ವರದಿ : ವಿಜಯ ವಾಜಂತ್ರಿ
ತೇರದಾಳ ತಾಲೂಕಾ ಹೋರಾಟ ಸಮೀತಿಯಿಂದ ನೂತನ ತಾಲೂಕಿಗೆ ಹಳ್ಳಿಗಳ ವಿಂಗಡಣೆ ಮಾಡುವಂತೆ ಒತ್ತಾಯಿಸಿ ವಿಶೇಷ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಳ್ಳಿಗಳು ಹಾಗೂ ಗಡಿಗಳ ವಿಂಗಡಣೆ ಮಾಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ
ತೇರದಾಳ : ತೇರದಾಳ ತಾಲೂಕಾ ಹೋರಾಟ ಸಮೀತಿಯು ತೇರದಾಳ ನೂತನ ತಾಲೂಕಿಗೆ ಹಳ್ಳಿಗಳನ್ನು ಹಾಗೂ ಗಡಿಯನ್ನು ಗುರುತಿಸುವಂತೆ ಒತ್ತಾಯಿಸಿ ಇಂದು ವಿಶೇಷ ತಹಶೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
  ಸರಕಾರ ತೇರದಾಳ ಪಟ್ಟಣದವನ್ನು ನೂತನ ತಾಲೂಕವನ್ನಾಗಿ ಘೋಷಣೆ ಮಾಡಿ ಇಂದಿಗೆ ಮೂರು ವರ್ಷಗಳು ಕಳೆದರು ಈವರೆಗೆ ಹಳ್ಳಿಗಳನ್ನು ಹಾಗೂ ಗಡಿಗಳನ್ನು ಗುರುತಿಸುವಲ್ಲಿ ಜಿಲ್ಲಾಡಳಿತ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಸರಕಾರದ ಕಾರ್ಯದರ್ಶಿಯವರಿಂದ ಮೂರು ಬಾರಿ ಪತ್ರ ಬಂದರೂ ಗಡಿಗಳನ್ನು ಹಳ್ಳಿಗಳನ್ನು ಗುರುತಿಸುವಲ್ಲಿ ನಿರ್ಲಕ್ಷ್ಯ ತೋರುತಿದೆ ಇದರಿಂದ ತೇರದಾಳ ಪಟ್ಟಣದ ಜನತೆಗೆ ನೋವು ತಂದಿದೆ. ಸಾಕಷ್ಟು ಬಾರಿ ಲಿಖಿತವಾಗಿ ಮನವಿಗಳನ್ನು ಕೊಟ್ಟರು ವಿಳಂಬಮಾಡುತ್ತಿರುವುದು ಏಕೆ ಎಂಬುವುದು ತಿಳಿಯುತ್ತಿಲ್ಲವೆಂದು ಸಮೀತಿಯ ಸದಸ್ಯರು ಮಾತನಾಡಿದರು.
  ಐತಿಹಾಸಿಕ ತೇರದಾಳ ಪಟ್ಟಣವನ್ನು ತಾಲೂಕವನ್ನಾಗಿ ಮಾಡುವಂತೆ ಸುಮಾರು 48ವರ್ಷಗಳವರೆಗೆ ಹೋರಾಟ ಮಾಡಲಾಗಿತ್ತು. ಆ ಹೋರಾಟದ ಫಲವಾಗಿ ತೇರದಾಳ ಪಟ್ಟಣವನ್ನು ನೂತನ ತಾಲೂಕವನ್ನಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಘೋಷಣೆ ಮಾಡಿ ಇಂದಿಗೆ ಮೂರು ವರ್ಷಗಳು ಕಳೆದರೂ ಈ ವರೆಗೆ ನೂತನ ತೇರದಾಳ ತಾಲೂಕಿಗೆ ಹಳ್ಳಿಗಳ£ನ್ನು ಹಾಗೂ ಗಡಿಗಳನ್ನು ಗುತಿಸುವ ಕಾರ್ಯ ನಡೆದಿಲ್ಲವೆಂದರು. ಆದಷ್ಟು ಬೇಗನೆ ಹಳ್ಳಿಗಳನ್ನು ಹಾಗೂ ಗಡಿಗಳನ್ನು ಗುರುತಿಸಬೇಕು, ವಿಳಂಬವಾದರೆ ಹೋರಾಟ ದಾರಿ ಹಿಡಿಯುವುದು ಅನಿವಾರ್ಯವಾಗಿದೆ ಎಂದು ಸಮೀತಿಯವರು ತಿಳಿಸಿದರು.
  ಈ ಸಂದರ್ಭದಲ್ಲಿ ತಾಲೂಕಾ ಹೋರಾಟ ಸಮೀತಿಯ ಅಧ್ಯಕ್ಷ ಬುಜಬಲಿ ಕೆಂಗಾಲಿ, ಅನ್ವರ ಸಂಗತ್ರಾಸ್, ಪ್ರಭು ಹೂಗಾರ, ಸುಲೇಮಾನ ಮುಕ್ಕೇರಿ, ಅಡಿವೆಪ್ಪ ಗೋಲಭಾವಿ, ಚಿಕ್ಕಪ್ಪ ಲೋಹಾರ ಸೇರಿದಂತೆ ನೂರಾರು ಜನರು ಇದ್ದರು.