ವರದಿ : ವಿಜಯ ವಾಜಂತ್ರಿ
ತೇರದಾಳದ ಖೋತ ಇಂಗ್ಲಿಷ್ ಟುಟೋರಿಯಲ್ಸ್‍ನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಶಿಕ್ಷಣಸಂಯೋಜಕ ಶ್ರೀಶೈಲ ಬುರ್ಲಿ ಉದ್ಘಾಟಿಸಿದರು.
ನಿರಂತರ ಓದಿನಿಂದ ಸಾಧನೆ ಮಾಡಲು ಸಾಧ್ಯ-ಶ್ರೀಶೈಲ ಬುರ್ಲಿ
ತೇರದಾಳ : ನಿರಂತರ ಓದಿನಿಂದ ಸಾಧನೆ ಮಾಡಲು ಸಾಧ್ಯ. ಟಿವ್ಹಿ ಮೊಬೈಲ್‍ಗಳಿಗೆ ಮಾರು ಹೋಗದೇ ಟಿವ್ಹಿಗಳಲ್ಲಿ ವಿದ್ಯಾರ್ಥಿ ಜೀವನಕ್ಕೆ ಬೇಕಾಗುವ ಸಾಕಷ್ಟು ವಿಷಯಗಳು ಪ್ರಸಾರಗೊಳ್ಳುತ್ತಿದ್ದು ಅವುಗಳನ್ನು ನೋಡಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಶಿಕ್ಷಣ ಸಂಯೋಜನ ಶ್ರೀಶೈಲ ಬುರ್ಲಿ ಹೇಳಿದರು.
ಪಟ್ಟಣದ ಖೋತ ಇಂಗ್ಲಿಷ ಟುಟೋರಿಯಲ್ಸ್‍ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಯೂಟ್ಯೂಬ್‍ಗಳಲ್ಲಿ ಬರುವಂತ ಪಾಠಗಳನ್ನು ಅಧ್ಯಯನ ಮಾಡಬೇಕು. ಸಾಧನೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳು ಒಂದೊಂದು ಮೆಟ್ಟಿಲುಗಳು ಇದ್ದಂತೆ. ಇನ್ನು ಹೆಚ್ಚಿನ ವಿಷಯಗಳನ್ನು ತಿಳಿಯಲು ಕೊಚಿಂಗ್ ಕ್ಲಾಸ್‍ಗಳು ಸಹಕಾರಿಯಾಗುತ್ತಿವೆ. ಕೊರೊನಾ ಮಹಾಮಾರಿಯಿಂದಾಗಿ ಕಳೆದ ಹತ್ತು ತಿಂಗಳಿಂದ ಬಂದ್ ಆಗಿರುವ ಶಾಲೆಗಳು ಈಗ ಹಂತಹಂತವಾಗಿ ಪ್ರಾರಂಭಗೊಳ್ಳುತ್ತಿವೆ. ಇನ್ನೂ ಪ್ರಾರಂಭವಾಗದೇ ಇರುವ ತರಗತಿಗಳ ಅಭ್ಯಾಸಕ್ಕಾಗಿ ಚಂದನ ವಾಹಿನಿಯಲ್ಲಿ ಸಂವೇದ ಕಾರ್ಯಕ್ರಮ, ಹಾಗೂ ಆನ್‍ಲೈನ್ ಕ್ಲಾಸ್‍ಗಳು ಪ್ರಾರಂಭವಾಗಿವೆ ಅವುಗಳನ್ನು ನೋಡಿ ಅಭ್ಯಾಸ ಮಾಡಬೇಕು. ಈ ಸಂಸ್ಥೆಯ ಶಿಕ್ಷಕರು ಯೂಟ್ಯೂಬ್‍ಗಳಲ್ಲಿ ಪಾಠ ಮಾಡುವುದರಿಂದ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗುವುದು ಎಂದರು.
ಸಮಾರಂಭದಲ್ಲಿ ಡಿ.ಬಿ.ಪಾಟೀಲ, ಮಂಗಳೂರಿನ ಪಿಎಸ್‍ಐ ಪ್ರಕಾಶ ಬಂತಿ, ಸಿಆರ್‍ಪಿ ಎಸ್.ಬಿ.ಮೋಮಿನ್ ಮಾತನಾಡಿದರು.
ಇದೇ ಸಂದರ್ಭದಲ್ಲಿ ಆದರ್ಶ ಶಾಲೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು, ಎನ್‍ಎನ್‍ಎಮ್‍ಎಸ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳನ್ನು, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಮ್.ಎಸ್.ಖೋತ ಅಧ್ಯಕ್ಷತೆ ವಹಿಸಿದ್ದರು. ಮೌನೇಶ ಬಡಿಗೇರ, ಎಸ್.ಎಸ್.ಮಲಾಬದಿ ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಇದ್ದರು. ನಾಮದೇವ ಖೋತ ನಿರೂಪಿಸಿದರು.

Social Plugin