ತೇರದಾಳ : ಪಟ್ಟಣದ ಗಾಂಧೀಜಿ ಕ್ರಿಡಾಂಗಣದಲ್ಲಿ ಗುರುವಾರ ಸಂತೆ ಸೇರಿದ ಜನತೆ ಕೋವಿಡ್ ನಿಯಮಗಳನ್ನು ಮರೆತು ಸಂತೆ ಮಾಡಿದರು.
ಕೊರೊನಾ ವೈರಾಣು ರಣಕೇಕೆ ಹಾಕುತ್ತಿದ್ದರೆ ಅದನ್ನು ತಡೆಯವ ಸಲುವಾಗಿ ಪೋಲಿಸರು, ಪುರಸಭೆಯವರು, ವೈದ್ಯರುಗಳು ತಮ್ಮೆಲ್ಲ ಕುಟುಂಬ ಮರೆತು ಜನರ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಆದರೆ ಜನತೆ ಮಾತ್ರ ಇದಾವುದನ್ನು ಗಮನಿಸದೆ ಸರಕಾರದ ಕೋವಿಡ್ ನಿಯಮಗಳನ್ನು ಮರೆತು ಸಂತೆ ಮಾಡುತ್ತಿದ್ದಾರೆ. ಬಹುತೇಕ ಜನರು ಮಾಸ್ಕ್ ಹಾಕಿದ್ದರೆ, ಇನು ಕೆಲವು ಜನರು ಸ್ಯಾನಿಟೈಜರ್ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ಇಲ್ಲಿ ಎಲ್ಲಿಯೂ ಸಾಮಾಜಿಕ ಅಂತರ ಕಾಣುತ್ತಿಲ್ಲ. ಸರಕಾರ ಹಾಕಿರುವ ಜನತಾ ಕಫ್ರ್ಯೂ ಮುಂಜಾನೆ 6ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರಿದಿಗೆ ಅವಕಾಶ ನೀಡಿದೆ. ಆದರೆ ಜನರು 10ಗಂಟೆಯಾಗುತ್ತದೆ ಪೋಲಿಸ್‍ರು ಬರುತ್ತಾರೆ ಎಂಬ ಭಯದಲ್ಲಿ ತರಕಾರಿ ಖರೀದಿ ಮಾಡಲು ಜನ ಮುಗಿ ಬಿಳುತ್ತಿದ್ದಾರೆ.
ತರಕಾರಿ ದುಬಾರಿ ಬೆಲೆ : ಲಾಕಡೌನ ನೆಪದಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿದೆ. ಬಡವರು ತರಕಾರಿ ಕೊಂಡುಕೊಳ್ಳದಂತೆ ಆಗಿದೆ. ಮೊದಲೆ ಕೂಲಿ ಕೆಲಸವಿಲ್ಲದೆ ಜನತೆ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತರಕಾರಿ ಬೆಲೆಗಳು ಗಗನಕ್ಕೇರಿದೆ. ಅಧಿಕಾರಿಗಳು ತರಕಾರಿ ವ್ಯಾಪಾರಸ್ಥರಿಗೆ ಬೆಲೆ ಏರಿಸದಂತೆ ತಾಕೀತು ಮಾಡಬೇಕಾಗಿದೆ.
ಶಾಸಕರು ತಮ್ಮ ವಾಹನದಲ್ಲಿ ಪಟ್ಟಣದ ತುಂಬೆಲ್ಲ ಸಂಚರಿಸಿ ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಿದ್ದಾರೆ. ಪುರಸಭೆಯವರು ಧ್ವನಿ ವರ್ಧಕದ ಮುಖಾಂತರ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಿ ಎಂದು ಹೇಳುತ್ತಿದ್ದರೆ ಇದನ್ನು ಗಮನಿಸದ ಜನತೆ ತರಕಾರಿ ಖರೀದಿ ಮಾಡುವಲ್ಲಿ ಮಗ್ನನಾಗಿದ್ದಾರೆ. ಸೋಂಕಿತರು ಸಂಖ್ಯೆ ಹೆಚ್ಚಾಗುತ್ತಿದೆ, ಜನರು ಕೊರೊನಾ ವೈರಾಣುವಿನಿಂದ ರಕ್ಷಣೆ ಪಡೆಯಲು ಸರಕಾರದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕೊರೊನಾ ವಾರಿಯರ್ಸ್‍ಗಳಿಗೆ ಕೈಜೋಡಿಸಿ ವೈರಾಣು ಹರಡದಂತೆ ಜಾಗೃತೆ ವಹಿಸಬೇಕಾಗಿದೆ. ಜೀವ ಅತ್ಯಮೂಲ್ಯವಾದದು ಅದನ್ನು ಉಳಿಸಿಕೊಳ್ಳಲು ಮನೆಯಲ್ಲಿಯೇ ಇರಬೇಕು. ಸುಖಾಸುಮ್ಮನೆ ಬೈಕ್‍ಗಳ ಮೇಲೆ ಹೊರ ತಿರುಗಾಡದಂತೆ ಮನೆಯಲ್ಲಿಯೇ ಇರಬೇಕು ಎಂದು ಅಧಿಕಾರಿಗಳ ಸಂದೇಶ.
Social Plugin