ವರದಿ : ವಿಜಯ ವಾಜಂತ್ರಿ

ತೇರದಾಳ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜ್ರಂಭಣೆಯಿಂದ ಶೋಭಾ ಯಾತ್ರೆ ನಡೆಯಿತು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ, ಸಂಭ್ರಮದ ಶೋಭಾ ಯಾತ್ರೆ
ತೇರದಾಳ :  ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜ್ರಂಭಣೆಯಿಂದ ಶೋಭಾ ಯಾತ್ರೆ ನಡೆಯಿತು.
  ಶ್ರೀರಾಮಸೇನಾ ತೇರದಾಳ ಘಟಕದವರು ಆಯೋಜಿಸಿದ್ದ ಶೋಭಾ ಯಾತ್ರೆ ಪಟ್ಟಣದ ಪೋಲಿಸ್ ಠಾಣೆಯಿಂದ ಪ್ರಾರಂಭಗೊಂಡು ಬಸ್ ನಿಲ್ದಾಣ, ವಿಶೇಷ ತಹಶೀಲ್ದಾರ ಕಚೇರಿ, ತರಕಾರಿ ಮಾರ್ಕೆಟ್, ಕನ್ನಡ ಶಾಲೆ, ಶ್ರೀಪ್ರಭುದೇವರ ಅಗಸಿ ಬಾಗಿಲು, ಕಲ್ಲಟ್ಟಿ ಗಲ್ಲಿ, ದೇಸಾರ ಬಾವಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾತ್ಮಾ ಗಾಂಧಿಜಿ ಕ್ರಿಡಾಂಗಣಕ್ಕೆ ಬಂದು ಶೋಭಾ ಯಾತ್ರೆ ಮುಕ್ತಾಯಗೊಂಡಿತು. ಅಲ್ಲಿ ಸ್ವಾಭಿಮನಿ ಹಿಂದೂ ಸಮಾವೇಶ ನಡೆಯಿತು. 
  ತೆರೆದ ವಾಹನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬ್ರಹತ್ ಪ್ರತಿಮೆ, ಕೇಸರಿ ಧ್ವಜಗಳ ಹಾರಾಟ ಮೆರವಣಿಗೆ ಯುದ್ಧಕ್ಕೂ ಕಳೆ ತಂದಿದ್ದವು. ಪಟ್ಟಣದ ಮೆರವಣಿಗೆ ದಾರಿಯುದ್ದಕ್ಕೂ ಕೇಸರಿ ಪರಪರಿಗಳನ್ನು ಕಟ್ಟಲಾಗಿತ್ತು. ಶ್ರೀರಾಮಸೇನೆಯ ಕಾರ್ಯಕರ್ತರು ಬೃಹತ್ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದರು. 
 ಎಲ್ಲ ಕಡೆ ಖಾಕಿ ಪಡೆ : ಎಲ್ಲ ಕಡೆ ಪೋಲಿಸ್ ಸಿಬ್ಬಂದಿಗಳು ಎದ್ದು ಕಾಣುತ್ತಿದ್ದರು. ಸರ್ಕಲ್‍ಗಳಲ್ಲಿ ಪೋಲಿಸ್ ವಾಹನಗಳು ನಿಂತಿದ್ದು ಕಂಡು ಬಂದಿತು. ಸ್ಥಳಿಯ ಪೋಲಿಸ್ ಠಾಣಾಧಿಕಾರಿ ವಿಜಯ ಕಾಂಬಳೆ ಹಾಗೂ ಬನಹಟ್ಟಿ ಪಿಎಸ್‍ಐ ಧರ್ಮಟ್ಟಿ ಸೇರಿದಂತೆ ತೇರದಾಳ, ಬನಹಟ್ಟಿ, ಮಹಾಲಿಂಗಪೂರ ಠಾಣೆಯ ಪೋಲಿಸ್ ಸಿಬ್ಬಂದಿಯವರು ಸೂಕ್ತ ಬಂದೂಬಸ್ತ್‍ಗೆ ಕ್ರಮ ಕೈಗೊಂಡಿದ್ದರು.