ರಬಕವಿ-ಬನಹಟ್ಟಿ ನಗರಸಭೆ ವತಿಯಿಂದ ಪರಿಶಿಷ್ಠ ಪಂಗಡದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿಯ ಪ್ರಮಾಣ ಪತ್ರ ಸಲ್ಲಿಸಲಾಯಿತು.
ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ
ರಬಕವಿ-ಬನಹಟ್ಟಿ,ನ1: ಮಹಿಳೆಯರು ಸಮಾಜದಲ್ಲಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದಾರೆ. ನಗರಸಭೆಯಿಂದ ಸಾಮಾಜಿಕ ಹಾಗು ಆರ್ಥಿಕವಾಗಿ ಮಹಿಳೆಯರು ಸಬಲರಾಗುವಂತೆ ಸಹಾಯ ಹಸ್ತ ನೀಡುತ್ತಿದೆ. ಇದರ ಸದುಪಯೋಗಪಡೆದುಕೊಂಡು ಸ್ವಾವಲಂಬಿಗಳಾಗಬೇಕೆಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ನಗರದ ಸುಂಕದ ಬಿಲ್ಡಿಂಗ್‍ನಲ್ಲಿ ನಗರಸಭೆಯಿಂದ ಪರಿಶಿಷ್ಠ ಪಂಗಡದಿಂದ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಹಲವಾರು ಸೌಲಭ್ಯಗಳನ್ನು ಪಡೆದುಕೊಂಡು ಕೌಶಲ್ಯ ಹೊಂದುವಲ್ಲಿ ಮಹಿಳೆಯರು ಮುಂದಾಗಬೇಕೆಂದರು.
ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ವಿವಿಧ ಕೌಶಲ್ಯಗಳನ್ನು ಪರಿಶಿಷ್ಠ ಪಂಗಡದವರಿಗೆ ವಿಶೇಷ ಅನುದಾನದಡಿ ಸೌಲಭ್ಯ ಕಲ್ಪಿಸುವಲ್ಲಿ ನಗರಸಭೆ ಮುಂದಾಗಿದೆ. ಇವುಗಳ ಸದುಪಯೋಗದೊಂದಿಗೆ ಪ್ರತಿಯೊಬ್ಬರೂ ಉದ್ಯೋಗ ಸೃಷ್ಟಿಗೆ ಕಾರಣರಾಗಬೇಕೆಂದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ನಗರಸಭಾ ಸದಸ್ಯೆ ವಿದ್ಯಾ ಪ್ರವೀಣ ದಭಾಡಿ, ಶಂಕರ ಮಲ್ಲಣ್ಣವರ, ಪೌರಾಯುಕ್ತ ಶ್ರೀನಿವಾಸ ಜಾಧವ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ. ಶರಣಪ್ಪನವರ ಉಪಸ್ಥಿತರಿದ್ದರು.
Social Plugin