ವರದಿ : ವಿಜಯ ವಾಜಂತ್ರಿ

ತೇರದಾಳ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿದರು.

ತೇರದಾಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ

ತೇರದಾಳ : ಪಟ್ಟಣದ ವಿವಿಧ ವಾರ್ಡಗಳಲ್ಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಹಾಗೂ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ ಭೂಮಿ ಪೂಜೆಯನ್ನು ನೆರವೇರಿಸಿದರು.

  ವಾರ್ಡ ನಂ.1ರಲ್ಲಿ 2018-19ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಲೋಕೋಪಯೋಗಿ ಇಲಾಖೆಯ ಮುಖ್ಯ ರಸ್ತೆ ಉಡಪಿ ಹೊಟೆಲ ಮಹಾವೀರ ಮಾದಿಗೊಂಡ ಮನೆವರೆಗೆ. ಮತ್ತು ಮಸೀದಿಯಿಂದ ಸನಾಳ ಮನೆಯವರೆಗೆ ಪಿವ್ಹಿಸಿ ಪೈಪಲೈನ್ ಅಳವಡಿಸಿದ್ದು, ಹಾಗೂ ವಾರ್ಡಿನಲ್ಲಿ 6ಸಿಸ್ಟನ್ ಟ್ಯಾಂಕಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು. 2020ನೇ ಸಾಲಿನ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಪಟ್ಟಣದ ವಾರ್ಡ ನಂ.11ರಲ್ಲಿ ಪುರುಷರ ಶೌಚಾಲಯದ ಹತ್ತಿರ ಮಹಿಳಾ ಸಮುದಾಯ ಶೌಚಾಲಯ ನಿರ್ಮಿಸಲು 6.80ಲಕ್ಷ ರೂ. ಅನುದಾನದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ವಾರ್ಡ ನಂ.17ರ ಹಳೇಪೇಟಿ ಗಲ್ಲಿಯ ಅಶೋಕ ಆಲಗೂರ ಮನೆಯಿಂದ ಮುಕುಂದ ಮನೆಯವರೆಗೆ ಮತ್ತು ಯಲ್ಲಮ್ಮ ಗುಡಿಯ ಹತ್ತಿರ ಪ್ರಕಾಶ ಕುಳ್ಳಿ ಮನೆಯಿಂದ ಸಲಿಮ್ ಗ್ಯಾರೇಜ್‍ವರೆಗೆ ಆರ್‍ಸಿಸಿ ಚರಂಡಿ ಮತ್ತು ಸಿಡಿ ನಿರ್ಮಾಣ ಕಾಮಗಾರಿಗೆ 6.24ಲಕ್ಷ ರೂ. ಅನುದಾನದಲ್ಲಿ ಭೂಮಿಪೂಜೆಯನ್ನು ನೆರವೇರಿಸಲಾಯಿತು.

   ಲೋಕೋಪಯೋಗಿ ಇಲಾಖೆ ಉಪ ವಿಭಾಗ ಜಮಖಂಡಿ, ಕಾಗವಾಡ ಕಲಾದಗಿ ರಾಜ್ಯ ಹೆದ್ದಾರಿ-53 ಅಗಲೀಕರಣಗೊಳಿಸಿ ಸುಧಾರಣೆ ಮಾಡಲು 2021-22ನೇ ಸಾಲಿನ 3054ರಾಜ್ಯ ಹೆದ್ದಾರಿ ನಿರ್ವಹಣೆ ಅಂದಾಜು ಮೊತ್ತ 350.00ಲಕ್ಷಗಳ ಅನುದಾನದಡಿಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

  ಈ ಸಂದರ್ಭದಲ್ಲಿ ಶಿವಾನಂದ ಮಂಟೂರ, ಸುರೇಶ ಅಕ್ಕಿವಾಟ, ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ಬಾಳು ದೇಶಪಾಂಡೆ, ಪ್ರಕಾಶ ಕುಳ್ಳಿ, ರಾಮಣ್ಣ ಹಿಡಕಲ್ಲ, ಶೀತಲ ಘೂಳನ್ನವರ, ಅಲ್ಲಪ್ಪ ಬಾಬಗೊಂಡ, ತಿಮ್ಮಣ್ಣ ಗಾಡಿವಡ್ಡರ, ಬಸಪ್ಪ ಮುಕರಿ, ಸದಾಶಿವ ಹೊಸಮನಿ, ಸಂಗಮೇಶ ಕಾಲಿತಿಪ್ಪಿ, ಶಂಕರ ಕುಂಬಾರ, ವರ್ಧಮಾನ ಕಡಹಟ್ಟಿ, ಭರಮು ನಾಶಿ, ಜಿನ್ನಪ್ಪ ಸವದತ್ತಿ, ನಾಗಪ್ಪ ದೊಡಮನಿ, ರಮೇಶ ಧರೆನ್ನವರ,  ಷಣ್ಮುಖ ಗಾಡದಿ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಇದ್ದರು.