ನಿಜವಾಗಿಯೂ ಇದು ವಿಜ್ಞಾನ ಯುಗಾನಾ ಅಥವಾ "ಅ'ಜ್ಞಾನ" ಯುಗಾನಾ ನಾವು ಭಾರತೀಯರು,  ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಬಿಟ್ಟು  ಪಾಶ್ಚಿಮಾತ್ಯರ ಆಚಾರ ವಿಚಾರಗಳನ್ನು ಅನುಸರಿಸಿ ಇಂದು ನಾವು  ಪ್ರತಿ ಕ್ಷಣ ಪ್ರತಿ ಘಳಿಗೆ ಸಾವಿನ ಅಂಚಿನಲ್ಲಿ ನಿಂತಿದ್ದೇವೆ..... ನಮ್ಮ ಪೂರ್ವಿಕರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವುಗಳು ನಡೆದು ಕೊಂಡು ಬಂದಿದ್ದರೆ ಬಹುಶಃ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಮೊಟ್ಟ ಮೊದಲಿಗೆ ನಾವು ನಮ್ಮ ಸಂಪ್ರದಾಯಗಳಲ್ಲಿ ಹೇಳಿರುವ ಹಾಗೆ ಸುಳ್ಳು, ಮೋಸ, ವಂಚನೆ ಹೀಗೆ ಮನುಷ್ಯ ಕ್ಷಣಿಕ ಸುಖಕ್ಕಾಗಿ ತನ್ನ ಜೀವನ ಹಾಗೂ ಸಮಾಜದ ಸ್ವಾಸ್ತ್ಯ ಹಾಳು ಮಾಡಿಕೊಳ್ಳುತ್ತಾನೆ. ಒಂದು ವೇಳೆ ನಾವು ಪರೋಪಕಾರ ಹಾಗೂ ನಿಶ್ವಾರ್ಥ ಸೇವಾ ಮನೋಭಾವನೆಯಿಂದ ಬದುಕುತ್ತಿದ್ದರೆ ಇಂದು ನಾವು ನೀವು ಈ ಸಂಧರ್ಭದಲ್ಲಿ ನೋಡುತ್ತಿದ್ದೆವಲ್ಲ  ಭ್ರಷ್ಟರಾಜಕಾರಣ, ವ್ಯವಸ್ಥೆಯ ಕೀಳರಿಮೆ ಇರುತ್ತಿರಲಿಲ್ಲ... 

        ಇಲ್ಲಿ ಸುಳ್ಳು ಆಶ್ವಾಸನೆ, ಒಬ್ಬರಿಗೊಬ್ಬರು ಕೇಸರೆರಚಾಟದ ಮಧ್ಯದಲ್ಲಿ ಬಡವನ ಗತಿ ಆ ದೇವರೇ ಬಲ್ಲ, ಇಲ್ಲಿ ಯಾರು ಯಾರ ಕಷ್ಟವನ್ನು ಕೇಳುವಂತಹ ಸ್ಥಿತಿಯೂ ಇಲ್ಲಾ, ತಮ್ಮ ತಮ್ಮ ಪರಿಸ್ಥಿತಿ ಗತಿ ಎಲ್ಲ ತಮ್ಮ ತಮ್ಮಲ್ಲೇ ಮಾತಾಡಿಕೊಂಡು ಸಂಭಂದಿಸಿದವರಿಗೆ ಎರಡು ಶಾಪ ಹಾಕಬಹುದು ಅಷ್ಟೇ.... ಇಂದಿನ ಪರಿಸ್ಥಿತಿಯಲ್ಲಿ ಬಂಡವಾಳು ಷಾಹಿ ವರ್ಗ ಸಮಾಜದಲ್ಲಿ ಇಂದು ಬರೀ ಸೇವೆ ಎಂಬ ನಾಟಕ ಮಾಡುತ್ತ ಚೇಲಾ, ಛತ್ರಿ ಚಮಚಾಗಳ ಜೈ ಜೈಕಾರದಲ್ಲಿ ಮಿಂದು  ಜನರ ತೋರಿಕೆಯಲ್ಲಿ ಸಮಾಜವನ್ನು ಮರಳು ಮಾಡಿದ್ದಾರೆ.... ಇಲ್ಲಿ ಒಂದು ತಿಳಿದುಕೊಳ್ಳಬೇಕಾದ ವಿಷಯವಿದೆ ನಮ್ಮ ಇತಿಹಾಸ ಮೋಸ ವಂಚನೆಗಳ ಅಂತ್ಯ ಏನಾಗುವುದು ಎಂದು ಹೇಳಿದೆ.   