ತೇರದಾಳ ವಾರ್ಡ ನಂ 23ರಲ್ಲಿ ಚರಂಡಿ ತುಂಬಿ ನಿಂತಿರುವುದನ್ನು ಪುರಸಭೆ ಮಾಜಿ ಸದಸ್ಯ ಪ್ರಭು ಗಸ್ತಿ ತೋರಿಸುತ್ತಿರುವುದು.
ತೇರದಾಳ : ಪಟ್ಟಣದ ವಾರ್ಡ ನಂ.23ರಲ್ಲಿನ ಚರಂಡಿ ನೀರು ಹೋಗಲು ದಾರಿಯಿಲ್ಲದೆ ಅಲ್ಲಿಯೇ ನಿಂತು ರಸ್ತೆಯ ಮೇಲೆ ಚರಂಡಿ ನೀರು ಹರಿದು ಬಂದು ಕೊಳಚೆ ಪ್ರದೇಶ ಕೊಳಚೆಯಾಗಿಯೇ ಉಳಿದುಕೊಂಡಿದೆ ಎಂದು ಪುರಸಭೆ ಮಾಜಿ ಸದಸ್ಯ ಪ್ರಭು ಗಸ್ತಿ ದೂರಿದ್ದಾರೆ.
ಕಲ್ಲಟ್ಟಿಯಿಂದ ಬರುವಂತ ಚರಂಡಿ ನೀರೆಲ್ಲ ಈ ಚರಂಡಿಯ ಮೂಲಕ ಹಾದು ಹೋಗಬೇಕು. ಆದರೆ ಚರಂಡಿ ನೀರಿಗೆ ಹೋಗಲು ದಾರಿಯಿಲ್ಲದೆ ಚರಂಡಿ ನೀರು ರಸ್ತೆಯ ಮೇಲೆ ನಿಂತಿದೆ. ಚರಂಡಿ ತುಂಬಿ ನಿಂತು ಹಲವು ದಿನಗಳಾದರೂ ಇದರ ಸ್ವಚ್ಚಗೆ ಪುರಸಭೆ ಪೌ ಕಾರ್ಮಿಕರು ಬರುತ್ತಿಲ್ಲ. ಬಂದರೂ ಸಹ ಮೇಲಿಂದ ಮೇಲೆ ತಗೆದು ಮಾತ್ರ ಹೋಗುತ್ತಾರೆ. ಚರಂಡಿಯನ್ನು ಸ್ವಚ್ಚಗೊಳಿಸುವಂತೆ ಹಾಗೂ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ,ಸಿದ್ದಪ್ಪಾ ಮಾತಾಳೆ ಹಾಗೂ ಪುರಸಭೆ ಕಿರಿಯ ಆರೋಗ್ಯ ಸಹಾಯಕ ಹನಮಂತ ಮಾಳಗಿ ಇವರನ್ನು ಕೇಳಿದರೆ ನೀವು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರನ್ನು ಹೋಗಿ ಕೇಳಿ ಎಂದು ಹೇಳುತ್ತಾರೆ. ಅಂದರೆ ಇವರಿಗೆ ತಮ್ಮ ಪಟ್ಟಣದ ಅಭಿವೃದ್ಧಿ ಮಾಡಲು ಆಗಲಿಲ್ಲ ಎಂದರೆ ಇವರು ತೇರದಾಳ ಪುರಸಭೆಯಲ್ಲಿ ಏಕೆ ಇರಬೇಕು. ಮತ್ತು ಪೌರ ಕಾರ್ಮಿಕನಾದ ಶಂಭು ಮಾಸ್ತಿ ಇವರು ಪುರಸಭೆಯ ಪೌರ ಕಾರ್ಮಿಕರ ಮೇಲೆ ಸುಪರವೈಜರ್ ಅಂತ ಹೇಳಿ ಕೆಲಸವಿಲ್ಲದೆ ಅಧಿಕಾರಿಗಳ ಹಿಂಬಾಲಕನಾಗಿದ್ದಾನೆ.
