ವರದಿ : ವಿಜಯ ವಾಜಂತ್ರಿ
ಜೀರಗೇರಿಯಲ್ಲಿ ಬಿದ್ದು ಮಹಿಳೆ ಸಾವು
ತೇರದಾಳ : ಪಟ್ಟಣದ ಜೀರಗೇರಿಯಲ್ಲಿ ಬಿದ್ದು ಮಹಿಳೆ ಸಾವನಪ್ಪಿದ ಘಟನೆ ತೇರದಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  ಶಿಲ್ಪಾ ಗಂಡ ವಿಕ್ರಮಕುಮಾರ ಹೊನವಾಡ(30)ಜೀರಗೇರಿಯಲ್ಲಿ ಬಿದ್ದು ಸಾವನಪ್ಪಿದ ದುರ್ದೈವಿ. ಗಂಡನ ಮನೆ ವಿಜಯಪೂರದಿಂದ ತವರು ಮನೆ ತೇರದಾಳಕ್ಕೆ ಬಂದಿದ್ದಳು. ಶುಕ್ರವಾರ ದಿವಸ ಜೀರಗೇರಿಯಲ್ಲಿ ಅಕಸ್ಮಿಕ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಇವಳಿಗೆ 2ವರ್ಷದ ಒಂದು ಮಗುವಿದೆ. ಪ್ರಕರಣ ತೇರದಾಳ ಪೋಲಿಸ್ ಠಾಣಾಧಿಕಾರಿ ವಿಜಯ ಕಾಂಬ
ಳೆ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದರೆ. ರಬಕವಿ-ಬನಹಟ್ಟಿ ತಾಲೂಕಾ ತಹಶೀಲ್ದಾರ ಪ್ರಶಾಂತ ಚನಗೊಂಡ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.