ಅದನ್ನು ತಿಳಿದು ಕೂಡಾ ಇಂದು ಯಾರಿಗೂ ಭಯವಿಲ್ಲಾ.... ಇರಲಿ.... ಮುಂದಿನ ನಮ್ಮ ಪೀಳಿಗೆ ಇಂದು ನಾವು ಪಡುತ್ತಿರುವ ವ್ಯವಸ್ಥೆಯ ಹಿಂಸೆ ಅನುಭವಿಸಬಾರದೆಂದರೆ, ನಾವುಗಳು ಅತ್ಯಂತ ಜವಾಬ್ದಾರಿಯುತವಾಗಿ ಈ ಸಂಧರ್ಭ ಬದುಕಲು ಪ್ರಾರಂಭಿಸಬೇಕು. ಮೊದಲಿಗೆ ಇಂತಹ ಕಷ್ಟ ಕಾಲವನ್ನು ನಾವು ಮರೆಯದೆ ನೆನಪಿನಲ್ಲಿಟ್ಟು ಕೊಳ್ಳಬೇಕು. ಪುರಾತನ ಸಂಪ್ರದಾಯಗಳನ್ನು ಆಚರಿಸುವುದರ ಕಡೆಗೆ ಗಮನ ಕೊಡಬೇಕು.


    ಮಿತ್ರರೇ ಧೈರ್ಯವಾಗಿರಿ 
      ಭೂಮಿ ಕ್ಷೀರಪಥದಲ್ಲಿ ಹುಟ್ಟಿದ್ದು...ಭೂಮಿಯು ಸುಮಾರು 4.54 ಬಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಮನುಷ್ಯ ಈ ಭೂಮಿಯ ಮೇಲೆ ಹುಟ್ಟಿ ಸರಿ ಸುಮಾರು 7 ಮಿಲಿಯನ್ ಅಂದರೆ ಎಪ್ಪತ್ತು ಲಕ್ಷ  ವರ್ಷಗಳಾಗಿವೆ. ಆಧುನಿಕ ಮಾನವನಂತೆ ಆಗಿ ಸುಮಾರು 2 ಲಕ್ಷ ವರ್ಷವಾಗಿದೆ. ಆಧುನಿಕ ನಾಗರೀಕತೆಗಳ ಉಗಮವಾಗಿ ಸುಮಾರು 6 ಸಾವಿರ ವರ್ಷಗಳಾಗಿವೆ. ಇಷ್ಟು ವರ್ಷಗಳು ಮಾನವನ ಸಂತತಿ ಉಳಿದು ಬಂದಿದ್ದು ಪ್ರಕೃತಿಯ ಆಶ್ರಯದಲ್ಲಿ.  ( ಆಧುನಿಕ ವಿಜ್ಞಾನದ ಆಧಾರದಲ್ಲಿ ಮೇಲಿನ ವಿಷಯ) 
ಈಗ 200 ವರ್ಷಗಳಿಂದ ಈ ವ್ಯಾಕ್ಸಿನ್ ಗಳ ಹಾರಾಟ ಚೀರಾಟ ಆರಂಭವಾಗಿರುವುದು. 
ಆದ್ದರಿಂದ ಈ  ಪಾಶ್ಚಾತ್ಯ ವೈದ್ಯಕೀಯ ವಿಜ್ಞಾನವೇ ಶ್ರೇಷ್ಠ ! ಅದೇ ಬದುಕಿಗೆ ಆಧಾರ ಎಂಬಂತೆ ಬಿಂಬಿಸುವುದು ಒಂದು ರೀತಿಯ ವ್ಯಾಧಿ ಮತ್ತು ದೇಶದ ಸಮಗ್ರತೆಗೆ ಧಕ್ಕೆ. ಮನುಷ್ಯ ಪರಂಪರೆ ಎಪತ್ತು ಲಕ್ಷ ವರ್ಷಗಳಿಂದ ಬದುಕಿ ಬಂದಿದೆ. ಅನೇಕ ಕಷ್ಟ ಪರಂಪರೆ ದಾಟಿ ಬಂದಿದೆ. ನಮ್ಮ ಪೂರ್ವಜರು ಬದುಕಿದಂತೆ ಬದುಕಲು ಪ್ರಯತ್ನಿಸೋಣ. ಒಳ್ಳೆಯ ಅಂಶ ಸ್ವೀಕರಿಸ ಬೇಕು ಆದರೆ ಮೆಡಿಕಲ್ ಬ್ಲಂಡರ್ ಗಳನ್ನಲ್ಲ !! 
