ರದಾಳ ಪಟ್ಟಣದ ವಾರ್ಡ ನಂ 1ರಲ್ಲಿ ಎಸ್‍ಎಫ್‍ಸಿ ಯೋಜನೆಯಡಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿದರು.
ವರದಿ : ವಿಜಯ ವಾಜಂತ್ರಿ
ತೇರದಾಳ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ
ತೇರದಾಳ : ಪಟ್ಟಣದ ವಿವಿಧ ವಾರ್ಡಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ಕೈಮಗ್ಗ ಅಭಿವೃದ್ಧಿ ನಿಗಮ ಅಧ್ಯಕ್ಷ,ಬಿಡಿಸಿಸಿ ಬ್ಯಾಂಕ ನಿರ್ದೇಶಕ, ಶಾಸಕ ಸಿದ್ದು ಸವದಿ ನೆರವೇರಿಸಿದರು.
2018-19ನೇ ಸಾಲಿನ ಎಸ್‍ಎಫ್‍ಸಿ ಮುಕ್ತ ನಿಧಿ ಅನುದಾನದಡಿಯಲ್ಲಿ ವಾರ್ಡ ನಂ1 ರಲ್ಲಿ ಬಸವೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆವರೆಗೆ 2ಲಕ್ಷ ರೂ. ಅನುದಾನದಡಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಹಾಗೂ 2018-19ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿಯಲ್ಲಿ 5ಲಕ್ಷ ರೂ. ಅನುದಾನದಲ್ಲಿ ಪಿವ್ಹಿಸಿ ಪೈಪ್‍ಲೈನ್ ಅಳವಡಿಕೆಗೆ ಭೂಮಿ ಪೂಜೆ ನೆರವೇರಿಸಿದರು. ಮತ್ತು ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 43ಲಕ್ಷ ರೂ.ಗಳ ಅನುದಾನದಲ್ಲಿ ಪಟ್ಟಣದ ಕೊಳಗೇರಿ ಪ್ರದೇಶ ದೇಸಾರ ಬಾವಿ ಹಾಗೂ ದಾಸರಮಡ್ಡಿಯಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ, ಕಿರುನೀರು ಸರಬರಾಜು ಕುರಿತು ಮೂಲಸೌಕರ್ಯ ಅಭಿವೃದ್ಧಿ ಪಡಿಸಿವದಕ್ಕಾಗಿ ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಸದಾಶಿವ ಹೊಸಮನಿ, ಜಿನ್ನಪ್ಪ ಸವದತ್ತಿ, ವಿನಾಯಕ ಬಂಕಾಪೂರ, ಕಾಶೀನಾಥ ರಾಠೋಡ, ಸತ್ಯಪ್ಪ ಚವಜ, ಕೇದಾರಿ ಪಾಟೀಲ, ಶಂಕರ ಕುಂಬಾರ, ಸಂತೋಷ ಅಕ್ಕೆನ್ನವರ ಸೇರಿದಂತೆ ಪುರಸಭೆ ಸದಸ್ಯರು, ಭಾಜಪ ಪಕ್ಷದ ಕಾರ್ಯಕರ್ತರು ಇದ್ದರು.
Social Plugin