ಜರ್ಮನಿಯು ದೇಶದ ಬೀದಿಗಳಲ್ಲಿ, ಮನೆಯ ಬಾಲ್ಕನಿಗಳಲ್ಲಿ, ಕಿಟಕಿಗಳಲ್ಲಿ, ಇಡೀ ದೇಶ 6 ನಿಮಿಷಗಳ ಬೆಚ್ಚನೆಯ ಚಪ್ಪಾಳೆಯೊಂದಿಗೆ ಶ್ಲಾಘಿಸಿತು. ಇದೊಂದು ಅನನ್ಯ ನಾಯಕತ್ವ ಮತ್ತು ಮಾನವತೆಯ ರಕ್ಷಣೆಯ ವ್ಯಕ್ತಿತ್ವಕ್ಕೆ ಗೌರವಿಸಿದ ಅವಿಸ್ಮರಣೀಯ ಕ್ಷಣ.
ದೇಶವನ್ನು ಮುನ್ನೆಡೆಸಲು ಜರ್ಮನ್ನರು ಆಕೆಯನ್ನು ಆಯ್ಕೆ ಮಾಡಿದರು, ಮತ್ತು ಆಕೆ 80 ದಶಲಕ್ಷ ಜರ್ಮನ್ನರನ್ನು ಸತತವಾಗಿ 18 ವರ್ಷಗಳ ಕಾಲ ತನ್ನ ಅಸಾಮಾನ್ಯ ಸಾಮರ್ಥ್ಯ, ಅಪೂರ್ವ ಕೌಶಲ್ಯ, ಅನನ್ಯ ಸಮರ್ಪಣಾಭಾವ ಮತ್ತು ಅಗಣಿತ ಪ್ರಾಮಾಣಿಕತೆಯಿಂದ ಮುನ್ನಡೆಸಿದಳು. ಆಕೆ ಎಂದಿಗೂ ಅಸಂಬದ್ಧವಾಗಿ ಮಾತನಾಡಲಿಲ್ಲ. ಛಾಯಾಚಿತ್ರಕ್ಕಾಗಿ ಆಕೆ ಬರ್ಲಿನ್‌ನ ಕಾಲುದಾರಿಗಳಲ್ಲಿ ಯಾವತ್ತು ಕಾಣಿಸಿಕೊಳ್ಳಲಿಲ್ಲ. ಆಕೆಯನ್ನು ಜಗತ್ತು "ದಿ ಲೇಡಿ ಆಫ್ ದಿ ವರ್ಲ್ಡ್" ಎಂದು ಕರೆಯಿತು ಮತ್ತು ಆರು ಮಿಲಿಯನ್ ಪುರುಷರಿಗೆ ಸಮಾನಳೆಂದು ಗುರುತಿಸಲಾಯಿತು. ಅಧಿಕಾರದ ಈ ಹದಿನೆಂಟು ವರ್ಷಗಳ ಅವಧಿಯಲ್ಲಿ ಆಕೆಯ ವಿರುದ್ಧ ಯಾವುದೇ ಕಾನೂನು ಉಲ್ಲಂಘನೆಯ ಪ್ರಕರಣಗಳು ದಾಖಲಾಗಿಲ್ಲ. ಆಕೆ ತನ್ನ ಯಾವುದೇ ಸಂಬಂಧಿಕರನ್ನು ಸರ್ಕಾರಿ ಹುದ್ದೆಗೆ ನಿಯೋಜಿಸಲಿಲ್ಲ. ಆಕೆ ದೇಶದಲ್ಲಿ ಅತ್ಯಂತ ದೊಡ್ಡ ವೈಭವ ಸ್ಥಾಪಿಸುತ್ತೇನೆಂದು ಯಾವತ್ತು ಹೇಳಿಕೊಳ್ಳಲಿಲ್ಲ. ದೇಶದ ಸೇವೆಗಾಗಿ ಆಕೆ ಲಕ್ಷಾಂತರ ರೂಪಾಯಿ ಹಣವನ್ನು ಸಂಬಳವಾಗಿ ಪಡೆಯಲಿಲ್ಲ. ಅವಳ ನಾಯಕತ್ವವನ್ನು, ಹಾವಭಾವಗಳನ್ನು, ಹಾಗು ಕಾರ್ಯಶೈಲಿಯನ್ನು ಯಾರೂ ಹುರಿದುಂಬಿಸಲಿಲ್ಲ. ತನ್ನನ್ನು ಹೊಗಳುವ ಹೊಗಳುಭಟರನ್ನು ಆಕೆ ನೇಮಿಸಿಕೊಂಡಿರಲಿಲ್ಲ. ಆಕೆ ತನ್ನ ಅಧಿರಾವಧಿಯಲ್ಲಿ ಯಾವುದೇ ಬಗೆಯ ಹಕ್ಕುಪತ್ರಗಳಾಗಿ, ಪ್ರತಿಜ್ಞೆಗಳಾಗಲಿ ಸ್ವೀಕರಿಸಲಿಲ್ಲ. ಆಕೆ ತನಗಿಂತ ಹಿಂದೆ ಅಧಿಕಾರ ಮಾಡಿದವರನ್ನು ಯಾವತ್ತು ಟೀಕಿಸಲಿಲ್ಲ. ನಿನ್ನೆ ಏಂಜೆಲಾ ಮರ್ಕೆಲ್ ತನ್ನ ಪಕ್ಷದ ನಾಯಕತ್ವವನ್ನು ತ್ಯಜಿಸಿ ತನ್ನ ನಂತರದವರಿಗೆ ಹಸ್ತಾಂತರಿಸಿದಳು. ಈಗ ಜರ್ಮನಿ ದೇಶ ಮತ್ತು ಜರ್ಮನ್ನರು ಎಲ್ಲ ರಂಗಗಳಲ್ಲಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಆಕೆಯ ನಿವ್ರತ್ತಿಯ ದಿನದಂದು ಜರ್ಮನರ ಪ್ರತಿಕ್ರಿಯೆ ಆ ದೇಶದ ಇತಿಹಾಸದಲ್ಲಿ ಅಭೂತಪೂರ್ವವಾಗಿತ್ತು. ಇಡೀ ದೇಶದ ಜನರು ತಮ್ಮ ಮನೆಗಳ ಬಾಲ್ಕನಿಗಳಲ್ಲಿ ನಿಂತು ನಿರಂತರ 6 ನಿಮಿಷಗಳ ಕಾಲ ಸ್ವಯಂಪ್ರೇರಿತವಾಗಿ ಕರತಾಡನ ಮಾಡಿದರು. ದೇಶದ ಜನ ಆಕೆಗೆ ರಾಷ್ಟ್ರವ್ಯಾಪಿ ಎದ್ದು ನಿಂತು ಗೌರವಿಸಿತು. ಫ್ಯಾಶನ್ ಮೋಹಕ್ಕೆ ಬಲಿಯಾಗದ ಅಥವಾ ದೀಪದ ಬೆಳಕಿನ ಥಳುಕಿನ ಪ್ರಲೋಭನೆಗೆ ಒಳಗಾಗದ ಮತ್ತು ರಿಯಲ್ ಎಸ್ಟೇಟ್ ಮೋಹಕ್ಕೆ ಬಲಿಯಾಗದ, ಹೊಸ ಕಾರುಗಳು ಪಡೆಯದ, ವಿಹಾರ ನೌಕೆಗಳು ಮತ್ತು ಖಾಸಗಿ ವಿಮಾನಗಳನ್ನು ಬಯಸದ ರಾಸಾಯನಿಕ ಭೌತಶಾಸ್ತ್ರಜ್ಞೆಯಾದ ತನ್ನ ನಾಯಕಿಗೆ ಜರ್ಮನಿ ಅವಿಸ್ಮರಣೀಯ ವಿದಾಯ ಹೇಳಿದೆ. ಜರ್ಮನಿಯನ್ನು ಅಗ್ರಸ್ಥಾನಕ್ಕೆ ತಂದ ನಂತರ ಆಕೆ ತನ್ನ ಹುದ್ದೆಯನ್ನು ತೊರೆದಳು. ಆಕೆ ಹೊರಟುಹೋಗುವ ತನಕ ಅವಳ ಹತ್ತಿರದ ಸಂಬಂಧಿಕರು ಆಕೆಯಿಂದ ಪ್ರಯೋಜನವನ್ನು ಪಡೆಯಲಿಲ್ಲ. ಹದಿನೆಂಟು ವರ್ಷಗಳ ಅವಧಿಯಲ್ಲಿ ಆಕೆ ಎಂದಿಗೂ ತನ್ನ ವಾರ್ಡ್ರೋಬ್ ಗಳನ್ನು ಸಹ ಬದಲಾಯಿಸಲಿಲ್ಲ. ದೇವರು ಇಂಥ ಮೌನಿ ನಾಯಕತ್ವವನ್ನು ಹರಸುತ್ತಿರಲಿ. ಪತ್ರಿಕಾಗೋಷ್ಠಿಯಲ್ಲಿ, ಮಹಿಳಾ ಪತ್ರಕರ್ತೆ ಒಬ್ಬಳು ಮರ್ಕೆಲ್ ಳನ್ನು ಹೀಗೆ ಪ್ರಶ್ನಿಸಿದಳು: ನೀವು ಒಂದೇ ಸೂಟ್ ಧರಿಸಿರುವುದನ್ನು ನಾವು ಗಮನಿಸುತ್ತಿದ್ದೇವೆ, ನಿಮಗೆ ಬೇರೆ ಮತ್ತೊಂದಷ್ಟು ಸೂಟ್ಸ್ ಇಲ್ಲವೇ? ಅದಕ್ಕೆ ಆಕೆ ಹೀಗೆ ಉತ್ತರಿಸಿದಳು: "ನಾನು ಸರ್ಕಾರಿ ನೌಕರಳೇ ಹೊರತು ಜಾಹಿರಾತಿನಲ್ಲಿ ಅಭಿನಯಿಸುವ ಮೊಡೆಲ್ ಅಲ್ಲ." ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಆಕೆಯನ್ನು ಹೀಗೆ ಕೇಳಿದರು: ನಿಮ್ಮ ಮನೆಯನ್ನು ಸ್ವಚ್ಛಗೊಳಿಸುವ, ನಿಮ್ಮ ಊಟವನ್ನು ತಯಾರಿಸುವ ಕೆಲಸದ ಗೃಹಿಣಿಯರನ್ನು ನೀವು ಹೊಂದಿದ್ದೀರಾ? ಆಕೆಯ ಉತ್ತರ ಹೀಗಿತ್ತು: "ಇಲ್ಲ, ನನಗೆ ಸೇವಕರಿಲ್ಲ ಹಾಗು ಅವರ ಅಗತ್ಯವೂ ಇಲ್ಲ. ನನ್ನ ಪತಿ ಮತ್ತು ನಾನು ಪ್ರತಿದಿನ ಮನೆಯಲ್ಲಿ ಆ ಎಲ್ಲ ಕೆಲಸಗಳನ್ನು ಸ್ವಂತ ಮಾಡಿಕೊಳ್ಳುತ್ತೇವೆ. ಆಗ ಮತ್ತೊಬ್ಬ ಪತ್ರಕರ್ತ ಕೇಳಿದ: ನೀವು ಅಥವಾ ನಿಮ್ಮ ಪತಿ ಯಾರು ಬಟ್ಟೆ ಒಗೆಯುತ್ತಿದ್ದಾರೆ? ಅವಳ ಉತ್ತರ: "ನಾನು ಬಟ್ಟೆಗಳನ್ನು ವ್ಯವಸ್ಥೆ ಮಾಡಿಡುತ್ತೇನೆ, ಮತ್ತು