ಇತರ ನೈಸರ್ಗಿಕ ಔಷಧ ಪದ್ಧತಿಗಳನ್ನು ನಾವು ಪೋಷಿಸದಿದ್ದರೆ ನಮಗೆ ಜೀವನ ದುಸ್ತರ ಆಗಬಹುದು. 
ನಾನು ಮೆಡಿಕಲ್ ಮಾಫಿಯಾ ವಿರುದ್ಧವಾಗಿದ್ದೇನೆ. ಆದರೆ ವಿಜ್ಞಾನದ ವಿರುದ್ಧವಿಲ್ಲ. 


  ನಾವೆಲ್ಲರೂ ಸೇರಿಯೇ ಈ ಊರು, ಈ ರಾಜ್ಯ, ದೇಶಗಳೆಲ್ಲ ಆಗಿರುವುದು. ಮುಂದಿನ ಬಾರಿಯ ಚುನಾವಣೆ ಸಂದರ್ಭದಲ್ಲಾದರೂ ಇದೆಲ್ಲ ನೆನಪಿರಲಿ. ತನ್ನ ಊರಿಗಾಗಿ ಜನಪ್ರತಿನಿದಿಗಳು ಏನು ಮಾಡಿದ್ದಾರೆ, ಏನು ಮಾಡಲಿದ್ದಾರೆ ಎಂದು ಪ್ರಶ್ನಿಸುವ ಒಂದು ಹಿಡಿ ಧೈರ್ಯ ನಮ್ಮೊಳಗಿರಲಿ. ಹುಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಿಗಳನ್ನು ಸರಿ ದಾರಿಗೆ ತರುವ, ಸ್ವಾರ್ಥವಿಲ್ಲದೆ ಸಮಾಜ ಸೇವೆ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಇನ್ನಷ್ಟು ಸೇವೆಯನ್ನು ಅವರಿಂದ ಪಡೆಯುವ ಜನಪ್ರತಿನಿಧಿಗಳು ನಮಗೆ ಬೇಕು. ಜನರ ಪ್ರಶ್ನೆಗಳಿಗೆ ಉತ್ತರಿಸುವವರು ಬೇಕು. ತಮ್ಮ ಕ್ಷೇತ್ರವನ್ನು ಪ್ರವಾಸಿ ತಾಣ ಎಂದುಕೊಂಡು ಬಂದು ಹೋಗುವ ಜನಪ್ರತಿನಿಧಿಗಳಿಗೆ ವಿಶ್ರಾಂತಿ ನೀಡಬೇಕಿದೆ.
ತಮ್ಮ ಆಪ್ತರನ್ನೆಲ್ಲ ಎದುರು ಹಾಕಿಕೊಂಡು ಚುನಾವಣೆ ಪ್ರಚಾರ ಮಾಡಿದವರೆಲ್ಲ ಈ ಕೊರೊನ ದುರಂತ ಕಾಲದಲ್ಲಿ ಹಾಗೆ ಸಹಾಯ ಪಡೆದ ಎಷ್ಟು ನಾಯಕರು ನೆರವಿಗೆ ನಿಂತರು ಎಂದು ಒಮ್ಮೆ ಯೋಚನೆ ಮಾಡಿ. ಸಹಾಯ ಸಿಕ್ಕಿದ್ದರೆ ಸಂತೋಷ. ಇಲ್ಲದಿದ್ದರೆ ಬದುಕನ್ನು ವಿಸ್ತರಿಸಿಕೊಳ್ಳಿ. ಯಾರ ಬದುಕು ಯಾವಾಗ ಮುಗಿಯುತ್ತದೆ ಎಂದು ತಿಳಿಯದ ಭಯಾನಕ ಸನ್ನಿವೇಶದಲ್ಲಿ ನಾವೆಲ್ಲರೂ ಬದುಕುತ್ತಿದ್ದೇವೆ. ಹೀಗಿರುವಾಗ ಈ ಹೊತ್ತಿನಲ್ಲಾದರು ರಾಜಕೀಯ ಪಕ್ಷಗಳ ಕಾಲ ಬುಡದಲ್ಲಿ ಅಡವಿಟ್ಟ ನಮ್ಮ ನೈತಿಕತೆಯನ್ನು ಸ್ವಲ್ಪ ದಿನದ ಮಟ್ಟಿಗಾದರು ವಾಪಸ್ಸು ಪಡೆಯೋಣ. ಪ್ರಭುತ್ವವನ್ನು ಪ್ರಶ್ನಿಸೋಣ.

ಧರ್ಮ & ಜಾತಿ ಅಂತ ನಮ್ಮಗಳ ಮಧ್ಯೆ ಬೆಂಕಿ ಹಚ್ಚಿ ತಮ್ಮ ಮತಗಳನ್ನು ಗಟ್ಟಿ ಮಾಡಿಕೊಳ್ಳುವ ರಾಜಕಾರಣಿಗಳಿಗೆ ಆಸ್ಪತ್ರೆಗಳನ್ನು ನಿರ್ಮಿಸಿ ಸಾಮಾನ್ಯ ಜನರ ಪ್ರಾಣ ಉಳಿಸಬೇಕೆಂಬ ಧರ್ಮ ನೆನಪಾಗಲಿಲ್ಲವೇ? ದೇಶ ಭಕ್ತಿ ಹಾಗೂ ದೇವರ ಭಕ್ತಿ ರಾಜಕಾರಣಿಗಳು ನಮಗೆ ಕಲಿಸಬೇಕಾ? ಒಂದ್ಸಲ ವಿಚಾರಮಾಡಿ ಇಂಥಹ ಸಮಯದಲ್ಲಿ ಮುಚ್ಚಿದ್ದು ಮಸೀದಿ, ಮಂದಿರಗಳು & ಚರ್ಚ್ ಗಳು ವಿನಃ ಅಸ್ಪತ್ರೆಗಳಲ್ಲ. ರಾಜಕಾರಣಿಗಳಿಗೆ ದುಂಬಾಲು ಬಿದ್ದು ಊರಿಗೆ 10 ಧಾರ್ಮಿಕ ಕೇಂದ್ರಗಳ ಜೊತೆಗೆ ಒಂದು ಸುಸಜ್ಜಿತ ಆಸ್ಪತ್ರೆ ಕೇಳುವ ಗೋಜಿಗೆ ನಾವ್ಯಾರು ಹೋಗಲಿಲ್ಲ. ಕರ್ನಾಟಕ ಅಗ್ರ ಸ್ಥಾನದಲ್ಲಿದ್ದರೂ ರೋಗಿಗಳ ಪರದಾಟವಂತೂ ನಿಂತಿಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿಲ್ಲ ಅಂದ್ರ ಅದು ನಿಲ್ಲೋದು ಇಲ್ಲ. ಆರೋಗ್ಯ ಕ್ಷೇತ್ರದಲ್ಲಿ ಇಲ್ಲಿವರೆಗೂ ಆಳಿದ ಸರ್ಕಾರಗಳು ಮಾಡಿದ ನಿರಾಸಕ್ತಿಯ ಹೂಡಿಕೆಯ ಪರಿಣಾಮವನ್ನು ಇಂದು ನಾವು ಅನುಭವಿಸುತ್ತಿದ್ದೇವೆ ಇದಕ್ಕೆ ಎಲ್ಲಾ ಪಕ್ಷಗಳು, ರಾಜಕಾರಣಿಗಳು ಹಾಗೂ ಅವರ ಹಿಂದೆ ಮುಂದೆ ಸದಾ ತಿರುಗಾಡುವ ಶುದ್ಧ ಬಿಳಿಯ ಬಟ್ಟೆ ಹಾಕಿ ಓಡಾಡುವ ಹಿಂಬಾಲಕರ ಪಡೆ & ಸಾರ್ವಜನಿಕರಾದ ನಾವುಗಳೇ ಕಾರಣ.


ಇಂದಿನ ಪರಿಸ್ಥಿತಿಗೆ ಜಾಗ್ರತಿ ಬೇಕೆ ಬೇಕು.
ಮುಂದಿನ ಉಜ್ವಲ ಸಮಾಜಕ್ಕಾಗಿ.... 👏