*ಭಗತ ಸಿಂಗ್ ವೃತ್ತ ನಿರ್ಮಾಣಕ್ಕೆ ಒತ್ತಾಯ*

                                ವರದಿ : ಮಲ್ಲಿಕಾರ್ಜುನ ತುಂಗಳ


ಬಾಗಲಕೋಟೆ ಜಿಲ್ಲೆಯ ತಾಲೂಕಿನ ಬನಹಟ್ಟಿಯ ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಸಂಬಂಧಿಸಿದ ಯಾವುದಾದರೂ ವೃತ್ತದಲ್ಲಿ ಭಗತ ಸಿಂಗ್ ವೃತ್ತ ನಿರ್ಮಾಣ ಮಾಡಬೇಕೆಂದು ರಬಕವಿ-ಬನಹಟ್ಟಿ ಭಗತ ಸಿಂಗ್ ಯುವಕ ಸಂಘವು ಒತ್ತಾಯಿಸಿತು.

ಇಲ್ಲಿನ ನಗರ ಯೋಜನಾ ಪ್ರಾಧಿಕಾರ ಕಚೇರಿಗೆ ತೆರಳಿ ಅಧ್ಯಕ್ಷ ಈಶ್ವರ ನಾಗರಾಳ ಅವರಿಗೆ ಮನವಿ ಅರ್ಪಿಸಿ ಒತ್ತಾಯಿಸಿದ ಸಂಘದ ಅಧ್ಯಕ್ಷ ಆನಂದ ಜಗದಾಳ, ಹಲವಾರು ವರ್ಷಗಳಿಂದ ವೃತ್ತ ನಿರ್ಮಾಣಕ್ಕೆ ಒತ್ತಾಯಿಸಲಾಗುತ್ತಿದೆ. 

ಈ ಸಲ ಎಂ.ಎಂ. ಭದ್ರನ್ನವರ ಬಂಗ್ಲೆ ಅಥವಾ ನೂಲಿನ ಗಿರಣಿ ಹತ್ತಿರದ ವೃತ್ತಕ್ಕೆ ಭಗತ ಸಿಂಗ್ ಎಂದು ಅಧಿಕೃತ ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭ ಸಂಘದ ಸದಸ್ಯರಾದ ರಾಜು ಟೆಂಗಿನಕಾಯಿ, ಆನಂದ ಕೊಣ್ಣೂರ, ಮಲ್ಲು ಬೀಳಗಿ, ವಿನಾಯಕ ಕೊಂತಿ, ಸೋಮು ಬೀಳಗಿ, ಸಂತೋಷ ಭುಜಕನ್ನವರ, ಮುತ್ತಣ್ಣ ಶ್ರೀಶೈಲಿ, ವಿನೋದ ಕೊಣ್ಣೂರ ಇದ್ದರು.