ವರದಿ : ವಿಜಯ ವಾಜಂತ್ರಿ
ತೇರದಾಳದಲ್ಲಿ ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಜೊತೆ ಸರಿಯಾಗಿ ಸ್ಪಂಧಿಸುತ್ತಿಲ್ಲವೆಂದು ಪುರಸಭೆಗೆ ಬೀಗ ಹಾಕಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪುರಸಭೆ ಸದಸ್ಯರಿಂದ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ
ಸಾರ್ವಜನಿಕರ ಹಿತದೃಷ್ಟಿಯಿಂದ ಪುರಸಭೆ ಸದಸ್ಯರಿಂದ ಪ್ರತಿಭಟನೆ
ತೇರದಾಳ : ಕೃಷ್ಣಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿದ್ದರು ಪಟ್ಟಣದ ಜನತೆಗೆ ಸರಿಯಾಗಿ ಸರಬರಾಜು ಆಗುತ್ತಿಲ್ಲವೆಂದು ಹಾಗೂ ಶಾಸಕರು ಈ ಕುರಿತು ಮುಖ್ಯಾಧಿಕಾರಿಗಳನ್ನು ಮತ್ತು ನೀರು ಸರಬರಾಜು ವಿಭಾಗದವರನ್ನು ಸಭೆ ಕರೆದು ತರಾಟೆಗೆ ತಗೆದುಕೊಂಡರು ಅಧಿಕಾರಿಗಳು ಪಟ್ಟಣದ ಜನತೆಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲವೆಂದು ಆರೋಪಿಸಿ ಇಂದು ಮುಂಜಾನೆ ಪುರಸಭೆಗೆ ಪುರಸಭೆ ಸದಸ್ಯರು ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕೃಷ್ಣಾನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇದ್ದರು ಪಟ್ಟಣದ ಜನತೆ ನೀರಿಗಾಗಿ ಪರದಾಡುತ್ತಿದ್ದರು ಅಧಿಕಾರಿಗಳು ಆ ಕಡೆ ನೋಡುತ್ತಿಲ್ಲ. ದೇವರಾಜ ನಗರದಲ್ಲಿನ ಚರಂಡಿ ಸ್ವಚ್ಚತೆ, ಹಾಗೂ ವಾರ್ಡಗಳಲ್ಲಿನ ಕಸ ತಗೆಯುವುದಾಗಲಿ ಇದಾವದು ಪುರಸಭೆ ವ್ಯಾಪ್ತಿಗೆ ಸಂಭಂಧಿಸುವುದಿಲ್ಲ ಎಂಬಂತೆ ಪುರಸಭೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಪಟ್ಟಣದ ವಾರ್ಡಗಳಲ್ಲಿನ ಬೀದಿ ದೀಪಗಳು ಯಾವವು ಸರಿಯಾಗಿ ಹತ್ತುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರೆ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ನೀರು ಸರಬರಾಜು ಕಾರ್ಮಿಕರಿಗೆ ಕಳೆದ 18ತಿಂಗಳಿಂದ ವೇತನ ಕೊಟ್ಟಿಲ್ಲ. ಈ ಕುರಿತು ಹೇಳಿದರೆ ವೇತನ ಕೊಡುತ್ತೇವೆ ಎಂದು ಐದು ತಿಂಗಳ ವೇತನವನ್ನು ಗುತ್ತಿಗೆದಾರರ ಕೈಯಲ್ಲಿ ಕೊಟ್ಟಿದ್ದಾರೆ. ಇದರಿಂದ ಕಾರ್ಮಿಕರಿಗೆ ವೇತನ ಸರಿಯಾಗಿ ಆಗುತ್ತಿಲ್ಲ. ಕಾರ್ಮಿಕರಿಗೂ ಮನೆ ಸಂಸಾರ, ಹೆಂಡಿರು ಮಕ್ಕಳಿದ್ದಾರೆ. ಅವರು ಕುಟುಂಬವನ್ನು ಹೇಗೆ ನಡೆಸಬೇಕು ಎಂದು ವಿನಾಯಕ ಬಂಕಾಪೂರ ಪತ್ರಿಕೆಗೆ ತಿಳಿಸಿದರು.
ಹಳಿಂಗಳಿ ಜಾಕ್‍ವೆಲ್ಲ ಬಳಿ ಪೈಪ ಒಡೆದು ನೀರು ಸರಬರಾಜು ಸ್ಥಗಿತವಾಗಿತ್ತು. ಅದನ್ನು ದುರಸ್ತಿ ಮಾಡಿ ಮೂರು ದಿನಗಳಾದರೂ ನೀರು ಮಾತ್ರ ಪಟ್ಟಣಕ್ಕೆ ಸರಬರಾಜು ಆಗಿಲ್ಲ. ಈ ಕುರಿತು ಅಧಿಕಾರಿ ಎಸ್.ಎಮ್.ಕೆಳಗಿನಮನಿ ಇವರನ್ನು ಕೇಳಿದರೆ ಪೈಪ ಒಡೆದಿದೆ ಅದು ದುರಸ್ತಿ ಆಗಬೇಕಾದರೆ ನಾಲ್ಕೈದು ದಿನಗಳು ಬೇಕಾಗುತ್ತದೆ. ಸೋಮವಾರದಿಂದ ನೀರು ಬರುತ್ತದೆ ಎಂದು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಾರೆ. ಪುರಸಭೆ ಅಧಿಕಾರಿಗಳ ಈ ವರ್ತನೆಯ ವಿರುದ್ಧ ನಮ್ಮ ಈ ಪ್ರತಿಭಟನೆ. ಮುಖ್ಯಾಧಿಕಾರಿ ಸರಿಯಾಗಿ ಆಫೀಸ್‍ಗೆ ಬರುವುದಿಲ್ಲವೆಂದು ಅವರೂ ಆರೋಪಿಸಿದರು.
ಜಿಲ್ಲಾಧಿಕಾರಿಗಳು ಅಲ್ಲಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇತ್ತ ಗಮನಹರಿಸಿ ಇಲ್ಲಿಯ ಕುಂದುಕೊರತೆಗಳನ್ನು ಆಲಿಸಬೇಕು ಪರಿಶೀಲಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸಬೇಕು ಎಂದು ಅವರು ತಿಳಿಸಿದರು.
ವಾರ್ಡನಂ 3ರಲ್ಲಿನ ಮಹಿಳೆಯರು ಖಾಲಿ ಕೊಡಗಳನ್ನು ತಗೆದುಕೊಂಡು ಪುರಸಭೆಗೆ ಬಂದು ನಮಗೆ ನೀರು ಕೊಡಿ ಎಂದು ಪುರಸಭೆ ಮುಂದೆ ಕುಳಿತು ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ವಿನಾಯಕ ಬಂಕಾಪೂರ, ಸಂತೋಷ ಜಮಖಂಡಿ, ಅಲ್ಲಪ್ಪ ಬಾಬಗೊಂಡ, ಕಾಶೀನಾಥ ರಾಠೋಡ, ಸಚೀನ ಕೊಡತೆ, ಮೌಲಾನಾ ಚಿತ್ರಬಾನುಕೋಟೆ, ಲಕ್ಷ್ಮಣ ನಾಯಕ ಸೇರಿದಂತೆ ವಾರ್ಡ ನಂ3 ಮಹಿಳೆಯರು ಇದ್ದರು.

Social Plugin