ವರದಿ : ವಿಜಯ ವಾಂಜಂತ್ರಿ
ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದಲ್ಲಿ ನಡೆದ ಹಿಂದೂ ಯುವತಿ ಜ್ಯೋತಿ ಬಾಗವ್ವಗೋಳ ಅತ್ಯಾಚಾರ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ತೇರದಾಳ ಪಟ್ಟಣದ ಶ್ರೀರಾಮ ಸೇನಾ ತೇರದಾಳ ತಾಲೂಕಾ ಘಟಕದ ವತಿಯಿಂದ ಮನವಿ ಸಲ್ಲಿಸಿದರು.
ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ
ತೇರದಾಳ : ಮುಧೋಳ ತಾಲೂಕಿನ ವಜ್ರಮಟ್ಟಿ ಗ್ರಾಮದಲ್ಲಿ ನಡೆದ ಹಿಂದೂ ಯುವತಿ ಜ್ಯೋತಿ ಬಾಗವ್ವಗೋಳ ಅತ್ಯಾಚಾರ, ಕೊಲೆ ಮಾಡಿರುವ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ಪಟ್ಟಣದ ಶ್ರೀರಾಮ ಸೇನಾ (ರಿ) ಕರ್ನಾಟಕ ತೇರದಾಳ ತಾಲೂಕಾ ಘಟಕದ ವತಿಯಿಂದ ಉಪ ತಹಶೀಲ್ದಾರ ಎಸ್.ಬಿ.ಮಾಯನ್ನವರ ಮುಖಾಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಲಾಯಿತು.
ಮುಖಂಡರಾದ ಸುರೇಶ ರೇಣಕೆ ಹಾಗೂ ವಿನಾಯಕ ಬಂಕಾಪೂರ ಮಾತನಾಡಿ ಪ್ರೀತಿಯ ವಿಷಯ ಹೆಸರಲ್ಲಿ ಹಿಂದೂ ಯುವತಿಯರನ್ನು ಬಲೆಗೆ ಬಿಳಿಸಿಕೊಂಡು ಲವ್ ಜಿಹಾದಿ ಮಾಡುವ ಕಾರ್ಯ ನಿರಂತರವಾಗಿ ರಾಜ್ಯದಲ್ಲಿ ನಡೆಯುತ್ತಿದೆ ಅದರ ಪ್ರಕೋಪವೆ ಈ ಘಟನೆಯಾಗಿದೆ. ಜ್ಯೋತಿ ಬಾಗವ್ವಗೋಳ ಯುವತಿಯನ್ನು ಮುಸ್ಲಿಂ ಯುವಕನೋರ್ವ ಪ್ರೀತಿಸಿ ಮದುವೆಯಾಗಲು ಒತ್ತಾಯಿಸಿದಾಗ ಅದಕ್ಕೆ ಆ ಯುವತಿ ಒಪ್ಪದ ಕಾರಣ ಅವಳನ್ನು ನಿರ್ಜಣ ಪ್ರದೇಶಕ್ಕೆ ಕರೆದೊಯ್ದು ಹಿಗ್ಗಾ ಮುಗ್ಗಾ ತಳಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದಾರೆ ಕಾರಣ ಅ ಆರೋಪಿಗಳನ್ನು ಈ ಕೂಡಲೆ ಬಂಧಿಸಬೇಕು. ಇಂತಹ ವಿಕೃತ ಮನಸ್ಸಿನ ಕಾಮುಕರು ಸಮಾಜದಲ್ಲಿ ಜೀವಿಸಲು ಅರ್ಹರಲ್ಲ ಅಂತ ಪರಿಗಣಿಸಿ ಅವರಿಗೆ ಕೂಡಲೇ ಗಲ್ಲು ಶಿಕ್ಷೆಯನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸದಾಶಿವ ಹೊಸಮನಿ, ಕೇದಾರಿ ಪಾಟೀಲ, ಸಚೀನ ಕೊಡತೆ, ಕುಮಾರ ಸರಿಕರ, ಸಂತೋಷ ಜಮಖಂಡಿ, ಆಕಾಶ ತೇಲಿ, ಸದಾಶಿವ ಮಾಳಿ, ಪ್ರಕಾಶ ಚಿಂಚಖಂಡಿ, ರಮೇಶ ಗಾಡಿವಡ್ಡರ, ಬದ್ರು ಮಂಗಸೂಳಿ, ಪ್ರಮೋದ ಕೋರಿಗೇರಿ ಸೇರಿದಂತೆ ಇನ್ನಿತರರು ಇದ್ದರು.

Social Plugin