ತೇರದಾಳದ ಪುರಸಭೆ ಆವರಣದಲ್ಲಿ ಪುರಸಭೆ ತೇರದಾಳ ಹಾಗೂ ವಿವಿಧ ಬ್ಯಾಂಕಗಳ ಸಹಭಾಗಿತ್ವದಲ್ಲಿ ಕಿರು ಸಾಲ ಮೇಳ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಮಾತನಾಡಿದರು.

   ವರದಿ : ವಿಜಯ ವಾಜಂತ್ರಿ

ತೇರದಾಳ : ಕೊರೊನಾ ಮಹಾಮಾರಿಯಿಂದಾಗಿ ಎಲ್ಲ ವ್ಯಾಪಾರಸ್ಥರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಅವರ ಉಪ ಜೀವನಕ್ಕಾಗಿ ತೊಂದರೆಯಾಗಿರುವುದರಿಂದ ಸರಕಾರ ಅವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಡುತ್ತಿದೆ. ಆ ಸಾಲವನ್ನು ಪಡೆದುಕೊಂಡು ಬೀದಿ ವ್ಯಾಪಾರಸ್ಥರು ಆರ್ಥಿಕವಾಗಿ ಸಧೃಡರಾಗಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳಿದರು.

   ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆ ತೇರದಾಳ ಹಾಗೂ ರಾಷ್ಟ್ರೀಕೃತ ವಿವಿಧ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯಡಿಯಲ್ಲಿ ಕಿರು ಸಾಲ ಮೇಳದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಬೀದಿ ವ್ಯಾಪಾರಸ್ಥರಿಗೆ 10ಸಾವಿರ ರೂ.ಗಳನ್ನು ಸಾಲವನ್ನಾಗಿ ಕೊಡಲಾಗುವುದು. ಆ ಸಾಲವನ್ನು ಪಡೆದು ಸಕಾಲಕ್ಕೆ ಬಡ್ಡಿಯೊಂದಿಗೆ ವ್ಯಾಪಾರವಾದಂತೆ ಮರು ಪಾವತಿಸಬೇಕು. ಸಾಲವು ಮುಟ್ಟಿದ ನಂತರ ಮತ್ತೇ ಬ್ಯಾಂಕಿನವರು ಸಾಲವನ್ನು ಕೊಡುತ್ತಾರೆ. ಸದರಿ ಯೋಜನೆಯನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

  ಎಸ್‍ಬಿಆಯ್ ಬ್ಯಾಂಕ ವ್ಯವಸ್ಥಾಪಕ ದೇವಿಪ್ರಸಾದ ಪಾನಿಗ್ರಾಹಿ ಮಾತನಾಡಿ ನಮ್ಮ ಬ್ಯಾಂಕಿನಲ್ಲಿ ಇರುವಂತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಅದಕ್ಕ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

  ಈ ಸಂದರ್ಭದಲ್ಲಿ ಎಸ್.ಬಿ.ಪೋತರಾಜ, ಕುಮಾರ ಸರಿಕರ, ಕೇದಾರಿ ಪಾಟೀಲ, ಸಂಗಮೇಶ ಕಾಲತಿಪ್ಪಿ, ಶಂಕರ ಕುಂಬಾರ, ಆಧಿನಾಥ ಸಪ್ತಸಾಗರ, ಸಚೀನ ಕೊಡತೆ, ಪಟ್ಟಣದ ಎಲ್ಲ ರಾಷ್ಟ್ರೀಕೃತ ಬ್ಯಾಂಕಿನ ವ್ಯವಸ್ಥಾಪಕರು, ಬೀದಿ ವ್ಯಾಪಾರಸ್ಥರ ಸದಸ್ಯ ಸಿದ್ದು ದೊಡಮನಿ ಸೇರಿದಂತೆ ಇನ್ನಿತರರು ಇದ್ದರು.