ವರದಿ : ವಿಜಯ ವಾಜಂತ್ರಿ
ತೇರದಾಳದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ವಾಸ್ತವ್ಯ ಕಾರ್ಯಕ್ರಮದಲ್ಲಿ ಉಪನಿದೇರ್ಶಕ ಮಹೇಶ ಪೋತದಾರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ತೇರದಾಳದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದ ವಾಸ್ತವ್ಯ ಕಾರ್ಯಕ್ರಮದಲ್ಲಿ ಉಪನಿದೇರ್ಶಕ ಮಹೇಶ ಪೋತದಾರ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿದೇರ್ಶಕರಿಂದ ವಸತಿ ನಿಲಯ ವಾಸ್ತವ್ಯ 
ಪುಸ್ತಕ ಎನ್ನುವ ಶಕ್ತಿಗೆ ಸರಿ ಸಮಾನವಾದದು ಯಾವುದು ಇಲ್ಲ
ತೇರದಾಳ : ಆತ್ಮ ವಿಶ್ವಾಸದ ಕೊರತೆಯಿಂದ ಭಯ ಉಂಟಾಗುತ್ತದೆ. ಆತ್ಮ ವಿಶ್ವಾಸ ಬರಬೇಕಾದರೆ ಏಕಾಗ್ರತೆ ಬೇಕು. ಪುಸ್ತಕ ಎನ್ನುವ ಶಕ್ತಿಗೆ ಸರಿ ಸಮಾನವಾದದು ಯಾವುದು ಇಲ್ಲ. ವಿದ್ಯಾರ್ಥಿಗಳು ಕೋವಿಡ್‍ದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಹೆದರದೆ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಬಾಗಲಕೋಟ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಮಹೇಶ ಪೋತದಾರ ಹೇಳಿದರು.
   ಪಟ್ಟಣದ ಬಾಲಕರ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಲಿ ಎಂದು ಹಮ್ಮಿಕೊಂಡ ವಸತಿ ನಿಲಯ ವಾಸ್ತವ್ಯ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಗುಂಪು ಅಭ್ಯಾಸ ಹಾಗೂ ಗುಂಪು ಚರ್ಚೆಯಿಂದ ಓದಿದ ವಿಷಯ ಹೆಚ್ಚು ಮನನವಾಗುವುದು. ನಿಮ್ಮ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗಲಿ. ಕೋವಿಡ್ ನಿಯಮಗಳನ್ನು ಪಾಲಿಸಿ ಸಮಯ ಪ್ರಜ್ಞೆ ಚಾಕ ಚಕ್ಯೆತೆಯಿಂದ ಈ ಮಹಾಮಾರಿ ಕೊರೊನಾವನ್ನು ದೂರ ಓಡಿಸಬಹುದು. ಗೆಲವು ಎಲ್ಲರಿಗೂ ಸಿಗುವುದಿಲ್ಲ, ಗೆಲ್ಲಬೇಕು ಎಂಬ ಛಲ ಎಲ್ಲರಲ್ಲೂ ಇರುತ್ತದೆ ಎಂದರು.
  ಶಿಕ್ಷಣ ಸಂಯೋಜಕರಾದ ಶ್ರೀಶೈಲ ಬುರ್ಲಿ ಉಪನ್ಯಾಸಕರಾಗಿ ಮಾತನಾಡಿ ವಿದ್ಯಾಗಮ, ಸಂವೇದ ಕಾರ್ಯಕ್ರಮಗಳ ಮೂಲಕ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಮಾಡಲಾಗಿದೆ. ಸರಣಿ ಪರೀಕ್ಷೆಗಳಿಂದ ಮಕ್ಕಳಲ್ಲಿ ಧೈರ್ಯ ತುಂಬು ಕೆಲಸವನ್ನು ಶಾಲೆಯವರು ಮಾಡುತ್ತಿದ್ದಾರೆ. ಯಾರು ತಲೆ ತಗ್ಗಿಸಿ ಪುಸ್ತಕವನ್ನು ಓದುತ್ತಾರೆ ಅವರು ಝಿವನ ರ್ಪೈಂತರ ತಲೆ ಎತ್ತುತ್ತಾರೆ. ಪಠ್ಯಪುಸ್ತಕಗಳೇ ಬೈಬಲ್‍ಗಳು. ಇಲಾಖೆಯ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. 
   ಎಸ್‍ಎಮ್ ಹೈಸ್ಕೂಲ ಮುಖ್ಯಾಧ್ಯಾಪಕ ಡಿ.ಬಿ.ಪಾಟೀಲ, ನೇಮಿನಾಥ ಜಮಖಂಡಿ ಪೃಈಕ್ಷೆಗಳ ಕುರಿತು ಮಾತನಾಡಿದರು.
ಎಮ್.ಬಿ.ಪಾಟೀಲ, ಬಿ.ಬಿ ಅರಬಾಳೆ, ಮಂಜು ಆಲಗೂರ, ವಸಂತ ಹಿರೇಮಠ, ಎಸ್.ಬಿ.ಸಾವಂತನವರ ಸೇರಿದಂತೆ ತಾಲೂಕಿನ ಎಲ್ಲ ವಸತಿ ನಿಲಯ ಪಾಲಕರು, ಬಾಲಕೀಯರ ವಸತಿ ನಿಲಯದ ಮೇಲ್ವಚಾರಕರು ಸೇರಿದಂತೆ ಇನ್ನಿತರರು ವಿದ್ಯಾರ್ಥಿಗಳು ಇದ್ದರು. 
 ಪರಿವರ್ತನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು. ಬಂದಿರುವ ಎಲ್ಲ ಅತಿಥಿಗಳಿಗೆ ಅಂಬೇಡ್ಕರ ಜೀವನ ಚರಿತ್ರೆ ಪುಸ್ತಕವನ್ನು ನೀಡಿದರು. ವಿದ್ಯಾರ್ಥಿನೀಯರು ಪ್ರಾರ್ಥಿಸಿದರು. ಸಹಾಯಕ ನಿರ್ದೇಶಕ ಸಿ.ಎಸ್. ಗಡದೇವರಮಠ ಸ್ವಾಗತಿಸಿದರು. ಈರಯ್ಯ ಮಠಪತಿ ನಿರೂಪಿಸಿದರು. ಕಚೇರಿ ಅಧೀಕ್ಷಕ ಸಿದ್ದು ನ್ಯಾಮಗೌಡ ವಂದಿಸಿದರು.