಕ್ಕೂ ಅಧಿಕ ಸೇವಾ ಸಮಿತಿಯ ಮುಖಸ್ಥರು ಸಭೆಯಲ್ಲಿ ಹಾಜರಿದ್ದರು.

Social Plugin