ವರದಿ : ವಿಜಯ ವಾಜಂತ್ರಿ
ತೇರದಾಳ ಪಟ್ಟಣದ ಮಹಾತ್ಮಾ ಗಾಂಧಿಜೀ ಕ್ರಿಡಾಂಗಣದಲ್ಲಿ ಶ್ರೀರಾಮಸೇನಾ ತೇರದಾಳ ತಾಲೂಕಾ ಘಟಕ ಹಮ್ಮಿಕೊಂಡಿರುವ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಸ್ವಾಭಿಮಾನಿ ಹಿಂದೂ ಸಮಾವೇಶ ಸಮಾರಂಭದಲ್ಲಿ ಪ್ರಮೋದ ಮುತಾಲಿಕ್ ಮಾತನಾಡಿದರು.
ತೇರದಾಳ : ಶ್ರೀರಾಮ ಮಂದಿರ ಆರ್‍ಎಸ್‍ಎಸ್ ಮಂದಿರ, ಬಿಜೆಪಿ ಮಂದಿರ, ಅದು ರಾಮ ಮಂದಿರ ಅಲ್ಲ ಎಂದು ಹೇಳುತ್ತಿದ್ದಾರೆ. ಇಡೀ ದೇಶದಲ್ಲಿನ ಒಂದುನೂರಾ ಮೂವತ್ತು ಕೋಟಿ ಜನರ ಸ್ವಾಭಿಮಾನಿ ಮಂದಿರ. ದೇಶಭಕ್ತಿ ಮಂದಿರ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹೇಳಿದರು.
ಪಟ್ಟಣದ ಮಹಾತ್ಮಾ ಗಾಂಧಿಜೀ ಕ್ರಿಡಾಂಗಣದಲ್ಲಿ ಶ್ರೀರಾಮಸೇನಾ ತೇರದಾಳ ತಾಲೂಕಾ ಘಟಕ ಹಮ್ಮಿಕೊಂಡಿರುವ 394ನೇ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಸ್ವಾಭಿಮಾನಿ ಹಿಂದೂ ಸಮಾವೇಶ ಸಮಾರಂಭದಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ ರಾಮ ಮಂದಿರದ ಜಾಗೆ ವಿವಾದಿತ ಜಾಗೆಯೆಂದು. ಸುಪ್ರೀಂಕೋರ್ಟ ಹೇಳಿದೆ ಅದು ವಿವಾದಿತ ಜಾಗೆಯಲ್ಲವೆಂದು. ನೀವೊಬ್ಬ ವಕೀಲರಿದ್ದೀರಿ ಈ ರೀತಿ ಮಾತನಾಡುವುದು ಸರಿಯಲ್ಲ. ನಿಮ್ಮ ಹೆಸರು ಸಿದ್ಧರಾಮಯ್ಯ ಬದಲಾಗಿ ಸಿದ್ಧಬಾಬರಯ್ಯ ಎಂದು ಬದಲಾಯಿಸಿಕೊಳ್ಳಿ ಎಂದು ವ್ಯಂಗ್ಯವಾಡಿದರು. ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಮಮಂದಿರದ ಲೆಕ್ಕಕೇಳುತ್ತಿದ್ದಾರೆ, ನಿಮ್ಮ ರಾಜಕೀಯ ಕನ್ನಡಕವನ್ನು ತೆಗೆದು ನೋಡಿರಿ ಜಗತ್ತು ಪ್ರಾಮಾಣಿಕವಾಗಿದೆ ಎಂದು ಹರಿಹಾಯ್ದರು. ಆರ್‍ಎಸ್‍ಎಸ್ 95ವರ್ಷದಿಂದ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ದೇಶಭಕ್ತಿ ಸಂಘಟನೆ ಇದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಶಾಸಕ ಸಿದ್ದು ಸವದಿ ಮಾತನಾಡಿ ನಮ್ಮ ಅಧಿಕಾರಕ್ಕಿಂತ ದೇಶದ ಹಿತ ಮುಖ್ಯ. ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಇಂತವರ ಶ್ರಮ ಬಹಳಷ್ಟಿದೆ. ನಮ್ಮ ನಾಯಕರ ಜೊತೆ ಮಾತನಾಡಿ ಪ್ರಮೋದ ಮುತಾಲಿಕರಿಗೆ ಒಂದು ಹುದ್ದೆ ಕೊಡುವಂತೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ನ್ಯಾಯವಾದಿ ಮೀರಾ ರಾಘವೇಂದ್ರ ಮಾತನಾಡಿ ದೇಶ ಧರ್ಮಕ್ಕೆ ಹೋರಾಡಿದವರನ್ನು ದೇಶ ರಾಜ್ಯಕ್ಕೆ ಸೀಮಿತವಾಗಬಾರದು. ಸ್ವಾಭಿಮಾನಿ ಹಿಂದೂಗಳು ಸಂಘಟಿತರಾಗಿ ಕಾರ್ಯಕರ್ತರಾಗದೆ ಯೋಧರಾಗಬೇಕು ಎಂದರು.
ಮೈಗೂರಿನ ಗುರುಪ್ರಸಾದ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪುರಸಭೆ ಅಧ್ಯಕ್ಷ ಅನ್ನಪೂರ್ಣ ಹೊಸಮನಿ, ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಬಸವರಾಜ ಗಾಯಕವಾಡ, ಸಿದ್ದು ಬನ್ನೂರ, ಆನಂದ ಜಂಬಗಿಮಠ, ಮಹಾಲಿಂಗ ಗುಂಜಗಾಂವಿ, ಪ್ರದೀಪ ದೇಶಪಾಂಡೆ, ನಂದು ಗಾಯಕವಾಡ ಸೇರಿದಂತೆ, ಪುರಸಭೆ ಸದಸ್ಯರು ಹಾಗೂ ಇನ್ನಿತರರು ಇದ್ದರು.
ಆನಂದ ರಾವಳ ವೈಕ್ತಿಕ ಗೀತೆ ಹಾಡಿದರು. ವಿನಾಯಕ ಬಂಕಾಪೂರ ಸ್ವಾಗತಿಸಿದರು. ಚನ್ನು ಬೆಳಕೊಡ ವಂದಿಸಿದರು.

Social Plugin