ತೇರದಾಳದ ಜೆವ್ಹಿ ಮಂಡಳದ ಪಾಲಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಗುರಿಯನ್ನು ಮುಟ್ಟಲು ಕಠಿಣ ಪರಿಶ್ರಮ ಪಡಬೇಕು
ತೇರದಾಳ : ಇಲ್ಲಿ ಪಡೆದುಕೊಳ್ಳುವ ಶಿಕ್ಷಣ ನಾಳೆ ನಿಮ್ಮ ಬದುಕಿಗೆ ಸ್ಪೂರ್ತಿಯಾಗಬಲ್ಲದು. ಶಿಕ್ಷಕರು ಕೊಡುವಂತ ಶಿಕ್ಷಣ ನಿಮ್ಮೇಲ್ಲರ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಜೀವನದಲ್ಲಿ ಒಂದು ಸಾಧನೆ ಮಾಡಿ ನಿಮ್ಮ ತಂದೆ ತಾಯಿಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ ತರುವಂತವರಾಗಿ ಎಂದು ಬಾಗಲಕೋಟೆಯ ಬಿವ್ಹಿವ್ಹಿ ಸಂಘದ ಪಾಲಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಎಂ.ಬಿ.ದೊಡಮನಿ ಹೇಳಿದರು.
  ಪಟ್ಟಣದ ಜೆವ್ಹಿ ಮಂಡಳದ ಪಾಲಟೆಕ್ನಿಕ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ನಮ್ಮ ವಿದ್ಯಾರ್ಥಿ ಜೀವನದಲ್ಲಿ ಮಹತ್ತರವಾದ ಗುರಿಯನ್ನು ಹೊಂದಿ ಆ ನಿರ್ಧಿಷ್ಟವಾದ ಗುರಿಯನ್ನು ತಲುಪಿದಾಗ ಮಾತ್ರ ವಿದ್ಯಾರ್ಥಿ ಜೀವನ ಸಾರ್ಥಕವಾಗುವುದು. ಗುರಿಯನ್ನು ಮುಟ್ಟಲು ಕಠಿಣ ಪರಿಶ್ರಮ ಪಡಬೇಕು. ಜೀವನದಲ್ಲಿ ಕಷ್ಟ ಪಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.
  ಜೆವ್ಹಿ ಮಂಡಳದ ಕಾರ್ಯದರ್ಶಿ ನಿಲೇಶ ದೇಸಾಯಿ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಉಪಾಧ್ಯಕ್ಷ ಬಿ.ಎಸ್.ಸಾವಂತನವರ ಅಧ್ಯಕ್ಷತೆ ವಹಿಸಿದ್ದರು. ಡಾ.ಜೆ.ಬಿ.ಆಲಗೂರ, ಡಾ.ಎಸ್.ಎ.ಕಾಗಿ, ಇ.ಎನ್.ದೇಸಾಯಿ, ಡಿ.ಬಿ.ಪಾಟೀಲ, ಶ್ರೀಮತಿ ಎಸ್.ಎನ್.ಹೆಬ್ಬಾಳೆ, ವ್ಹಿ.ಎಸ್.ಯಳಗೂಡ, ಡಿ.ಆರ್.ಖವಟಕೊಪ್ಪ, ಎಸ್.ಎಸ್.ಕುಳ್ಳಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿದ್ದರು. 
  ಪ್ರಾಚಾರ್ಯ ವಿಜಯ ಶಿಗ್ಲಿ ಸ್ವಾಗತಿಸಿದರು. ಶಿಕ್ಷಕಿ ಲಕ್ಷ್ಮಿ ಪಾಟೀಲ ನಿರೂಪಿಸಿದರು.