ವರದಿ : ವಿಜಯ ವಾಜಂತ್ರಿ
ತೇರದಾಳದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಭಾಜಪ ನೂತನ ನಗರ ಘಟಕ ಅಧ್ಯಕ್ಷ ಹಾಗೂ ಪ್ರಭಾರಿ ಅಧ್ಯಕ್ಷ ಮತ್ತು ವಿವಿಧ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಕ್ಷದ ಧ್ವಜ ಹಸ್ತಾಂತರಿಸಿದರು.
ತೇರದಾಳ : ಯಾವುದೇ ಸಮುದಾಯ, ವ್ಯಕ್ತಿ, ಮೇಲು ಕೀಳು ಎಂಬ ಭಾವನೆ ಇರಲಾರದೆ ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ಕಾಣಬೇಕು. ತಾಳ್ಮೆಯಿಂದ ಪಕ್ಷದ ಜವಾಬ್ದಾರಿಯನ್ನು ಮುನ್ನಡೆಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಹೇಳಿದರು.
ಪಟ್ಟಣದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಭಾಜಪ ನೂತನ ನಗರ ಘಟಕ ಅಧ್ಯಕ್ಷ ಹಾಗೂ ಪ್ರಭಾರಿ ಅಧ್ಯಕ್ಷ ಮತ್ತು ವಿವಿಧ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ಎಲ್ಲರನ್ನು ಪಕ್ಷದ ಅಧ್ಯಕ್ಷರನ್ನಾಗಿ ಹಾಗೂ ಎಲ್ಲರನ್ನು ನಾಮನಿದೇರ್ಶಿತ ಸದಸ್ಯರನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ನ್ಯಾಯಯುತವಾಗಿ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಯಾವುದೇ ಪಕ್ಷ ಮಾಡಲಿಕ್ಕೆ ಸಾಧ್ಯವಿಲ್ಲ. ನಮ್ಮ ಪಕ್ಷ ಅನ್ಯಾಯ ಮಾಡುವುದಿಲ್ಲ, ಅದೇ ರೀತಿ ಅನ್ಯಾಯವನ್ನು ಸಹಿಸುವುದಿಲ್ಲ. ಪಕ್ಷದ ಗುರಿ ದೇಶವನ್ನು ಉನ್ನತ ಮಟ್ಟಕ್ಕೆ ಎರಿಸುವ ಕೆಲಸವಾಗಬೇಕು. ಒಳ್ಳೆಯ ನಿರ್ಣಯದೊಂದಿಗೆ ಪಕ್ಷದ ಜವಾಬ್ದಾರಿಯನ್ನು ಮುನ್ನಡೆಸಬೇಕು. ಪಟ್ಟಣದ ಹಿರಿಯರ ಮಾರ್ಗದರ್ಶನದಲ್ಲಿ ತಮಗೆ ವಹಿಸಿದ ಜವಾಬ್ದಾರಿಯನ್ನು ನಿಬಾಯಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷರನ್ನಾಗಿ ಮಹಾವೀರ ಕೊಕಟನೂರ ಹಾಗೂ ಪ್ರಭಾರಿ ಅಧ್ಯಕ್ಷರನ್ನಾಗಿ ರಾಮಣ್ಣ ಹಿಡಕಲ್ ಅವರನ್ನು ಆಯ್ಕೆ ಮಾಡುವುದರೊಂದಿಗೆ ಅವರಿಗೆ ಪಕ್ಷದ ಧ್ವಜವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಪ್ರಭಾರಿ ಅಧ್ಯಕ್ಷ ರಾಮಣ್ಣ ಹಿಡಕಲ್, ಬಾಳು ದೇಶಪಾಂಡೆ, ಸುರೇಶ ರೇಣಕೆ, ಸುರೇಶ ಅಕ್ಕಿವಾಟ, ನಿಂಗಪ್ಪ ಮಾಲಗಾವಿ, ಬಸಪ್ಪ ಮುಕರಿ, ಪ್ರಕಾಶ ಕುಳ್ಳಿ, ಜಿನ್ನಪ್ಪ ಸವದತ್ತಿ, ಶಂಕರ ಕುಂಬಾರ, ಸಂಗಮೇಶ ಕಾಲತಿಪ್ಪಿ, ಸದಾಶಿವ ಹೊಸಮನಿ, ವಿಠ್ಠಲ ಭಜಂತ್ರಿ, ಶೀತಲ ಬೊಳಗೊಂಡ, ವಿಜಯಪ್ರಕಾಸ ದಾನಿಗೊಂಡ, ಶೀತಲ ಘೂಳನ್ನವರ, ಇಸಾಕ ಮೋಮಿನ್ ಸೇರಿದಂತೆ ಇನ್ನಿತರರು ಇದ್ದರು.

Social Plugin