ವರದಿ : ವಿಜಯ ವಾಜಂತ್ರಿ
ತೇರದಾಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ಹಾಗೂ ಸ್ಮಾರಕಗಳ ನಿರ್ಮಾಣಕ್ಕೆ 1ಕೋಟಿ ರೂ. ಮಂಜೂರ ಮಾಡಿದ ಆದೇಶ ಪ್ರತಿಯನ್ನು ಶಾಸಕ ಸಿದ್ದು ಸವದಿಯವರು ದಲಿತ ಮುಖಂಡರಿಗೆ ಹಸ್ತಾಂತರಿಸಿದರು.
ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ಹಾಗೂ ಸ್ಮಾರಕಗಳ ನಿರ್ಮಾಣಕ್ಕೆ 1ಕೋಟಿ ರೂ. ಮಂಜೂರು
ತೇರದಾಳ : ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ಹಾಗೂ ಸ್ಮಾರಕಗಳ ನಿರ್ಮಾಣಕ್ಕೆ ಸಮಾಜಕಲ್ಯಾಣ ಇಲಾಖೆ ಸಚಿವರಾದ ಬಿ.ಶ್ರೀರಾಮಲು ಹಾಗೂ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿಯವರು 1ಕೋಟಿ ರೂ.ಗಳನ್ನು ಮಂಜೂರಿಸಿ ಆದೇಶವನ್ನು ದಲಿತ ಮುಖಂಡರಿಗೆ ಹಸ್ತಾಂತರಿಸಿದ್ದಾರೆ.
ಪಟ್ಟಣದ ದಲಿತ ಸಮುದಾಯದ ಮುಖಂಡರು ಸೇರಿ ಶಾಸಕರಿಗೆ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ನಿರ್ಮಾಣ ಕುರಿತು ಮನವಿಯನ್ನು ಸಲ್ಲಿಸಿದ್ದರು. ಮನವಿ ಬೇಗನೆ ಸ್ಪಂಧಿಸಿ ಸಮಾಜ ಕಲ್ಯಾಣ ಇಲಾಖೆಯಿಂದ 1ಕೋಟಿ ರೂ.ಗಳನ್ನು ಮಂಜೂರು ಮಾಡಿ ಈಗ 30ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಗೂ ಕಾಮಗಾರಿಗಳ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವರದಿಯನ್ನು ಆದರಿಸಿ ಬಾಕಿ ಅನುದಾನವನ್ನು ಬಿಡುಗಡೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ನಿರ್ಮಾಣ ಹಾಗೂ ಸ್ಮಾರಕಗಳ ನಿರ್ಮಾಣಕ್ಕೆ 1ಕೋಟಿ ರೂ. ಅನುದಾನವನ್ನು ಮಂಜೂರು ಮಾಡುವಲ್ಲಿ ಶಾಸಕರ ಪ್ರಯತ್ನ ಹಾಗೂ ದಲಿತ ಸಮುದಾಯ ಮೇಲಿಟ್ಟಿರುವ ಅಪಾರ ಕಾಳಜಿಗೆ ಪಟ್ಟಣದ ದಲಿತ ಸಮುದಾಯ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಶ್ರೀರಾಮಲು ಹಾಗೂ ಶಾಸಕ ಸಿದ್ದು ಸವದಿಯವರನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ರಮೇಶ ಧರೆನ್ನವರ, ನಾಗಪ್ಪ ದೊಡಮನಿ, ಚಂದ್ರಕಾಂತ ದೊಡಮನಿ, ವಿದಯಾನಂದ ದೊಡಮನಿ, ರವಿ ದೊಡಮನಿ ಸೇರಿದಂತೆ ಇನ್ನಿತರರು ಇದ್ದರು.

Social Plugin