ವರದಿ : ವಿಜಯ ವಾಜಂತ್ರಿ  

ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತೇರದಾಳ ಪಟ್ಟಣದಲ್ಲಿ ಶನಿವಾರ ಸಾಯಂಕಾಲ ಆಕಸ್ಮೀಕ ರೌಂಡ ಹಾಕಿದರು.

ತೇರದಾಳದಲ್ಲಿ ವೀಕೆಂಡ್ ಕಪ್ರ್ಯೂನಿಂದಾಗಿ ಪಟ್ಟಣದ ಎಲ್ಲ ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದವು.

ಜಿಲ್ಲಾಧಿಕಾರಿ ಪಟ್ಟಣದಲ್ಲಿ ಸಂಚಾರ, ಅನಾವಶ್ಯಕ ಸಂಚರಿಸುವವರಿಗೆ ಲಾಠಿ ರುಚಿ

ವಿಕೆಂಡ್ ಕಫ್ರ್ಯೂನಿಂದಾಗಿ ತೇರದಾಳ ಸಂಪೂರ್ಣ ಲಾಕ್

ತೇರದಾಳ : ಬಾಗಲಕೋಟ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಪಟ್ಟಣದಲ್ಲಿ ಶನಿವಾರ ಸಾಯಂಕಾಲ ಆಕಸ್ಮೀಕ ರೌಂಡ ಹಾಕುವ ಮೂಲಕ ಸ್ಥಳೀಯ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾಳಿಜಿ ತೋರುವ ಮೂಲಕ ಜನರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದರು. ಕೋವಿಡ್ ಎರಡನೇ ಅಲೆ ತನ್ನ ಅಟ್ಟಹಾಸ ಮೆರೆಯುತ್ತಿದ್ದರೂ ಜನ ಎಚ್ಚತ್ತು ಕೊಳ್ಳುತ್ತಿಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ವಾಹನಗಳ ಮೇಲೆ ಸಂಚರಿಸುವವರಿಗೆ ಲಾಠಿ ಏಟು ಕೊಟ್ಟು ಮನೆಯಲ್ಲಿ ಇರುವಂತೆ ಹೇಳಿದರು. 

  ಪಟ್ಟಣದ ಮಹಾವೀರ ಸರ್ಕಲ್, ಬಸ್ ನಿಲ್ದಾಣದಿಂದ ತಮದಡ್ಡಿ ನಾಕಾ ಹಾಗೂ ಅಂಬೇಡ್ಕರ ಸರ್ಕಲ್‍ದವರೆಗೆ ಹೋಗಿ ಅಲ್ಲಿಂದ ಹನಗಂಡಿ ಮಾರ್ಗವಾಗಿ ತೆರಳಿದರು. ದಾರಿಯಲ್ಲಿ ಬರುವ ದ್ವಿಚಕ್ರ ವಾಹನ ಸವಾರರಿಗೆ ಬೆತ್ತದ ರುಚಿ ತೋರಿಸಿದರು. ವೀಕೇಂಡ್ ಲಾಕ್ ಡೌನದಿಂದಾಗಿ ಪಟ್ಟಣದಲ್ಲಿನ ಅಂಗಡಿಗಳು ಸರಕಾರಿ ಕಚೇರಿಗಳು ಸ್ತಬ್ಧವಾಗಿದ್ದವು. ದವಾಖಾನೆಗಳು  ತೆರೆದಿದ್ದವು. ಹಾಲು ಔಷಧ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಔಷಧ ಹಾಗೂ ಹಾಲು ತಗೆದುಕೊಳ್ಳುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಮಾಸ್ಕನ್ನು ಧರಸುವಂತೆ ಅಂಗಡಿಯವರು ಹೇಳುತ್ತಿದ್ದರು. ಜನರು ತಮ್ಮ ತಮ್ಮ ಮನೆಯಲ್ಲಿಯೇ ಇದ್ದು ಸರಕಾರದ ನಿಯಮಗಳನ್ನು ಪಾಲಿಸಿದರು. ಮನೆಯಿಂದ ಯಾರೂ ಹೊರಗೆ ಬರಬೇಡಿ ಎಂದು ಹೇಳುತ್ತಿದ್ದರು. ಅನಗತ್ಯ ಸಂಚರಿಸುವ ವಾಹನ ಸವಾರರಿಗೆ ಪೋಲಿಸ್‍ರು ತಿಳಿ ಹೇಳಿದರು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಪುರಸಭೆಯವರು ಹಾಗೂ ಪೋಲಿಸ್‍ರು ಸಾರ್ವಜನಿಕರಿಗೆ ತಿಳಿಸುತ್ತಿದ್ದರು. ಮನೆಯಿಂದ ಅನಾವರ್ಶಯಕವಾಗಿ ಹೊರ ಬರುವ ಜನರಿಗೆ ಪೋಲಿಸರು ಲಾಠಿ ರುಚಿ ತೋರಿಸುತ್ತಿದ್ದರು. 

  ಪೋಲಿಸ್ ವಾಹನ ಗಸ್ತು ಪಟ್ಟಣದ ತುಂಬೆಲ್ಲ ಸಂಚರಿಸುತ್ತಿತ್ತು. ಪಿಎಸ್‍ಐ ವಿಜಯ ಕಾಂಬಳೆ ಜನರಿಗೆ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬರಬೇಡಿ ಎಂದು ಹೇಳುತ್ತಿದ್ದರು. ಅಲ್ಲಲ್ಲಿ ಜನರು ಕಟ್ಟೆಯ ಮೇಲೆ ಕುಳಿತುಕೊಂಡಿದ್ದರು. ಪೋಲಿಸ್ ವಾಹನ ಬರುತ್ತಿದ್ದಂತೆ ಓಡುತ್ತಿರುವುದು ಕಂಡು ಬಂದಿತು. ನಾಕಾಗಳಲ್ಲಿ ಪೋಲಿಸ್‍ರು ಠೀಕಾಣೆ ಹೂಡಿದ್ದರು.