ಪುಣ್ಯಾರಾಧನೆಯಲ್ಲಿ ಪಾಲ್ಗೊಂಡ ಭಕ್ತಸಮೂಹ.

ಮುಗಳಖೋಡ : ಸುಕ್ಷೇತ್ರ ಮುಕ್ತಿಮಂದಿರ ಮುಗಳಖೋಡ ಬೃಹನ್ಮಠದಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ ೩೫ನೆಯ ಪುಣ್ಯಾರಾಧನೆ ಪ್ರಯುಕ್ತವಾಗಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ ಕರ್ತೃ ಗದ್ದುಗೆಗೆ ಪೂಜ್ಯ ಶ್ರೀಗಳ ಅಮೃತ ಹಸ್ತದಿಂದ ಪುಷ್ಪವೃಷ್ಟಿಯಾಗಿ ನಂತರ ಬ್ರಹ್ಮ ವೇದಿಕೆಯ ಮೇಲೆ ಕಲಬುರಗಿ ಮಹಾದಾಸೋಹಿ ಶರಣಬಸವೇಶ್ವರರ ಪುರಾಣ ಮಂಗಲಮಾಡಿದರು. ಕುಡುಚಿ ಶಾಸಕ ಪಿ ರಾಜೀವ್ ಪ್ರಾಸ್ತಾವಿಕ ಸ್ವಾಗತ ಭಾಷಣದ ಮೂಲಕ   ಆಗಮಿಸಿದ ಶರಣರನ್ನು ಮತ್ತು ರಾಜಕೀಯ ಮುಖಂಡರನ್ನು ಸ್ವಾಗತಿಸಿದರು. ತದನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆಯವರು ಸಮಾರಂಭವನ್ನು ಉದೇಶಿಸಿ ಮಾತನಾಡಿದರು. ಆಗಮಿಸಿದ ರಾಜಕೀಯ ಮುಖಂಡರು ಶ್ರೀಮಠದ ಗುರುಗಳ ಪವಾಡವನ್ನು ಸಮಾರಂಭದಲ್ಲಿ ಹಂಚಿಕೊಂಡು  ಪರಮ ಪೂಜ್ಯ ಶ್ರೀಗಳವರಿಗೆ ಸದ್ಭಕ್ತರಿಂದ ತುಲಾಭಾರ ಸೇವೆ ಪಾದಪೂಜೆ ಸುವರ್ಣ ಕೀರೀಟಧಾರಣೆ ನೆರೆವೇರಿಸಿದರು. ಪೂಜ್ಯಶ್ರೀಗಳು  ಆಗಮಿಸಿದ ಸದ್ಭಕ್ತರಿಗೆ ತಮ್ಮ ದಿವ್ಯ ಆಶೀರ್ವಚನದ ಮೂಲಕ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ ೩೫ನೆಯ  ಪುಣ್ಯಾರಾಧನೆಯ ಪ್ರಯಕ್ತ ಭಾಗಿಯಾಗಿರುವಂತ ಶ್ರೀಮಠದ ಸದ್ಬಕ್ತರೆ ಪುಣ್ಯವಂತರು ಏಕೆಂದರೆ ಶ್ರೀಮಠ ಭಕ್ತರ ಬದುಕಿನ ಕಾಮಧೇನು ಕಲ್ಪವೃಕ್ಷವಾಗಿದೆ ಶ್ರೀಮಠದಲ್ಲಿ ಆಗಮಿಸುವ ಭಕ್ತರ ಮನಸ್ಸು ಪರಿಶುದ್ಧವಾಗಿರಬೇಕು ಹೇಗೆಂದರೆ ಈ ಶ್ರೀಮಠಕ್ಕೆ ತಪಸ್ಸು ಮಾಡಲಿಕೆ ಬರಬೇಕು ವಿನಹ ತಪಾಸ್ಸು ಮಾಡಲಿಕೆ  ಬಂದರೆ ನಪಾಸ್ಸು ಆಗಿ ಹೊಗ್ತಾರೆ ಮುಂದೆ ಬರುವಂತ ದಿನಗಳು ನೈಸರ್ಗಿಕವಾಗಿ ಒಳ್ಳೆವು ಇದ್ದರೆ ಕೆಲವೊಂದಿಷ್ಟು ದಿನಗಳು ಕಠಿಣವಾಗಿದ್ದಾವೆ. ಸಮಾಜದಲ್ಲಿ ಸಂಶಯದಿಂದ ನೋಡುವ ದೃಷ್ಟಿ ಬದಲಾವನ್ನೆಯಾಗಬೇಕು ಮುಂದೆ ಸತ್ಯವಂತರಿಗೆ ಮಾತ್ರ ಕಾಲವಿದೆ ಕಳ್ಳರ ಮನೆ ಕಳ್ಳತನ ಆದವು ಎಚ್ಚರ, ರೈತರಿಗೆ ಈ ವರ್ಷ ಹರ್ಷದ ವರ್ಷವಾಗುತ್ತದೆ ಎಂದು ಪೂಜ್ಯ ಶ್ರೀಗಳವರು ತಮ್ಮ ದಿವ್ಯ ಭವಿಷ್ಯದ ಆಶೀರ್ವಚನ ನೀಡಿ ಆಶೀರ್ವದಿಸಿದರು. 


ಆಶೀರ್ವಚನ ನೀಡುತ್ತಿರುವ ಶ್ರೀಗಳು 

ಈ ಸಂದರ್ಭದಲ್ಲಿ ಬೇರೆ ಬೇರೆ ಕ್ಷೇತ್ರಗಳಿಂದ  ಆಗಮಿಸಿದ ಶರಣರು, ಸ್ವಾಮಿಜಿಗಳು, ಸಚಿವರು,  ಶಾಸಕರು,  ಆಸ್ಥಾನದ ಕಲಾ ಬಳಗದವರು, ಶ್ರೀ ಮಠದ ಕಾರ್ಯಕರ್ತರು, ಪಟ್ಟಣದ ಮುಖಂಡರು, ಹಾಗೂ ಬೇರೆ ಬೇರೆ ರಾಜ್ಯಗಳಿಂದ ಆಗಮಿಸಿದ ಶ್ರೀ ಮಠದ ಎಲ್ಲ ಭಕ್ತರು ಪಾಲ್ಗೊಂಡಿದ್ದರು.