ರಬಕವಿ-ಬನಹಟ್ಟಿ,ಡಿ5: ಸ್ವಪಕ್ಷದ ಮಹಿಳೆ ಮೇಲೆ ದೈಹಿಕ ನಿಂದನೆ ಮಾಡಿ ಮತದಾನದ ಹಕ್ಕು ಕಸಿದು ಕೊನೆಗೆ ಗರ್ಭಪಾತಕ್ಕೆ ಕಾರಣರಾದ ಶಾಸಕ ಸಿದ್ದು ಸವದಿ ಸೇರಿದಂತೆ ಬಿಜೆಪಿ ಮುಖಂಡರು ಮಹಿಳೆ ಮೇಲೆ ಅಕ್ಷರಸಹ ಮೃಗಗಳಂತೆ ವರ್ತಿಸಿದ್ದು ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಬನಹಟ್ಟಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ರಕ್ಷಣೆ ಖಂಡನೀಯ, ಬಿಜೆಪಿಯಲ್ಲಿ ಮಹಿಳೆಗೆ ಗೌರವವಿಲ್ಲ. ರಾಮರಾಜ್ಯವೆಲ್ಲಿದೆ? ರಕ್ಷಣೆ ಎಲ್ಲಿದೆ? ದಾಖಲೆಗಳಿಂದ ನೋಡಿ ಬಂದಂತೆ ಗರ್ಭೀಣಿಯಾಗಿರುವ ಮಹಿಳೆಯಾದ ಮಹಾಲಿಂಗಪೂರ ಪುರಸಭೆ ಸದಸ್ಯೆ ಚಾಂದನಿ ನಾಯಕರಿಗೆ ಗರ್ಭಪಾತವಾಗುವಲ್ಲಿ ಓರ್ವ ಪ್ರತಿನಿಧಿಯಿದ್ದರೂ ಯಾವದೇ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿರುವದು ಎಲ್ಲರಿಗೂ ತಿಳಿದ ವಿಷಯ. ಇದಕ್ಕೆ ಸಂಬಂಧ ಸದನದ ಒಳಗೂ ಹೊರಗೂ ಹೋರಾಟ ನ್ಯಾಯ ದೊರಕುವವರೆಗೂ ನಿರಂತರವೆಂದು ಉಮಾಶ್ರೀ ಹೇಳಿದರು.
Social Plugin