ತೇರದಾಳದ ಮಹಾವೀರ ಸರ್ಕಲ್‍ದಲ್ಲಿನ ಚರಂಡಿ ದುರಸ್ತಿ ಕಾರ್ಯವಾಗಬೇಕು ಎಂದು ಆ ವಾರ್ಡಿನ ನಿವಾಸಿಗಳು ಗುತ್ತಿಗೆದಾರರನ್ನು ಒತ್ತಾಯಿಸಿದ್ದಾರೆ.
ಚರಂಡಿ ದುರಸ್ತಿ ಮಾಡಲು ನಿವಾಸಿಗಳ ಒತ್ತಾಯ
ತೇರದಾಳ : ಪಟ್ಟಣದ ಮಹಾವೀರ ಸರ್ಕಲ್‍ದಲ್ಲಿನ ಚರಂಡಿ ದುರಸ್ತಿ ಮಾಡಲು ಟೆಂಡರಾಗಿ ವರ್ಷಗಳೆ ಗತಿಸಿ ಹೋಗಿವೆ, ಹಾಗೂ ವರ್ಕಆರ್ಡರ್ ಪಡೆದು ಹಲವು ತಿಂಗಳುಗಳೆ ಆಗಿದ್ದರು ಕಾಮಗಾರಿ ಹಿಡಿದಿರುವ ಗುತ್ತಿಗೆದಾರರು ಕಮಗಾರಿಯನ್ನು ಪ್ರಾರಂಭಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಲ್ಲಿಯ ನಿವಾಸಿಗಳು ದೂರಿದ್ದಾರೆ.
ಮಹಾವೀರ ಸರ್ಕಲ್‍ದಲ್ಲಿನ ಚರಂಡಿ ದುರಸ್ಥಿ ಕಾಮಗಾರಿಗೆ ಟೆಂಡರ್ ಆಗಿ ವರ್ಷಗಳೆ ಉರುಳಿ ಹೋಗಿವೆ. ವರ್ಕ ಆರ್ಡರ್ ಕೊಟ್ಟು ಸಹ ಹಲವಾರು ತಿಂಗಳುಗಳು ಆಗಿವೆ. ಆದರೆ ಗುತ್ತಿಗೆದಾರರು ಮಾತ್ರ ಕಾಮಗಾರಿ ಪ್ರಾರಂಭಿಸಲು ಹಿಂದೇಟು ಹಾಕುತ್ತಿದ್ದಾರೆ. ನಗರೋತ್ಥಾನ ಯೋಜನೆಯಡಿಯಲ್ಲಿ ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆ ಡಾಂಬರೀಕರಣ ಹಾಗೂ ರಸ್ತೆ ಪಕ್ಕದಲ್ಲಿ ಚರಂಡಿ ನಿರ್ಮಾಣ ಮಾಡಲು ಸಹ ಹಿಂದೇಟು ಹಾಕುತ್ತಿದ್ದಾರೆ. ರಸ್ತೆ ಡಾಂಬರೀಕರಣ ಹಾಗೂ ಚರಂಡಿ ನಿರ್ಮಾಣ ಕುರಿತು ಸಾಕಷ್ಟು ಬಾರಿ ಸ್ಥಳ ಪರಿಶೀಲನೆ ಮಾಡಲಾಗಿದೆ. ಎಇಇಯವರು ಹಲವಾರು ಬಾರಿ ಗುತ್ತಿಗೆದಾರರಿಗೆ ಕಾಮಗಾರಿ ಪ್ರಾರಂಭಿಸಲು ತಿಳಿಸಿದರೂ ಅವರು ಕಾಮಗಾರಿಯನ್ನು ಪ್ರಾರಂಭಿಸುತ್ತಿಲ್ಲ. ಪುರಸಭೆಗೆ ಈ ವಾರ್ಡಿನಲ್ಲಿ ಕಾಂಗ್ರೆಸ್‍ನಿಂದ ಸದಸ್ಯ ಆಯ್ಕೆಯಾಗಿದ್ದರಿಂದ ಈ ರೀತಿ ಹಿಂದೇಟು ಹಾಕುತಿದ್ದಾರೆ ಎಂಬುವುದು ಪರಸಭೆ ಮಾಜಿ ಸದಸ್ಯ ರಾಜೇಸಾಬ ನಗಾರ್ಜಿಯವರ ದೂರು. ಸಾಕಷ್ಟು ಬಾರಿ ಪುರಸಭೆ ಮುಖ್ಯಾಧಿಕಾರಿಗೆ ಮೌಖಿಕವಾಗಿ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದಿನಾಲು ಮುಂಜಾನೆ ಚರಂಡಿ ನೀರು ತುಂಬಿ ನೀರು ರಸ್ತೆಯ ಮೇಲೆ ಬರುತ್ತಿದೆ. ಆಗ ಪುರಸಭೆಯ ಪೌರ ಕಾರ್ಮಿಕರು ಬಂದು ಅದನ್ನು ಸ್ವಚ್ಚಗೊಳಿಸುತ್ತಾರೆ. ಮತ್ತೇ ಮಾರನೆಯ ದಿನವು ಕೂಡಾ ಅದೇ ಪರಿಸ್ಥಿತಿ. ಅದಕ್ಕೆ ಒಂದು ಶಾಸ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಪುರಸಭೆ ಮಾಜಿ ಸದಸ್ಯ ರಾಜೇಸಾಬ ನಗಾರ್ಜಿ, ಮುನೀರ ತಾಂಬೋಳಿ, ಗಣಪತಿ ಗಾಡಿವಡ್ಡರ ಸೇರಿದಂತೆ ಇನ್ನಿತರರು ಆಗ್ರಹಿಸಿದ್ದಾರೆ.
Social Plugin