ತುಂಬಿದ ಚರಂಡಿ,
ಚರಂಡಿ ತುಂಬಿ ನೀರು ನಿಂತು ಚರಂಡಿ ನೀರಲ್ಲಿ ಸೊಳ್ಳೆಗಳು ಬೆಳೆದು ಡ್ಯೆಂಗ್ಯೂದಂತಹ ಭಯಾನಕ ರೋಗಗಳು ಹರಡಿ ದವಾಖಾನೆಗೆ ಸೇರಿದರು. ಚರಂಡಿ ಸುಮಾರು ನಾಲ್ಕೈದು ಅಡಯಷ್ಟು ಆಲವಾಗಿದ್ದು ಇದರಲ್ಲಿ ಚಿಕ್ಕ ಮಕ್ಕಳು ಬಿದ್ದರೆ ಅನಾಹುತವಾಗುವುದು ನಿಶ್ಚಿತ. ಈಗಾಗಲೇ ಕೆಲವು ಚಿಕ್ಕ ಚಿಕ್ಕ ಮಕ್ಕಳು ಬಿದ್ದು ಪ್ರಾಣಾಪಾಯದಿಂದ ಪರಾಗಿದ್ದಾರೆ. ಇದನ್ನು ಪುರಸಭೆ ಅಧಿಕಾರಿಗಳಿಗೆ ಹೇಳಿದರೆ ಇದನ್ನು ಹೋಗಿ ಶಾಸಕರಿಗೆ ಹೇಳಿ ಎಂದು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹೇಳುತ್ತಾರೆ. ವಾರ್ಡ ನಂ 23ಕೊಳಚೆ ಪ್ರದೇಶವಾಗಿದೆ. ಹಬ್ಬ ಹರಿದಿನ, ಜಾತ್ರೆಗಳಿದ್ದಾಗ ಹಾಗೂ ವಾರಕ್ಕೊಮ್ಮೆಯಾದರೂ ಇಲ್ಲಿ ಡಿಡಿಟಿ ಪೌವಡರನ್ನು ಹಾಕಬೇಕು ಆದರೆ ಇವರು ಒಂದು ದಿನವಾದರೂ ಪೌಡರನ್ನ ಹಾಕಿರುವುದಿಲ್ಲಿವೆಂದು ಆರೋಪಿಸಿದರು.
ಕಲ್ಲಟ್ಟಿಯಿಂದ ಬರುವ ಚರಂಡಿ ನೀರು ವಾರ್ಡ ನಂ 23ಕ್ಕೆ ಬರದಂತೆ ಮಾಡಲು ಭಾರತೀಯ ಸ್ಟೇಟ್ ಬ್ಯಾಂಕಿನ ಹತ್ತಿರ ರಸ್ತೆಗೆ ಅಡ್ಡಲಾಗಿ ಒಂದು ಅಥವಾ ಎರಡು ಪೈಪು ಹಾಕಿ ಕಲ್ಲಟ್ಟಿಯಿಂದ ಬರುತ್ತಿರುವ ಚರಂಡಿ ನೀರು ಮುಖ್ಯ ಚರಂಡಿ ಮೂಲಕ ಹಾಯ್ದು ಹೋಗುತ್ತದೆ. ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿ ಮುಖ್ಯ ಚರಂಡಿ ನಿರ್ಮಾಣ ಮಾಡಿದೆ. ಅದಕ್ಕೆ ಸೇರಿಸಿದರೆ ಪಟ್ಟಣದ ಕಲ್ಲಟ್ಟಿ ಹಾಗೂ ಪ್ರಭು ದೇವರ ಗಲ್ಲಿಯ ಚರಂಡಿ ನೀರು ಎಲ್ಲ ಆಕಡೆಗೆ ಹೋಗುತ್ತದೆ. ಈ ರೀತಿ ಮಾಡಿದರೆ ಚರಂಡಿ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಅವರು ಪತ್ರಿಕೆಗೆ ತಿಳಿಸಿದರು.
Social Plugin