ಬನಹಟ್ಟಿಯ ಬಸವೇಶ್ವರ ಸಮುದಾಯ ಭವನದಲ್ಲಿ ಜರುಗಿದ ಲಿಂಗಾಯತ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿದ ಶ್ರೀಗಳು.
ಶಿಕ್ಷಣದಿಂದ ಸಮುದಾಯದ ಪ್ರಗತಿ ಸುಲಭ ಸಾಧ್ಯ : ಅಪೂರ್ವ ಬಿದರಿ.
ರಬಕವಿ-ಬನಹಟ್ಟಿ,ಡಿ1: ಬಣಜಿಗ ಸಮಾಜ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡು ಸ್ಥಿತಿವಂತ ಸಮಾಜ ಎಂಬ ಭಾವನೆ ಅನೇಕ ಸಮುದಾಯಗಳಲ್ಲಿದೆ. ಆದರೆ ಸಮಾಜದ ಹಲವಾರು ಕುಟುಂಬಗಳು ಆರ್ಥಿಕವಾಗಿ ತೊಂದರೆಯಲ್ಲಿರುವುದು ಕಾಣಬಹುದು.ಕೇವಲ ವ್ಯಾಪಾರ ವೃತ್ತಿಯಿಂದ ಸಮಾಜದ ಸರ್ವಾಂಗೀಣ ಪ್ರಗತಿ ಸಾಧ್ಯವಿಲ್ಲ.ನಮ್ಮ ಸಮಾಜದ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡಿಕೆ ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿರುತ್ತದೆ ಎಂಬುದನ್ನು ಮರೆಯಬಾರದು.ಶಿಕ್ಷಣದಿಂದ ಮಾತ್ರ ಸಮುದಾಯದ ಪ್ರಗತಿ ಸುಲಭ ಸಾಧ್ಯವಾಗುತ್ತದೆ ಎಂದು ನೂತನ ಕೆಎಎಸ್ ಅದಿಕಾರಿ ಅಪೂರ್ವ ರಾಜಶೇಖರ ಬಿದರಿ ನುಡಿದರು.
ಬನಹಟ್ಟಿಯ ಶ್ರೀಬಸವೇಶ್ವರ ಸಮುದಾಯ ಭವನದಲ್ಲಿ ಜರುಗಿದ ಲಿಂಗಾಯತ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ನೀಡಿದ ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಅವರು ಸುಶಿಕ್ಷಿತ ಪರಂಪರೆಯ ಬಣಜಿಗ ಸಮಾಜದಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಬೇಕೆಂದರು.
ಬನಹಟ್ಟಿಯ ಹೆಸರಾಂತ ಬಾಲಿವುಡ್ ಛಾಯಾಗ್ರಾಹಕ ಈರಣ್ಣಾ ಬಿದರಿ, ಐಎಎಸ್ ಪರೀಕ್ಷೆಯಲ್ಲಿ ಸಾಧನೆ ತೋರಿದ ಆನಂದ ಕಲಾದಗಿ,ಸೈನಿಕರಾದ ಸಂತೋಷ ಕೊಳಲಗಿ,ಶಿವಯೋಗಿ ಬಂದಿ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 11 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜದ ಹಿರಿಯರಿಗೆ ಸನ್ಮಾನ ಮಾಡಲಾಯಿತು.
ದಿವ್ಯ ಸಾನಿಧ್ಯವನ್ನು ಮಹಾಂತಯ್ಯ ಹಿರೇಮಠ ವಹಿಸಿದ್ದರು.ಅಧ್ಯಕ್ಷತೆಯನ್ನು ಈಶ್ವರಪ್ಪ ಬಿದರಿ ವಹಿಸಿದ್ದರು. ಖುಷಿ ಮತ್ತು ಕೃತಿ ಕಲ್ಯಾಣಿ ವಚನಗಳನ್ನು ಪಠಿಸಿದರು. ಪ್ರಸನ್ನಾಕ್ಷಿ ಬಿದರಿ, ಹರಿಣಿ ಪಟ್ಟಣಶೆಟ್ಟಿ ಸ್ವಾಗತ ಗೀತೆ ಹಾಡಿದರು. ಆದಿತಿ ಬಿದರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಹಿರಿಯ ಸಾಹಿತಿ ಮಲ್ಲಿಕಾರ್ಜುನ ಹುಲಗಬಾಳಿ, ಪ್ರಕಾಶ ಬಂದಿ, ಮಹಾಶಾಂತ ಶೆಟ್ಟಿ ಸೇರಿದಂತೆ ಅನೇಕರಿದ್ದರು.
Social Plugin