ನನ್ನ ಪತಿ ಬಟ್ಟೆ ತೊಳೆಯುವ ಯಂತ್ರವನ್ನು ನಿರ್ವಹಿಸುತ್ತಾರೆ. ಈ ಕೆಲಸ ನಾವು ಸಾಮಾನ್ಯವಾಗಿ ರಾತ್ರಿಯಲ್ಲಿ ಮಾಡುತ್ತೇವೆ, ಏಕೆಂದರೆ ವಿದ್ಯುತ್ ನ ಲಭ್ಯತೆ ಮತ್ತು ಅದರ ಮೇಲೆ ಯಾವುದೇ ಒತ್ತಡ ಆಗ ಇರುವುದಿಲ್ಲ. ಅತ್ಯಂತ ಮುಖ್ಯವಾದ ವಿಷಯವೆಂದರೆ ನೆರೆಹೊರೆಯವರಿಗೆ ಸಂಭವನೀಯ ಅನಾನುಕೂಲತೆಯನ್ನು ಲೆಕ್ಕಹಾಕಿ, ನಾವು ನಮ್ಮ ಅಪಾರ್ಟ್ಮೆಂಟ್ ಅನ್ನು ನೆರೆಹೊರೆಯವರಿಂದ ಬೇರ್ಪಡಿಸುವ ಗೋಡೆಯು ದಪ್ಪವಾಗಿರುವಂತೆ ಮಾರ್ಪಡಿಸಿದ್ದೇವೆ. ನೀವು ಹೀಗೆ ವೈಯಕ್ತಿಕ ಪ್ರಶ್ನೆ ಕೇಳುವ ಬದಲಿಗೆ ಸರ್ಕಾರದ ಕೆಲಸದಲ್ಲಿನ ಯಶಸ್ಸು ಮತ್ತು ವೈಫಲ್ಯಗಳ ಬಗ್ಗೆ ನನ್ನನ್ನು ಪ್ರಶ್ನಿಸಬೇಕೆಂದು ನಾನು ನಿರೀಕ್ಷಿಸಿದ್ದೇನೆ." ಶ್ರೀಮತಿ ಮರ್ಕೆಲ್ ಇತರ ನಾಗರಿಕರಂತೆ ಸಾಮಾನ್ಯ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾಳೆ. ಆಕೆ ಜರ್ಮನಿಯ ಚಾನ್ಸೆಲರ್ ಆಗಿ ಆಯ್ಕೆಯಾಗುವ ಮೊದಲು ಈ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಳು. ಚಾನ್ಸಲರ್ ಹುದ್ದೆಗೆ ಹೋದಮೇಲೆ ಅದನ್ನು ಆಕೆ ಬಿಡಲಿಲ್ಲ ಮತ್ತು ಬಂಗ್ಲೆ, ಸೇವಕರು, ಈಜುಕೊಳಗಳು ಅಥವಾ ಉದ್ಯಾನಗಳು ಇಷ್ಟಪಡಲಿಲ್ಲ. ಶ್ರೀಮತಿ ಮಾರ್ಕೆಲ್ ಈಗ ಯುರೋಪಿನ ಅತಿದೊಡ್ಡ ಆರ್ಥಿಕತೆಯಾಗಿರುವ ಜರ್ಮನಿಯ ಮಾಜಿ ಚಾನ್ಸಲರ್. ನಮ್ಮ ದೇಶದ ಜನರ ಅರಿವಿಗಾಗಿ ಈ ಸಂಗತಿಯನ್ನು ಹಂಚಿಕೊಳ್ಳಿ.
Social Plugin