24:03:2021ರಂದು ಸಂಜೆ ವಾರ್ತಾ ಇಲಾಖೆಯ ಸಚಿವರಾದಂತಹ ಮಾನ್ಯ ಶ್ರೀ ಸಿ. ಸಿ. ಪಾಟೀಲ ಹಾಗೂ ಮಾನ್ಯ ಆಯುಕ್ತರು ವಾರ್ತಾ ಇಲಾಖೆ ಡಾ|| ಹರ್ಷಾ ರವರನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಅವರನ್ನು ಆಹ್ವಾನಿಸಿದ್ದರು. ವಾಣಿಜ್ಯ ಮಂಡಳಿಯ ಅಧ್ಯಕ್ಷರು ಡಿ. ಆರ್. ಜೈರಾಜ್ ರವರು ಸ್ವಾಗತಕೋರಿ ಸತ್ಕರಿಸಿದರು. ಈ ಸಂಧರ್ಭ ಕೆ. ಸಿ. ಎನ್. ಚಂದ್ರಶೇಖರ ಮಾಜಿ ಅಧ್ಯಕ್ಷರು, ವಾಣಿಜ್ಯ ಮಂಡಳಿಯ ಇತಿಹಾಸ ಹಾಗೂ ಬೆಳೆದು ಬಂದ ದಾರಿಯ ಬಗ್ಗೆ ಸಂಪೂರ್ಣವಾಗಿ ವಿವರಿಸಿದರು. ಮಾಜಿ ಅಧ್ಯಕ್ಷರು ಸಾ. ರಾ. ಗೋವಿಂದರವರು ಈಗಾಗಲೇ ಸರ್ಕಾರದಿಂದ ಆದೇಶವಾಗಿರುವಂತ ಪ್ರತಿವರ್ಷ ಡಾ|| ರಾಜ್ ಕುಮಾರ್ ರವರ ಜನ್ಮದಿನದಂದು ಚಲನಚಿತ್ರ ರಾಜ್ಯ ಪ್ರಶಸ್ತಿಯನ್ನು ವಿತರಿಸಬೇಕೆಂದು ತಿಳಿಸಿದರು ಜೊತೆಗೆ ಪ್ರತಿವರ್ಷ ತಪ್ಪದೇ ಚಲನಚಿತ್ರ ಸಬ್ಸಿಡಿಗಳನ್ನು ಕೊಡಬೇಕೆಂದು ತಿಳಿಸಿದರು ಈ ಎಲ್ಲಾ ವಿಷಯಕ್ಕೂ ಸಚಿವರು ಕೂಡಾ ಸ್ಪಂದಿಸಿ ಮಾತನಾಡಿ ಕನ್ನಡ ಚಿತ್ರರಂಗಕ್ಕೆ ಬೇಕಾದ ಸೌಲತ್ತುಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಈಡೇರಿಸುತ್ತೇನೆಂದು ಭರವಸೆ ನೀಡಿದರು. ಮತ್ತು ಮೈಸೂರಿನ ಹತ್ತಿರ 100ಎಕರೆ ಜಾಗದಲ್ಲಿ ಚಿತ್ರನಗರಿ ನಿರ್ಮಾಣದ ಭೂಮಿ ಪೂಜೆಯನ್ನು ಇನ್ನೂ ಒಂದು ತಿಂಗಳಲ್ಲಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂಧರ್ಭದಲ್ಲಿ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರು ಡಿ. ಕೆ. ರಾಮಕೃಷ್ಣ, ಮಾಜಿ ಕಾರ್ಯದರ್ಶಿ ಭಾ. ಮಾ. ಹರೀಶ್, ಮಾಜಿ ಅಧ್ಯಕ್ಷರಾದಂತ ಥಾಮಸ್ ಡಿಸೋಜಾ, ಚಿನ್ನೇಗೌಡ್ರು, ನಿರ್ಮಾಪಕರಾದ ಕೆ. ಮಂಜು,ರಮೇಶಯಾದವ್ ಹಾಗೂ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು...
Social Plugin