ವರದಿ : ವಿಜಯ ವಾಜಂತ್ರಿ
ತೇರದಾಳ ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಹೋಳಿ ಶಾಂತಿ ಸಭೆಯಲ್ಲಿ ಸಿಪಿಐ ಜೆ.ಕರುಣೇಶಗೌಡ ಮಾತನಾಡಿದರು.

ತೇರದಾಳ : ಸಾರ್ವಜನಿಕವಾಗಿ ಬಣ್ಣ ಆಡುವುದನ್ನು ಬಿಟ್ಟು ತಮ್ಮ ಕುಟುಂಬಸ್ಥರೊಂದಿಗೆ ಬಣ್ಣ ಆಡುವುದುರೊಂದಿಗೆ ಹೋಳಿ ಹಬ್ಬವನ್ನು ಶಾಂತಿಯುತವಾಗಿ ಸಾಕೇತಿಕವಾಗಿ ಆಚರಿಸಬೇಕು ಎಂದು ಸಿಪಿಐ ಜೆ.ಕರುಣೇಶಗೌಡ ಹೇಳಿದರು.
  ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಹೋಳಿ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಹಾಗೂ ಜಿಲ್ಲೆಯಲ್ಲಿಯೂ ಸಹ ಪ್ರಕರಣಗಳ ಸಂಖ್ಯೆ ಹೆಚ್ಚಾಗುತಿರುವುದರಿಂದ ಜಿಲ್ಲಾಡಳಿತ ಹೋಳಿ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸುವಂತೆ ನಿರ್ದೇಶನ ನೀಡಿದೆ. ಹಾಗೂ ಸಾರ್ವಜನಿಕವಾಗಿ ಬಣ್ಣ ಆಡುವುದನ್ನು ನಿಷೇಧಿಸಲಾಗಿದೆ. ಪ್ರತಿ ವರ್ಷ ಪಟ್ಟಣದಲ್ಲಿ ಆಚರಿಸುವ ಕಾಮಣ್ಣನ ಗುಗ್ಗಳವನ್ನು ಸಾಂಕೇತಿಕವಾಗಿ ಆಚರಿಸಬೇಕು. ಟೈಪಿಂಗ್‍ದಂತಹ ಕೆಮಿಕಲ್ ಮಿಶ್ರಿತ ಬಣ್ಣವನ್ನು ಅಂಗಡಿಗಳಲ್ಲಿ ಮಾರುವಂತಿಲ್ಲ. ಒಂದುವೇಳೆ ಮಾರಾಟ ಮಾಡುವುದು ಕಂಡು ಬಂದರೆ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಬೆಳೆದು ನಿಂತಿರುವ ಗಿಡ ಮರಗಳನ್ನು ಕಡಿಯದೇ ಪರಿಸರವನ್ನು ರಕ್ಷಿಸಬೇಕಾಗಿದೆ. ಮನೆ ಕಟ್ಟಡಗಳಿಗೆ ಉಪಯೋಗಿಸುವ ಕಟ್ಟಿಗೆಗಳನ್ನು ಕಳವು ಮಾಡದಂತೆ ಎಲ್ಲರೂ ನಿಗಾವಹಿಸಬೇಕು. ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಅದರಲ್ಲಿ ರಸ್ತೆಗಳು ಈಗ ಅಭಿವೃದ್ಧಿಯಾಗುತ್ತಿವೆ, ರಸ್ತೆಗಳಲ್ಲಿ ಕಾಮದಹನ ಮಾಡದಂತೆ ಮನವಿ ಮಾಡಿದರು. ಹೋಳಿ ಹಬ್ಬದಲ್ಲಿ ಬಣ್ಣ ಆಡದಂತೆ ಹಾಗು ಶಾಂತಿಯುತವಾಗಿ ಹೋಳಿ ಹಬ್ಬವನ್ನು ಆಚರಿಸಲು ಪೋಲಿಸ್ ಇಲಾಖೆ ಹಾಗೂ ಪಟ್ಟಣದ ಪ್ರಮುಖರು ತೀರ್ಮಾಣ ಕೈಗೊಂಡರು.
   ಗ್ರೇಡ್-2ತಹಶೀಲ್ದಾರ ಎಸ್.ಬಿ.ಕಾಂಬಳೆ ಮಾತನಾಡಿದರು. ಪಿಎಸ್‍ಐ ವಿಜಯ ಕಾಂಬಳೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಕಿರಿಯ ಆರೋಗ್ಯ ಸಹಾಯಕಿ ಭಾಗ್ಯಶ್ರೀ ಪಾಟೀಲ, ಶಂಕರ ಕುಂಬಾರ, ವಿನಾಯಕ ಬಂಕಾಪೂರ, ಕೇದಾರಿ ಪಾಟೀಲ, ಆನಂದ ನಡುವಿನಕೇರಿ, ಮಾಶೂಂ ಇನಾಮದಾರ, ಪೈಜುಲ್ಲಾ ಇನಾಮದಾರ, ಸಂಗಮೇಶ ಕಾಲತಿಪ್ಪಿ, ಶೀತಲ ಘೂಳನ್ನವರ, ಪೋಲಿಸ್ ಸಿಬ್ಬಂದಿ ಎಚ್.ಎಸ್.ಮೆಂಡೆಗಾರ, ಕೆ.ಎಚ್.ಸನ್ನಟ್ಟಿ, ರಾಜು ಪೂಜಾರಿ ಸೇರಿದಂತೆ ಪಟ್ಟಣದ ಪ್ರಮುಖರು ಹಾಗೂ ಇನ್ನಿತರರು ಇದ್ದರು.