ವರದಿ : ವಿಜಯ ವಾಜಂತ್ರಿ


ತೇರದಾಳ ತಾಲೂಕಾ ಹೋರಾಟ ಸಮೀತಿಯು ತೇರದಾಳ ನೂತನ ತಾಲೂಕಿಗೆ ಹಳ್ಳಿಗಳನ್ನು ವಿಂಗಡನೆ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

ನೂತನ ತಾಲೂಕಿಗೆ ಹಳ್ಳಿಗಳ ವಿಂಗಡನೆ ಮಾಡುವಂತೆ ಮನವಿ

ತೇರದಾಳ : ನೂತನ ತೇರದಾಳ ತಾಲೂಕಿಗೆ ಹಳ್ಳಿಗಳ ವಿಂಗಡನೆ ಮಾಡುವಂತೆ ಒತ್ತಾಯಿಸಿ ಇಂದು ನೂತನ ತೇರದಾಳ ತಾಲೂಕಾ ಹೋರಾಟ ಸಮೀತಿಯು ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆಯವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.

   ಪಟ್ಟಣದ ಮಧ್ಯಭಾಗದಲ್ಲಿನ ಹನುಮಾನ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ವಿಶೇಷ ತಹಶೀಲ್ದಾರ ಕಚೇರಿಗೆ ಬಂದು ಅಲ್ಲಿ ತಾಲೂಕಾ ಹೋರಾಟ ಸಮೀತಿಯ ಪದಾಧಿಕಾರಿಗಳು ಮಾತನಾಡಿ ನೂತನ ತೇರದಾಳ ತಾಲೂಕಾ ಘೋಷಣೆಯಾಗಿ ಎರಡು ವರ್ಷಗಳು ಕಳೆದರು ಇವರೆಗೆ ಹಳ್ಳಿಗಳ ವಿಂಗಡಣೆಯಾಗಿರುವುದಿಲ್ಲ. ತಾಲೂಕಿಗೆ ಹಳ್ಳಿಗಳ ವಿಂಗಡನೆ ಮಾಡುವಲ್ಲಿ ಜಿಲ್ಲಾಡಳಿತದಿಂದ ವಿಳಂಭವಾಗುತ್ತಿದೆ. ಹಾಗೂ ತೇರದಾಳ ನೂತನ ತಾಲೂಕಿಗೆ ಸರಹದ್ದು ಗುರುತಿಸಿ ಅನುದಾನವನ್ನು ಬಿಡುಗಡೆ ಮಾಡಬೇಕು. ಅವಶ್ಯವಿರುವ ಕಚೇರಿಗಳನ್ನು ಕೂಡಲೆ ಪ್ರಾರಂಭಿಸಬೇಕು. ಆ ಕಚೇರಿಗಳಿಗೆ ಬೇಕಾಗುವ ಅಗತ್ಯ ಸಿಬ್ಬಂದಿಗಳನ್ನು ಕೊಡಬೇಕು. ಈಗಾಗಲೇ ಸರಕಾರ ಕಾರ್ಯದರ್ಶಿದಗಳು ಎರಡು ಮೂರು ಬಾರಿ ಹಳ್ಳಿಗಳನ್ನು ವಿಂಗಡಣೆ ಮಾಡುವಂತೆ ಆದೇಶ ಬಂದಿದ್ದರು ಜಿಲ್ಲಾಡಳಿತ ವಿಳಂಬ ಮಾಡುತ್ತಿದೆ. ಕೂಡಲೆ ಹಳ್ಳಿಗಳನ್ನು ಹಾಗೂ ನೂತನ ತಾಲೂಕಿಗೆ ಸರಹದ್ದು ಗುರುತಿಸಬೇಕು ಎಂದರು.

 ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಸಂಜಯ ಇಂಗಳೆ, ಈ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಈಗಲೇ ಕಳುಹಿಸಲಾಗುವುದು ಎಂದರು.

  ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಸ್.ಬಿ.ಮಾಯನ್ನವರ, ಪ್ರವೀಣ ನಾಡಗೌಡ, ಸದಾಶಿವ ಹೊಸಮನಿ, ಸುರೇಶ ರೇಣಕೆ, ಭಾಜಪ ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಮಲ್ಲಪ್ಪಣ್ಣ ಮುಕರಿ, ಬಸಪ್ಪ ಮುಕರಿ, ನೇಮಣ್ಣ ಸಾವಂತನವರ, ಮಹೇಶ ಕಾಲತಿಪ್ಪಿ, ಅಜೀತ ಮಗದುಮ್ಮ, ರಮೇಶ ಧರೆನ್ನವರ, ಉಮೇಶ ದೊಡಮನಿ, ಸಿದ್ದು ಅಮ್ಮಣಗಿ, ಜಿನ್ನಪ್ಪ ಸವದತ್ತಿ, ಭೀಮಶಿ ಹಿರೇಕುರುಬರ, ವಿಜಯಪ್ರಕಾಶ ದಾನಿಗೊಂಡ, ಮಹಾದೇವ ಯಂಡಿಗೇರಿ, ಈಶ್ವರ ಯಲ್ಲಟ್ಟಿ ಸೇರಿದಂತೆ ಹಲವರು ಇದ್ದರು.