ವರದಿ : ವಿಜಯ ವಾಜಂತ್ರಿ
ತೇರದಾಳದ ಕಲ್ಲಟ್ಟಿ ಗಲ್ಲಿಯಲ್ಲಿ ಮಹಾತ್ಮಾ ಜ್ಯೋತಿಭಾ ಪುಲೆ ಯುವಕ ಸಂಘದ ವತಿಯಿಂದ ಮಹಾತ್ಮಾ ಜ್ಯೋತಿಭಾ ಪುಲೆಯವರ 194ನೇ ಜಯಂತ್ಯೋತ್ಸವ ಸಮಾರಂಭವನ್ನು ಗುರುಗಂಗಾಧರ ದೇವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ತೇರದಾಳ : ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಸಮಾನ ಬಾಳು, ಎಲ್ಲರಿಗೂ ಶಿಕ್ಷಣ ಸಿಗಬೇಕು, ಅಸಹಾಯಕ ಹೆಣ್ಣು ಮಕ್ಕಳ ಬಾಳನ್ನು ಬೆಳಗಿಸಿದ ಸ್ತ್ರೀ ಸ್ವಾತಂತ್ರ ಕಹಳೆಯನ್ನು ಉದಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ ಎಂದು ಬಾಗಲಕೋಟ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷ ವಿದ್ಯಾಧರ ಸವದಿ ಹೇಳಿದರು.
ಪಟ್ಟಣದ ಕಲ್ಲಟ್ಟಿ ಗಲ್ಲಿಯಲ್ಲಿ ಮಹಾತ್ಮಾ ಜ್ಯೋತಿಭಾ ಪುಲೆ ಯುವಕ ಸಂಘದ ವತಿಯಿಂದ ಮಹಾತ್ಮಾ ಜ್ಯೋತಿಭಾ ಪುಲೆಯವರ 194ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಸಮಾಜದ ಏಳಿಗೆಯನ್ನು ಕಾಣದೆ ದೇಶದಲ್ಲಿರುವ ದೀನದಲಿತರ ಜೀವನದಲ್ಲಿ ಬಂದಿರುವ ಕತ್ತಲೆಯನ್ನು ಹೋಗಲಾಡಿಸಲು ಜ್ಯೋತಿಯಾಗಿ ಬಂದಿರುವ ಜ್ಯೋತಿಭಾ ಪುಲೆಯವರು ಆಗಿದ್ದಾರೆ. ದೇಶದಲ್ಲಿ ಹೆಮ್ಮಾರಿ ಕೊರೊನಾ ಎರಡನೇ ಅಲೆ ತನ್ನ ಕಬಂದ ಬಾಹುವನ್ನು ಚಾಚಿ ಸಾಕಷಷ್ಟು ಜನರನ್ನು ಬಲಿ ತಗೆದುಕೊಳ್ಳುತ್ತಿದೆ. ಎಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಆರೋಗ್ಯವಾಗಿರಬೇಕು ಹಾಗೂ ದೇಶದ ಆರೋಗ್ಯವನ್ನು ಕಾಪಡಬೇಕು ಎಂದರು.
ಸಂತೋಷ ಬಡಕಂಬಿ, ಪ್ರಭಾವತಿ ಬೋರಗಾಂವಕರ ತಮ್ಮ ಉಪನ್ಯಾಸದಲ್ಲಿ ಮಹಾತ್ಮಾ ಎಂದು ಅಧಿಕೃತವಾಗಿ ಬಿರುದನ್ನು ಪಡೆದವರು, ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಬ್ರೀಟಿಷ್ ಅಧಿಕಾರಿಗಳು ಮಹಾತ್ಮಾ ಜ್ಯೋತಿಭಾ ಪುಲೆಯವರನ್ನು ಸತ್ಕಾರ ಮಾಡಿದರು ಎಂದರು. ಪಿಎಸ್‍ಐ ವಿಜಯ ಕಾಂಬಳೆ, ಸದಾಶಿವ ಬೂಟಾಳಿ, ಡಾ.ಪದ್ಮಜೀತ ನಾಡಗೌಡಪಾಟೀಲ, ಬಸವರಾಜ ಕೊಕಟನೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾಳಿ ಸಮಾಜದ ನಿವೃತ್ತ ಯೋಧ ಮಾರುತಿ ಹೊಸಮನಿ, ಎಮ್.ಬಿ.ಮಾಳೇದ, ಪಿಎಸ್‍ಐ ಆಗಿ ನೇಮಕಗೊಂಡು ತರಬೇತಿ ಪಡೆಯುತ್ತಿರುವ ರಾಹುಲ ಪುರಾಣಿಕ ಇವರನ್ನು ಸನ್ಮಾನಿಸಿದರು.
ಸ್ಥಳೀಯ ಹಿರೇಮಠದ ಗುರುಗಂಗಾಧರ ದೇವರು ಸಾನಿಧ್ಯಹಿಸಿ ಆಶೀರ್ವಚನ ನೀಡಿದರು. ಪರಪ್ಪ ಅಥಣಿ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ದೇಸ್ತೋಟ, ಸದಾಶಿವ ಹೊಸಮನಿ, ಬಸಪ್ಪ ಮುಕರಿ, ಸದಾಶಿವ ಪುಠಾಣಿ, ಸಂಗೀತಾ ಪಾಟೀಲ, ಅಶೋಕ ಲಿಂಬಿಗಿಡದ, ಶರೀಕಾತ ಕೋರಿ, ಪರಪ್ಪ ಅಥಣಿ,ಬಸವರಾಜ ಮಾಳಿ, ಮುರಿಗೆಪ್ಪ ಮಾಲಗಾರ, ಶೇಖರ ಗುಬಚಿ, ಶಂಕರ ಸೋರಗಾವಿ,ಸಂಜು ಹೊಸಮನಿ, ಪ್ರಭು ಮಾಳಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು.
ಹನಮಂತ ಕೌಜಲಗಿ ಪ್ರಾರ್ಥಿಸಿದರು. ಟಿ.ಪಿ.ಅಥಣಿ ನಿರೂಪಿಸಿದರು. ಎಮ್.ಬಿ.ಮಾಳೇದ ಸ್ವಾಗತಿಸಿದರು.
ಭಾವ ಚಿತ್ರ ಮೆರವಣಿಗೆ : ಶ್ರೀಅಲ್ಲಮಪ್ರಭು ದೇವಸ್ಥಾನದಿಂದ ಕುಂಭ ಮೇಳದೊಂದಿಗೆ ಭಾವಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

Social Plugin