ತೇರದಾಳ ಪಟ್ಟಣದಲ್ಲಿ ನೂತನವಾಗಿ ಅಗ್ನಿಶಾಮಕ ಶಾಖೆಯನ್ನು ಸ್ಥಾಪಿಸಲು ಹುಬ್ಬಳ್ಳಿಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಸ್ಥಳ ಪರಿಶೀಲನೆ ಮಾಡಿದರು.
ನೂತನವಾಗಿ ಅಗ್ನಿಶಾಮಕ ಶಾಖೆಯನ್ನು ಸ್ಥಾಪಿಸಲು ಸ್ಥಳ ಪರಿಶೀಲನೆ
ತೇರದಾಳ : ಪಟ್ಟಣದ ಕಲೂತಿ ನಗರದಲ್ಲಿ ಖಾಲಿಯಿರುವ 20ಗುಂಟೆ ಜಾಗೆಯಲ್ಲಿ ನೂತನವಾಗಿ ಅಗ್ನಿಶಾಮಕ ಶಾಖೆಯನ್ನು ಸ್ಥಾಪಿಸಲು ಹುಬ್ಬಳ್ಳಿಯ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶ್ರೀಕಾಂತ ಅವರು ಸ್ಥಳ ಪರಿಶೀಲನೆ ಮಾಡಿದರು.
ತೇರದಾಳ ತಾಲೂಕಿಗೆ ನೂತನವಾಗಿ ಅಗ್ನಿಶಾಮಕ ಶಾಖೆ ಮಂಜೂರಾಗಿರುವುದರಿಂದ ಶಾಕೆಯನ್ನು ಪ್ರಾರಂಭಿಸಲು ಸ್ಥಳ ಪರಿಶೀಲನೆ ಮಾಡಲಾಯಿತು. ಜಮಖಂಡಿ-ಕಾಗವಾಡ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಅರಸ್ ಹೊಟೆಲ ಎದುರಿಗೆ ಇರುವ ಕಲೂತಿ ನಗರದ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಖಾಲಿ ಇರುವ ಸುಮಾರು 20 ಗುಂಟೆ ಜಾಗೆಯಲ್ಲಿ ನೂನತವಾಗಿ ಅಗ್ನಿಶಾಮಕ ಶಾಖೆಯನ್ನು ಸ್ಥಾಪಿಸಲು ಸ್ಥಳ ಪರಿಶೀಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಕಾರ್ಜುನಪ್ಪ, ಜೆ.ಬಿ.ಕೊರವ, ಸಹಾಯಕ ಅಧಿಕಾರಿ ರಾಮು ಸನದಿ, ಜಾವೇದ ಸೈಯದ, ಪುರಸಭೆ ಸದಸ್ಯರಾದ ವಿನಾಯಕ ಬಂಕಾಪೂರ, ಸಂಗಮೇಶ ಕಾಲತಿಪ್ಪಿ, ಶಂಕರ ಕುಂಬಾರ, ಕೇದಾರಿ ಪಾಟೀಲ ಸೇರಿದಂತೆ ಇನ್ನಿರರು ಇದ್ದರು.

Social Plugin